ಎಂಪಿ ಆಧ್ಯಾತ್ಮಿಕ ಅಂಗಳ-ಪಕ್ಷವೆಂದರೇನು* ?

32
Share

 

ಕೃಪೆ ಆದ್ಯಾತ್ಮಿಕ ಬಳಗ –

*ಎಂಪಿ ಆಧ್ಯಾತ್ಮಿಕ ಅಂಗಳ-ಪಕ್ಷವೆಂದರೇನು* ?

ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯ ತನಕ 15 ದಿನಗಳ ಈ ಕಾಲವನ್ನು “ಪಿತೃ ಪಕ್ಷ” “ಪಕ್ಷಮಾಸ” ಎನ್ನುತ್ತಾರೆ.
ಯಾವ ಶ್ರಾದ್ಧಾಧಿಕಾರಿಗಳು ಈ ಅವಧಿಯಲ್ಲಿ ಶ್ರಾದ್ಧವನ್ನು ಮಾಡುತ್ತಾರೋ ಅವರಿಗೆ ಪಿತೃಗಳು ಜ್ಞಾನ, ಭಕ್ತಿ, ಸಂಪತ್ತು ಮೊದಲಾದ ಆಶೀರ್ವಾದ ಮಾಡುತ್ತಾರೆ. ಮಾಡದವರಿಗೆ ಶಾಪವನ್ನು ನೀಡುತ್ತಾರೆ. ಪಿತೃಗಳ ಶಾಪದಿಂದ ವಂಶಾಭಿವೃದ್ಧಿ ಆಗುವುದಿಲ್ಲ.
ಮಹಾಭಾರತ ಪುರಾಣದ ಪ್ರಕಾರ ಕರ್ಣ ಯುದ್ಧದಲ್ಲಿ ಹತನಾದಾಗಿ, ಸ್ವರ್ಗ ಸೇರಿದಾಗ ಅವನಿಗೆ ಬಂಗಾರ ಮತ್ತು ಆಭರಣಗಳನ್ನು ಆಹಾರವಾಗಿ ನೀಡಲಾಯಿತು. ಆದರೆ ಕರ್ಣನಿಗೆ ಬೇಕಾಗಿದ್ದು ನಿಜವಾದ ಆಹಾರ. ಇದರಿಂದ ಬೇಸತ್ತ ಕರ್ಣ ಇಂದ್ರನಲ್ಲಿ ಕೇಳುತ್ತಾನೆ. ಆಗ ಇಂದ್ರ ಹೇಳುತ್ತಾನೆ “ನೀನು ನಿನ್ನ ಪೂರ್ವಿಕರಿಗೆ ಅವರ ಶ್ರಾದ್ಧದಲ್ಲಿ ಅನ್ನವನ್ನು ದಾನವಾಗಿ ನೀಡಿಲ್ಲ. ಜೀವಮಾನ ಪೂರ್ತಿ ಬೇಕಾದಷ್ಟು ಬಂಗಾರಾದಿ ಆಭರಣಗಳನ್ನು ದಾನವಾಗಿ ನೀಡಿದ್ದೇ. ಅದಕ್ಕಾಗಿ ನಿನಗೆ ನಿಜವಾದ ಆಹಾರ ದೊರಕುತ್ತಿಲ್ಲ”. ತನಗೆ ತನ್ನ ಪೂರ್ವಜರ ಬಗ್ಗೆ ಏನೂ ಗೊತ್ತಿಲ್ಲದಿದ್ದರಿಂದ ಯಾವ ಶ್ರಾದ್ಧವನ್ನು ಮಾಡಲಾಗಿಲ್ಲ ಎಂದು ಕರ್ಣ ಹೇಳುತ್ತಾನೆ. ಇದಕ್ಕಾಗಿ ಅವನಿಗೆ ವಿಶೇಷವಾಗಿ ಪರಿಹಾರ ರೂಪವಾಗಿ ೧೫ ದಿನಗಳ ಕಾಲ ಭೂಲೋಕಕ್ಕೆ ಹೋಗಿ ಶ್ರಾದ್ಧ ಮಾಡಿ ಅವರ ನೆನಪಿನಲ್ಲಿ ಆಹಾರವನ್ನು ದಾನ ಮಾಡಲು ಅನುಮತಿ ನೀಡುತ್ತಾರೆ. ಆ ಕಾಲಕ್ಕೆ ಪಕ್ಷಮಾಸವೆನ್ನುತ್ತಾರೆ.

*ಮಹಾಲಯ* ಅಂದರೆ – “ಮಹಾ” – ದೊಡ್ಡ “ಲಯ” – ನಾಶ – ಸಮುದ್ರ ಮಥನ ಸಂದರ್ಭದಲ್ಲಿ ಬಹಳ ಋಷಿಗಳು ಮತ್ತು ದೇವತೆಗಳು ದೈತ್ಯರಿಂದ ಸಂಹರಿಸಲ್ಪಟ್ಟರು. ಈ ಋಷಿಗಳು ನಮ್ಮ ಪೂರ್ವಜರಾಗಿದ್ದುದರಿಂದ ಅವರ ನೆನಪಿನಲ್ಲಿ ಮಹಾಲಯ ಪಕ್ಷವವನ್ನು ಆಚರಿಸುತ್ತೇವೆ. ಅದುವೇ ಸರ್ವಪಿತೃ ಅಮಾವಾಸ್ಯೆ.

*ಪಿತೃಗಳಿಗೆ ತಿಲ ತರ್ಪಣವೇಕೆ* ?
ಎಳ್ಳುಗಳ ಅಭಿಮಾನಿ ದೇವತೆ ಸೋಮ (ಚಂದ್ರ). ಅವು ಅವನ ವೃದ್ಧಿಗೂ ಕಾರಾಣವಾಗಿವೆ. ಅವನೇ ಪಿತೃಗಳಿಗೆ ಆಧಾರ. ಪಿತೃಲೋಕ ಚಂದ್ರನ ಮೇಲ್ಭಾಗದಲ್ಲಿದೆ. ಚಂದ್ರನ ಕಲೆಗಳೆ ಪಿತೃಗಳಿಗೆ ಆಹಾರ. ಆದ್ದರಿಂದ ಚಂದ್ರನಿಗೆ ಪ್ರಿಯವಾದ ಎಳ್ಳು ಪಿತೃದೇವತೆಗಳಿಗೂ ಪ್ರಿಯವಾಗಿವೆ. ಭೂಮಿಯಲ್ಲಿ ಸೂರ್ಯನ ಚಲನೆಗೆ ಅನುಗುಣವಾಗಿ ರಾತ್ರಿ ಹಗಲಾಗುವಂತೆ ಪಿತೃಲೋಕದಲ್ಲೂ ಸೂರ್ಯನ ಚಲನೆಗೆ ಕಾರಣವಾಗಿವೆ. ಭೂಮಿಯಲ್ಲಿ 24 ಘಂಟೆಗೆ ಒಂದು ದಿನವಾದರೆ ಚಂದ್ರನಲ್ಲಿ 15 ದಿನ ಹಗಲು 15 ದಿನ ರಾತ್ರಿಯಾದರೆ ೧ ದಿನವಾಗುವುದು. ಶುಕ್ಲಪಕ್ಷದ ಅಷ್ಟಮಿಯಿಂದ ಕೃಷ್ನಪಕ್ಷದ ಅಷ್ಟಮಿಯವತೆಗೆ ಪಿತೃಗಳಿಗೆ ರಾತ್ರಿಯಾದರೆ, ಕೃಷ್ಣಪಕ್ಷದ ಅಷ್ಟಮಿಯಿಂದ ಶುಕ್ಲ ಪಕ್ಷದ ಅಷ್ಟಮಿಯವರೆಗೆ ಹಗಲು. ಅಂದರೆ ನಮ್ಮ ಒಂದು ತಿಂಗಳು ಪಿತೃಗಳಿಗೆ ಒಂದು ದಿನ. ಆಗ ಪಿತೃಗಳಿಗೆ ಅಮಾವಾಸ್ಯೆ ನಡು ಮಧ್ಯಾಹ್ನವೆನಿಸುತ್ತದೆ. ಆದ್ದರಿಂದ ಅಮಾವಾಸ್ಯೆಯಂದು ಪಿತೃಗಳಿಗೆ ತಿಲ ತರ್ಪಣಕ್ಕೆ ಮಹತ್ವ. ದಕ್ಷಿಣಾಯಣದ ಕನ್ಯಾಮಾಸದಲ್ಲಿ ಸೂರ್ಯನು ಭೂಮಿಗೆ ಅತಿ ಸಮೀಪದಲ್ಲಿರುವುದರಿಂದ ಪಿತೃಪಕ್ಷದಲ್ಲಿ ತರ್ಪಣ ಶ್ರಾದ್ಧಕ್ಕೆ ಹೆಚ್ಚಿನ ಮಹತ್ವವಿದೆ.

Q – Who has to do paksha? ಯಾರು ಪಕ್ಷವನ್ನು ಮಾಡಬೇಕು ?

Answer – All those who have lost their fathers must do Paksha. ಯಾರಿಗೆ ತಂದೆಯಿಲ್ಲವೋ ಅವರೆಲ್ಲ ಮಾಡಬೇಕು. ತಾಯಿ ಮೃತರಾಗಿದ್ದು ತಂದೆ ಜೀವಂತವಿದ್ದರೆ ಅವರು ಪಕ್ಷವನ್ನು ಮಾಡುವಂತಿಲ್ಲ. ತಾಯಿಗಾಗಿ ಅವಿಧವಾನವಮಿ ಮಾಡಬೇಕು.

*ಪ್ರಶ್ನೆ : ತಂದೆ ಸತ್ತ ವರ್ಷದಲ್ಲಿ ಪಕ್ಷವನ್ನು ಆಚರಿಸಬೇಕೆ* ?

ಉತ್ತರ : ಇಲ್ಲ. ತಂದೆ ಸತ್ತ ಮೇಲೆ ಒಂದು ವರ್ಷದ ಪರ್ಯಂತ ಅವರಿಗೆ ಪಕ್ಷವನ್ನು ಮಾಡುವಂತಿಲ್ಲ. ಎರಡನೇ ವರ್ಷದಿಂದ ಆಚರಿಸಬೇಕು.

Q – Where Paksha/Shradha to be done? ಪಕ್ಷವನ್ನು ಎಲ್ಲಿ ಮಾಡಬೇಕು ?
Answser – ಪಿತೃ ಕಾರ್ಯವನ್ನು ಯಾವುದಾದರೂ ಕ್ಷೇತ್ರದಲ್ಲಿ ಹೋಗಿ ಮಾಡುವುದು ಉತ್ತಮ. ಅಥವಾ ನಮ್ಮ ಮನೆಗಳಲ್ಲೇ ಮಾಡುವುದು. ಈಗಿನ ಕಾಲದಲ್ಲಿ ಮನೆಗಳಲ್ಲಿ ಮಾಡುವುದು ಮಡಿ ಮೈಲಿಗೆ ದೃಷ್ಟಿಯಿಂದ ಅನಾನುಕೂಲವಿರುವವರು ಸಮೀಪದ ಯಾವುದಾದರೂ ರಾಯರ ಮಠಗಳಲ್ಲಿ ಅಥವಾ ಅನುಕೂಲವಿರುವಲ್ಲಿ ಮಾಡಬಹುದು. It is better to do it in a kshetra. If not possible atleast in your house. Now-a-days, because of non availability of requirements for Shradha in house, (eg – Fuel, water) it can be done in Rayara Mutts also.

*Q – What are the Items required for Paksha ? ಪಕ್ಷವನ್ನು ಆಚರಿಸಲು ಬೇಕಾದ ಪದಾರ್ಥಗಳು ಯಾವುವು* ?

ಉತ್ತರ : ಅಗ್ಗಿಷ್ಟಿಕೆ, ಇದ್ದಿಲು/ಸೌದೆ, ದರ್ಬೆ, ಅಕ್ಕಿ, ಹರಿನಿವೇದಿತ, ರಮಾ ನಿವೇದಿತವಾದ ಅನ್ನ, ತುಪ್ಪ, ಮೊಸರು, ಜೇನುತುಪ್ಪ, ಎಳ್ಳು, ನೀರು, ತುಳಸಿ ದಳ, ಪವಿತ್ರ, ವಿಷ್ಣುಪಾದ, ಬಾಳೆ ಎಲೆ, ಹಣ್ಣುಗಳು, ಪಂಚಪಾತ್ರೆ, ಉದ್ಧರಣೆ, ವಿಳ್ಳೆದೆಲೆ, ಅಡಿಕೆ, ಯಥಾಶಕ್ತಿ ದಕ್ಷಿಣೆ, ಯಜ್ಞೋಪವೀತ, ಗೋಪೀಚಂದನ,

(ಶ್ರಾದ್ಧ ಕಾಲದಲ್ಲಿ ಅನವಶ್ಯಕ ಮಾತು ಬೇಡ, ಕೋಪತಾಪಗಳಿಗೆ ಅವಕಾಶ ಕೊಡದಿರಿ)

Aggistike, Charcoal, Dharbe (Kusa grass), plain rice, Rice (nivedita annam), ghee, curds, honey, milk, Black Sesame, water, Tulsi Leaves, Pavitra (Made of darbha), Vishnu padam (Foot print of Sri Maha Vishnu), Plantain Leaves, Fruits, Panchapatre, Uddrane, Villedele, Adike, Dakshine., yajnOpaveeta, gopichandana, donne. During Shraddha time, better avoid conversation with other relations, mobile calls.

*Steps for Shraddha/Paksha* –
Achamana, Pavitradharana, punarachamana, Yavodaka, tilodaka, Amantrana for darbe brahmanaru, paada prakshalana, Asana, arghya, antaryaami pooja, Avaahana, gandha, mandala, paatraasadana, darbe brahmana bhojana, pinda pradana, pinda pooja, bhojana niyama, pinda visarjana, brahmana visarjana, brahmana suvasini bhoori bhojana sankalpa, brahmana bhojana, taking ashirvaada from brahmanaas, yajamaana bhojana, telling krishnarpana.

Mahalaya Paksha

*Specified dates for Paksha* – ಪಕ್ಷವನ್ನು ಎಂದು ಆಚರಿಸಬೇಕು ?
ಉತ್ತರ: ಭಾದ್ರಪದ ಮಾಸದ ಕೃಷ್ಣ ಪಕ್ಷದ ಪಾಡ್ಯದಿಂದ ಅಮಾವಾಸ್ಯೆವರೆಗೆ ಪಕ್ಷವನ್ನು ಅನುಕೂಲವಿರುವವರು ಪ್ರತಿನಿತ್ಯ ಅಥವಾ ಕನಿಷ್ಟ ಒಂದು ದಿನ ಮಾಡತಕ್ಕದ್ದು. ಒಂದು ದಿನ ಮಾಡುವವರು ಸಾಮಾನ್ಯವಾಗಿ ತಮ್ಮ ತಂದೆಯ ನಿಧನರಾದ ದಿನದಂದು ಮಾಡುವ ಸಂಪ್ರದಾಯ. ಉದಾಹರಣೆಗೆ: ತಂದೆ ಶುಕ್ಲ ಪಕ್ಷದ ದ್ವಿತೀಯ ಅಥವಾ ಕೃಷ್ಣ ಪಕ್ಷದ ದ್ವಿತೀಯಾದಂದು ಮೃತರಾಗಿದ್ದಾರೆ ಪಕ್ಷ ಮಾಸದ ದ್ವಿತೀಯಾದಂದು ಮಾಡತಕ್ಕದ್ದು ಅಥವಾ ಆ ಹದಿನೈದು ದಿನಗಳಲ್ಲಿ ನವಮಿ, ಏಕಾದಶಿ, ದ್ವಾದಶಿ, ಚತುರ್ದಶಿ ದಿನ ಬಿಟ್ಟು ಉಳಿದ ದಿನ ಮಾಡಬಹುದು. ಅಕಸ್ಮಾತ್ ತಂದೆ ನವಮಿ, ಏಕಾದಶಿ, ದ್ವಾದಶಿ ಅಥವಾ ಚತುರ್ದಶಿ ದಿನದಂದು ಮೃತರಾಗಿದ್ದರೆ ಕೂಡ ಈ ನಾಲ್ಕು ದಿನಗಳ ಬಿಟ್ಟು ಬೇರೆ ದಿನಗಳಲ್ಲಿ ಮಾಡಬೇಕು.

ಅಕಸ್ಮಾತ್ ಪಕ್ಷಮಾಸದಲ್ಲಿ ಅನಾನುಕೂಲವಿರುವವರು ತುಲಾ ಮಾಸದಲ್ಲಿ ಅಂದರೆ ಸೂರ್ಯ ತುಲಾ ರಾಶಿಯಲ್ಲಿ ಇರುವ ಸಮಯದಲ್ಲಿ ಮಾಡುವ ಸಂಪ್ರದಾಯ ಇದೆ.

Actually Paksha has to be done on all the 15 days. (On Ekadashi without rice). Atleast Tila tarpana must be given on all the days during paksha maasa. If one is not able to do paksha on all the days, they have to select a day, usually the day of his father’s death day. Suppose his father has died on Dwiteeya, then on Dwiteeya day itself shraddha to be done. If it is inconvenient for him to do it on Dwiteeya, then he can do it on any day other day except the following days – Navami (meant for Avidhava – for those have died as muthaide), Ekadashi (Upavasa), Dwadashi (meant for Yathigalu), Chaturdashi (Ghata Chaturdashi – meant for accident victims). They can do it on other days. For those who have died on Pournami day, Paksha to be done paadya or other convenient day.

If during this entire period, it is not possible to do the paksha, then you can do it during Thula maasam i.e. When Surya enters Tula rashi

NO MAHALAYA SHRADDHA DURING THE MRUTHA VARSHA – Until the completion of one year of the death, No Mahalaya shradda to be performed for the deceased.
*ನರಹರಿ ಸುಮಧ್ವ*

*!! ಶ್ರೀಕೃಷ್ಣಾರ್ಪಣಮಸ್ತು !!*


Share