ಎಂಪಿ ಆಧ್ಯಾತ್ಮಿಕ ಅಂಗಳ-ಭಕ್ತಿ ಎಂದರೆ ಏನು..?

24
Share

ಕೃಪೆ ಆಧ್ಯಾತ್ಮಿಕ ವಿಚಾರ ಬಳಗ

*ಭಕ್ತಿ ಎಂದರೆ ಏನು..?*

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಚತಿ.

ಶ್ರೀಮದ್ ಭಗವದ್ಗೀತೆಯ 9ನೇ ಅಧ್ಯಾಯದ ಈ ಶ್ಲೋಕ ಬಹಳ ಅರ್ಥಗರ್ಭಿತವಾಗಿದೆ.

ಪರಿಪೂರ್ಣನಾದ ಭಗವಂತ ಸಾಮಾನ್ಯರಾದ ನಮ್ಮಿಂದ ಏನನ್ನು ಅಪೇಕ್ಷೆ ಮಾಡುವುದಿಲ್ಲ, ಹಾಗೂ ನಾವು ಭಗವಂತನಿಗೆ ಏನು ಕೊಡಲಿಕ್ಕೆ ಸಾಧ್ಯವಿಲ್ಲ, ಎಲ್ಲ ಸೃಷ್ಟಿ ಆತನದೇ, ಕೆರೆಯ ನೀರು ಕೆರೆಗೆ ಚೆಲ್ಲಿ ಎಂಬಂತಿದೆ ನಮ್ಮ ಎಲ್ಲ ಸಮರ್ಪಣೆಗಳು,

ಆತನಿಗೆ ನಾವೇನು ಕೊಡಬಲ್ಲೆವು ಭಗವಂತ ಹೇಳಿದ್ದಾನೆ ನನಗೆ ಕೇವಲ ನೀವು ಭಕ್ತಿಯಿಂದ ಪತ್ರ, ಪುಷ್ಪ, ಫಲ, ಏನು ಇಲ್ಲದಿದ್ದರೆ ಸ್ವಲ್ಪ ನೀರು ಭಕ್ತಿಯಿಂದ ಕೊಡಿ ಎಂದು ಹೇಳಿದ್ದಾನೆ,

ಇಲ್ಲಿ ನಾವು ಗಮನಿಸಬೇಕಾದದ್ದು ಭಕ್ತಿ ಎಂದು ಹೇಳಿದ್ದು, ಎಲೆ ಇಂದ ಹೂವ ಹೂವಿನಿಂದ ಹಣ್ಣು ಹಣ್ಣು ಪಕ್ವವಾದಲ್ಲಿ ಅದರ ಲಾಭ ಮತ್ತು ಉಪಯೋಗ, ನಾವು ಕೂಡ ಭಕ್ತಿ ಮಾರ್ಗದಲ್ಲಿ ಇದೇ ಕ್ರಮವಾಗಿ ನಡೆಯಬೇಕು, ಪರಿಪೂರ್ಣ ಮಾನಸಿಕ ಸ್ಥಿತಿ ಹೊಂದಬೇಕು.

ಭಕ್ತಿ ಅಂದ ತಕ್ಷಣ ಬಹಳ ಜನರ ತಲೆಯಲ್ಲಿ ಬರುವುದು ಭಜನೆ, ದೇವರು ಪೂಜೆ, ಪ್ರತಿದಿನ ದೇವಾಲಯಗಳಿಗೆ ಹೋಗಿ ಪ್ರದಕ್ಷಣೆ ಹಾಕುವುದು, ನಾಮಸ್ಮರಣೆ, ಅಲ್ಲಿ ಪ್ರವಚನ ಕೇಳುವುದು, ಮನೆಯಲ್ಲಿ ಮಡಿ ಆಚರಿಸುತ್ತಾ ಪೂಜೆಗಳನ್ನು ಮಾಡುತ್ತಾ ಇರುವುದು, ದೊಡ್ಡ ದೇವರ ಪೂಜೆ, ಸಣ್ಣ ದೇವರ ಪೂಜೆ, ಉತ್ಸವಗಳನ್ನು ಆಚರಿಸುತ್ತಾ ವಿಪರೀತಿ ತುಪ್ಪದ ಎಣ್ಣೆಯ ದೀಪಗಳನ್ನು ಹಚ್ಚುವುದು, ಲಕ್ಷ ಬಿಲ್ವಾರ್ಚನೆ, ಕೋಟಿ ಪುಷ್ಪಾರ್ಚನೆ, ಸಾಮೂಹಿಕ ಪಾರಾಯಣಗಳನ್ನು ಮಾಡುವುದು, ಯಾರಿಗೂ ಹಾಗೂ ತಮಗೂ ಅರ್ಥವಾಗದ ಸಂಸ್ಕೃತ ಮಂತ್ರಗಳನ್ನು ಪಠಿಸುವುದು, ಬಸ್ಮ ಗೋಪಿಚಂದನ ರುದ್ರಾಕ್ಷಿ ತುಳಸಿ ಮಾಲಿಧರಿಸುವುದು, 40 ದಿನ ಕಾಲಲ್ಲಿ ಚಪ್ಪಲಿ ಇಲ್ಲದೆ ನಡೆದು ಕರೀ ,ಕೆಂಪು, ನೀಲಿ, ಬಟ್ಟೆಗಳನ್ನು ಧರಿಸುವುದು, ಒಂದೇ ಸಮಯ ಊಟ ಮಾಡುವುದು, ಮಡಿಯಿಂದ ತಾವೇ ಅಡಿಗೆ ಮಾಡಿಕೊಂಡು ಊಟ ಮಾಡುವುದು ,ಯಾರ ಮನೆಯಲ್ಲಿ ನೀರು ಕುಡಿಯದೇ ಇರುವುದು ,ಸಾಧುಸಂತ ರನ್ನು ಮನೆಗೆ ಕರೆದು ಪಾದ ಪೂಜೆ ಮಾಡಿ ನಮ್ಮ ಕೋರಿಕೆಗಳನ್ನು ಕೂರುವುದು, ತೀರ್ಥ ಯಾತ್ರೆಗಳನ್ನು ಮಾಡುವುದು, ಸಂಧ್ಯಾ, ಪೂಜಾ ,ಜಪ ,ತಪ ಮಾಡುತ್ತಾ ಇರುವುದು, ಬೆಳಿಗ್ಗೆ ಪುಸ್ತಕ ಹಿಡಿದು ಗಂಟೆಗಟ್ಟಲೆ ಪಾರಾಯಣ ಮಾಡುವುದು, ಇದಷ್ಟನ್ನೇ ಭಕ್ತಿಯೆಂದು ಬಹಳ ಜನರು ತಿಳಿದುರುತ್ತಾರೆ, ಇವುಗಳು ತಪ್ಪೆಂದು ನಾನು ಹೇಳುತ್ತಿಲ್ಲ, ಆದರೆ ಇದಷ್ಟೇ ಭಕ್ತಿ ಅಲ್ಲ ಎಂದು ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದಾರೆ.
ಪ್ರಾರಂಭದ ದಶದಲ್ಲಿ ಸಾಧನೆ ಮಾರ್ಗದಲ್ಲಿ ನಡೆಯುವವರಿಗೆ ಕೆಲ ದಿನಗಳವರೆಗೆ ಇದನ್ನು ಮಾಡಿರಿ ನಂತರ ಸಾಧನೆ ಮಾಡಿ ಇವೆಲ್ಲವನ್ನೂ ಬಿಟ್ಟು ನಿಮ್ಮ ಮನಸ್ಸಿನ ಸ್ಥಿತಿ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಅದೇ ಭಕ್ತಿ ಎಂದಿದ್ದಾರೆ ಪರಮಾತ್ಮ,

ಸ್ವಾಮಿ ವಿವೇಕಾನಂದರು ಒಂದು ಕಡೆ ಹೇಳುತ್ತಾರೆ 18 ವರ್ಷದ ಯುವಕ ದೇವಸ್ಥಾನಕ್ಕೆ ಹೋಗದಿದ್ದರೆ ಚಿಂತಿಸಬೇಕು ಅಯ್ಯೋ ಈತನ ಜೀವನ ಮುಂದೆ ಹೇಗೆ ಆದಿತ್ತು ಈತನಿಗೆ ದೇವರಲ್ಲಿ ಭಕ್ತಿ, ಶ್ರದ್ಧೆ ಬರಲೆ ಇಲ್ಲವಲ್ಲ ಎಂದು. ಅಧೆ ಪ್ರಕಾರ 60 ವರ್ಷದ ಮುದುಕ ದೇವಸ್ಥಾನಗಳಿಗೆ ಹೋದರೆ ಚಿಂತಿಸಬೇಕಂತೆ ಏಕೆಂದರೆ ಅಯ್ಯೋ ಈತನಿಗೆ 60 ವರ್ಷಗಳಾದವು ಇನ್ನೂ ದೇವಸ್ಥಾನಗಳಲ್ಲಿ ಮಾತ್ರ ಭಗವಂತನನ್ನು ಹುಡುಕುತ್ತಿದ್ದಾನಲ್ಲ ಎಂದು, 60 ವರ್ಷದ ನಂತರ ಮನುಷ್ಯನ ಬುದ್ಧಿ ಪರಿಪಕ್ವವಾಗಿ ಅಣು, ರೇಣು, ತೃಣ, ಕಾಷ್ಠ, ಹಾಗೂ ಎಲ್ಲರಲ್ಲಿ ಆ ಪರಮಾತ್ಮನೇ ಇದ್ದಾನೆ ಎಂಬ ಭಾವನೆ ಬರಬೇಕಂತೆ, 60 ವರ್ಷದ ನಂತರ ಮನುಷ್ಯ ಗುಡಿಗೆ ಹೋಗದೆ ಇದ್ದರು ಪರವಾಗಿಲ್ಲ ಆದರೆ ಆತ ಉನ್ನತ ಮನಸ್ಥಿತಿಯಲ್ಲಿ ಇರಬೇಕು ಎಂಬುದೇ ಇದರ ತಾತ್ಪರ್ಯ, ಹಾಗೂ ಸ್ವಾಮೀಜಿ ಹೇಳುತ್ತಾರೆ ಲೀಟರ್ಗಟ್ಟಲೆ ಹಾಲಿನ ಅಭಿಷೇಕ ಕಿಲೂ ಗಟ್ಟಲೆ ತುಪ್ಪ ದೀಪ ಹಚ್ಚುವವರು ಇದರ ಬದಲು ಇವುಗಳನ್ನು ಬಡವರ ಮನೆಗೆ ಕೊಟ್ಟರೆ ಅಥವಾ ಬಡ ವಿದ್ಯಾರ್ಥಿಗಳ ಹಾಸ್ಟೆಲ್ಗೆ ಈ ಹಾಲು ಕೊಟ್ಟಲ್ಲಿ ಆ ದೇವರಿಗೆ ಮುಟ್ಟುತ್ತದೆ ಎನ್ನುತ್ತಿದ್ದರು ಸ್ವಾಮೀಜಿ, ಹಾಗೆಂದು ದೀಪ ಹಚ್ಚಬೇಡಿ ಹಾಲಿನ ಅಭಿಷೇಕ ಮಾಡಬೇಡಿ ಎಂದು ಸ್ವಾಮೀಜಿಯ ಉದ್ದೇಶ ಅಲ್ಲ ಅದು ಸ್ವಲ್ಪಮಟ್ಟಿಗೆ ಇರಲಿ ಅದರ ಬದಲು ನೀವು ಉಪವಾಸ ಧ್ಯಾನ ಭಜನೆ ದೇವರ ಬಗ್ಗೆ ಮಾಡಬಹುದು ಎಂಬುದೇ ಸ್ವಾಮೀಜಿ ತಾತ್ಪರ್ಯ.

ನಾವು ಎಲ್ ಕೆ ಜಿ ಯಲ್ಲಿ ಓದುತ್ತಿರುವಾಗ ಎಬಿಸಿಡಿ ಪ್ರತಿನಿತ್ಯ ಬರೆದು ಸಾಧನೆ ಮಾಡಬೇಕು, ನಾವು ಪಿಎಚ್ ಡಿ ಮಾಡುವಾಗ ಈ ಎಬಿಸಿಡಿಗಳು ನಮಗೆ ಉಪಯೋಗವಾಗಬೇಕೆ ಹೊರತು ಅದನ್ನು ಹೋಂವರ್ಕ್ ತರ ಪಿಎಚ್ಡಿ ಮಾಡುವಾಗ ಬರೆಯುವ ಅವಸರ ಇಲ್ಲ, ಭಕ್ತಿ ಕೂಡ ಹಾಗೆ ನಮ್ಮ ಮನಸ್ಸಿನ ಸ್ಥಿತಿಯನ್ನು ಅಷ್ಟು ಉನ್ನತ ಮಟ್ಟಕ್ಕೆ ಬೆಳೆಸಿಕೊಳ್ಳಬೇಕು ಜೀವನಪರ್ಯಂತ ಅದನ್ನೇ ಮಾಡುತ್ತಾ ಕೊಡಬಾರದು, ಇದನ್ನೇ ಪರಮಾತ್ಮ ಹೇಳಿದ್ದಾನೆ.

ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯ 12ನೇ ಅಧ್ಯಾಯ ಭಕ್ತಿ ಯೋಗ ದಲ್ಲಿ ಭಕ್ತಿ ಎಂದರೆ ಏನು ಎಂಬುದು ಸ್ಪಷ್ಟವಾಗಿ ಹೇಳಿದ್ದಾರೆ,

ಇದು 20 ಶ್ಲೋಕಗಳಿವೆ

ಭಕ್ತಿ ಅಂದರೆ ನ ದೃಷ್ಟತಿ,
ನ ದ್ವಿಷ್ಟಿ, ಶುಭ ಅಶುಭ ಪರಿತ್ಯಾಗಿ, ನ ಕಾಂಕ್ಷತಿ, ನ ಶೋಚತಿ,

ಇಂತಹ ವಿಷಯಗಳನ್ನೇ ಶ್ರೀ ಕೃಷ್ಣ ಪರಮಾತ್ಮ ಭಕ್ತಿಯ ನಿರ್ವಚನ ಮಾಡಿದ್ದಾರೆ.

ಭಕ್ತಿ ಎಂದರೆ ಯಾವುದನ್ನು ಅಪೇಕ್ಷೆ ಮಾಡಬೇಡ.

ಭಕ್ತಿ ಎಂದರೆ ಇದ್ದದ್ದರಲ್ಲಿ ತೃಪ್ತಿಪಡು.

ಭಕ್ತಿ ಎಂದರೆ ಶುಭ ಅಶುಭ ಗಳ ಪರಿತ್ಯಾಗಿ ಯಾಗಿರು.

ಭಕ್ತಿ ಎಂದರೆ ಜೀವನದಲ್ಲಿ ಏನು ಬರುತ್ತದೆಯೋ ಅದನ್ನು ಅನುಭವಿಸು.

ಭಕ್ತಿ ಎಂದರೆ ಯಾವುದಕ್ಕೂ ಚಿಂತಿಸಬೇಡ.

ಭಕ್ತಿ ಎಂದರೆ ಶುಭ ಅಶುಭಗಳ ಸಮಾನವೆಂದು ತಿಳಿಯುವ ಮನಸ್ಥತ್ವ ಬೆಳೆಸಿಕೊಂಡು ಆ ಸ್ಥಿತಿಯಲ್ಲಿ ಜೀವಿಸು.

ಇವೆಲ್ಲದಕ್ಕೆ 12ನೇ ಅಧ್ಯಾಯದ ಭಕ್ತಿ ಯೋಗದಲ್ಲಿ ಶ್ರೀ ಕೃಷ್ಣ ಪರಮಾತ್ಮ ಸ್ಪಷ್ಟವಾಗಿ ಹೇಳಿದ್ದಾರೆ,

ಇದೆಲ್ಲದರ ಭಾವ ಬರುವ ಹಾಗೆ ಹಮ್ದೋನೂ ಎಂಬ ಹಿಂದಿ ಚಲನ ಚಿತ್ರದಲ್ಲಿ ಒಂದು ಹಾಡು ಸಂಪೂರ್ಣ ಇದೆ ಅರ್ಥವನ್ನು ಹೊಂದಿದೆ.

मैं जिंदगी का साथ निभाता चला गया।।

हर फिक्र को धुएं में उड़ता चला गया।।

जो मिल गया उसे मुकद्दर समझ लिया।।

जो खो गया उसे भूलात चला गया।।

बर्बादियों का शोक मनाना फजूल था।।

बरबादियों का जंक्शन मनाता चला गया।।

गम और खुशी का फर्क न महसूस हो जहां।।

मैं दिल को उसे मुकाम पे लाता चला गया।।

मैं जिंदगी का साथ निभाता चला गया।।

ಈ ಹಾಡಿನ ಅರ್ಥ ಹೀಗಿದೆ

ನಾನು ಜೀವನ ಹೇಗಿದಿಯೋ ಹಾಗೆ ಅದರ ಜೊತೆ ಸಹಕರಿಸುತ್ತಾ ನಡೆದೆ.

ಜೀವನದಲ್ಲಿ ನನಗೆ ಏನು ಸಿಕ್ಕಿತು ಅದು ನನ್ನ ದೈವ ಎಂದು ತಿಳಿದುಕೊಂಡೆ.

ಏನು ನನ್ನಿಂದ ಕಳೆದು ಹೋಯಿತು ಅದನ್ನು ಮರೆತು ಬಿಟ್ಟೆ

ಸುಖ ಮತ್ತು ದುಃಖದ ವ್ಯತ್ಯಾಸ ನನ್ನ ಮನಸ್ಸಿನ ಮೇಲೆ ಪ್ರಭಾವ ಮಾಡದಷ್ಟು ನನ್ನ ಮನಸ್ಸು ಗಟ್ಟಿ ಮಾಡಿಕೊಂಡು ಆ ಮಟ್ಟಕ್ಕೆ ಬೆಳೆದೆ.

ನಾನು ಜೀವನದ ಜೊತೆ ಸಹಕರಿಸುತ್ತಾ ನಡೆದೆ.

ನಷ್ಟವಾದ ವಿಷಯ ದುಃಖಿಸುವುದು ವ್ಯರ್ಥ ಎಂದು ತಿಳಿದೆ

ನಷ್ಟವಾದ ವಿಷಯದ ಬಗ್ಗೆ ಉತ್ಸವ ಮಾಡಿಕೊಂಡೆ.

ನೋಡಿ ಈ ಹಾಡು ನಮಗೆ 12ನೇ ಅಧ್ಯಾಯ ಭಗವದ್ಗೀತೆ ನೆನಪು ಮಾಡಿಕೊಡುತ್ತದೆ, ಹಿಂದಿ ಅನೇಕ ಸಿನಿಮಾ ಹಾಡುಗಳು ತತ್ವ ಚಿಂತನೆಯಿಂದ ಕೂಡಿವೆ, ಸಿನಿಮಾ ಎಂದ ತಕ್ಷಣ ಮಡಿವಂತರು ಅದನ್ನು ನಿರಾಕರಿ ಸುತ್ತಾರೆ, ನಮ್ಮ ಋಗ್ವೇದ ಹೇಳುತ್ತದೆ ನಿನಗೆ ಒಳ್ಳೆಯದು ಎಲ್ಲಿ ಸಿಗುತ್ತದ್ಯೋ ಅದನ್ನು ತಪ್ಪದೇ ಅಲ್ಲಿಂದ ಸ್ವೀಕರಿಸು ಎಂದು .

ಅಮರ ದೀಕ್ಷಿತ ಕೃಷ್ಣ

9448757587

!! ಶ್ರೀಕೃಷ್ಣಾರ್ಪಣಮಸ್ತು !!*


Share