ಎಂಪಿ ಆಧ್ಯಾತ್ಮಿಕ-ಆತ್ಮ ಶ್ರಾದ್ಧ..!

42
Share

ಕೃಪೆ ಆದ್ಯಾತ್ಮಿಕ ವಿಚಾರ

*ಆತ್ಮ ಶ್ರಾದ್ಧ..!*

ಧರ್ಮಶಾಸ್ತ್ರದ ಪ್ರಕಾರ, ಸನ್ಯಾಸ ಆಶ್ರಮ ಸ್ವೀಕರಿಸುವ ಮುನ್ನ ವಿಧಿ ವಿಧಾನಗಳಂತೆ, ಪಿತೃಗಳ ಕರ್ಮವನ್ನು ಮುಗಿಸಿ, ತಮ್ಮ ಶ್ರಾದ್ಧವನ್ನು ತಾವೇ ಮಾಡಿಕೊಂಡು ಪೂರ್ವಾಶ್ರಮದ ಎಲ್ಲಾ ಋಣಗಳಿಂದಲೂ ಮುಕ್ತರಾಗಿ, ತಮ್ಮನ್ನು ತಾವು ಮುಕ್ತರಾಗಿಸಿಕೊಂಡು ಸನ್ಯಾಸ ಆಶ್ರಮ ಸ್ವೀಕರಿಸುವ ಪ್ರಕ್ರಿಯೆ “ಆತ್ಮ ಶ್ರಾದ್ಧ”
ನಂತರ ವಿರಜಾ ಹೋಮ ಮಾಡಿಕೊಳ್ಳುತ್ತಾರೆ. ಹಾಗಾಗಿ ವಿರಾಜ ಹೋಮವು ಪೂರ್ಣ ಸಂನ್ಯಾಸ ದೀಕ್ಷೆಯ ಭಾಗವಾಗಿದೆ.

ಪಿತೃಗಳಿಗೆ ಪಿಂಡ ಪ್ರದಾನ ಮಾಡಿ ಸ್ವಯಂ ಆತ್ಮ ಶ್ರಾದ್ಧ ಮಾಡಿಕೊಳ್ಳುವ ಯತಿ, ಪೀಠಾಧಿಪತಿಗಳಿಗೆ ಪೂರ್ವಾಶ್ರಮ, ಮಠಗಳಲ್ಲಿ ಯಾರೇ ಸತ್ತರೂ ಸೂತಕವಿಲ್ಲ. ಆದರೆ ಸನ್ಯಾಸ ದೀಕ್ಷೆ ಸ್ವೀಕರಿಸಿ ಯತಿ , ಮಠಾಧಿಪತಿಯಾದರೂ ತಾಯಿಯ ಬಾಂಧವ್ಯವನ್ನು ಮಾತ್ರ ಕಳೆದುಕೊಳ್ಳುವಂತಿಲ್ಲ. ತಾಯಿ ಇದ್ದಾಗ, ಸತ್ತಾಗ ನಮಸ್ಕರಿಸಬೇಕಾದ ಋುಣಾನುಬಂಧದಿಂದ ಮುಕ್ತಿಯಿಲ್ಲ.

ಸಂಸಾರಿಗಳು /ಲೌಕಿಕರಂತೆ ಯತಿ ಪೀಠಾಧಿಪತಿಗಳಿಗೆ ಸೂತಕದ ಹಂಗಿಲ್ಲ ಪಿತೃಗಳ ಪಿಂಡ ಪ್ರದಾನ ಆತ್ಮ‌ಶ್ರಾದ್ಧ ಮಾಡಿಯೇ ಸನ್ಯಾಸ ದೀಕ್ಷೆ ಪಡೆವ ಹಿನ್ನೆಲೆಯಲ್ಲಿ ಮರಣೋತ್ತರವಾದ ಉತ್ತರಕ್ರಿಯೆ ಮಾಸಿಕ‌ ವರ್ಷಾಂತಿಕ ಪ್ರಕ್ರಿಯೆ ಇಲ್ಲ.

===============

ಮಕ್ಕಳಿಲ್ಲದೆ ಇರುವವರು (ಸಂತಾನ ವಿಹೀನರು) ಅಥವಾ ಪಿತೃ ಕಾರ್ಯ ಆಚರಣೆ ಗಳಲ್ಲಿ ನಂಬಿಕೆ ಇಲ್ಲದ ಸಂತಾನವಿರುವವರು ಅಥವಾ ಹೊರದೇಶ/ಪರದೇಶ ಇತ್ಯಾದಿ ಪ್ರದೇಶಗಳಲ್ಲಿ ವಾಸಿಸುವ ಪುರುಸೊತ್ತಿಲ್ಲದ / ಸೂಕ್ತ ಸೌಕರ್ಯವಿಲ್ಲದ ಸಂತಾನ ಹೊಂದಿರುವವರು “ಆತ್ಮ ಶ್ರಾದ್ಧ” ಮಾಡಿಕೊಳ್ಳುವ ವಿಚಾರ ತುಂಬಾ ಸೂಕ್ಷ್ಮವಾಗಿದ್ದು ಅವರವರ ಹಿರಿಯರ ಮತ್ತು ಮಠಾಧೀಶರ ಸೂಕ್ತ ಸಲಹೆ ಪಡೆಯುವುದು ಒಳ್ಳೆಯದು.

!! ಶ್ರೀಕೃಷ್ಣಾರ್ಪಣಮಸ್ತು !!*

 


Share