ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವೀಧರರ ದಿನಾಚರಣೆ

24
Share

 

 

ನಗರದ ಮೈಸೂರು-ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವೀಧರರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು,

ಕಾರ್ಯಕ್ರಮವನ್ನು ನಾಡಗೀತೆ ಹಾಡುವುದರೊಂದಿಗೆ ಆರಂಭಿಸಲಾಯಿತು ನಂತರ ಕಾಲೇಜಿನ ಪ್ರಾಂಶುಪಾಲರಾದ

ಡಾ.ಎ.ಕೆ.ಮೂರ್ತಿ ಯವರು ಸಮಾರಂಭಕ್ಕೆ ಆಗಮಿಸಿದ್ದ ಎಲ್ಲರನ್ನು ಸ್ವಾಗತಿಸಿದರು. ನಂತರ ಕಾಲೇಜಿನ ಶೈಕ್ಷಣಿಕ ಹಾಗೂ ಇತರೆ ಕಾಲೇಜಿನ ಶೈಕ್ಷಣಿಕ ಹಾಗೂ ಇತರೆ ಚಟುವಟಿಕೆಗಳ ಸಮಗ್ರ ವರದಿ ಮಂಡಿಸಿದರು,
ಸಮಾರಂಭದ ಮುಖ್ಯ ಅತಿಥಿಗಳಾಗಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಡಾ.ಟಿ.ಎನ್.ಶ್ರೀನಿವಾಸ ಹಾಗೂ ಗೌರವ ಅತಿಥಿಗಳಾಗಿ ಬೆಂಗಳೂರಿನ ಡಿ.ಎಕ್ಸ್‌.ಸಿ,
ಟೆಕ್ನಾಲಜಿ-ಜೆಡಿ ಇಂಡಿಯಾ ಸಂಸ್ಥೆಯ ಡೆಲಿವರಿ ಮ್ಯಾನೇಜರ್ ನಟೇಶ್ ಪಾಲಹಳ್ಳಿ ರವರು ಭಾಗವಹಿಸಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಶಿವಶಂಕರ್
ರವರು ವಹಿಸಿದ್ದರು ನಂತರ ವಿವಿಧ ವಿಭಾಗಗಳಲ್ಲಿ ನಾಲ್ಕು ವರ್ಷಗಳ ಇಂಜಿನಿಯರಿಂಗ್ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ
“ಪ್ರತಿಜ್ಞಾವಿಧಿ” ಬೋಧಿಸಿದರು. ಇದೇ ಸಂಧರ್ಭದಲ್ಲಿ ವಿವಿಧ ಇಂಜಿನಿಯರಿಂಗ್ ವಿಭಾಗಗಳಲ್ಲಿ ನಾಲ್ಕು ವರ್ಷಗಳ ಇಂಜಿನಿಯರಿಂಗ್ ಕೋರ್ಸ್ ಪೂರ್ಣಗೊಳಿಸಿದ 430 ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿ ಡಾ.ಟಿ.ಎನ್‌.ಶ್ರೀನಿವಾಸ ಮತ್ತು ವೇದಿಕೆ ಮೇಲಿನ ಇತರೆ ಗಣ್ಯರು ಪ್ರಮಾಣ ಪತ್ರಗಳನ್ನು ವಿತರಿಸಿದರು ಹಾಗೂ ಇಂಜಿನಿಯರಿಂಗ್‌ನ ವಿವಿದ ವಿಭಾಗಗಳಲ್ಲಿ ವಿಷಯವಾರು ಹೆಚ್ಚು ಅಂಕ ಗಳಿಸಿದ್ದ ವಿದ್ಯಾರ್ಥಿಗಳಿಗೆ ದಾನಿಗಳ ಸ್ಮರಣಾರ್ಥ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ನಂತರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ಡಾ.ಟಿ.ಎನ್.ಶ್ರೀನಿವಾಸ್ “ಪದವಿ ನಂತರ ವಿದ್ಯಾರ್ಥಿಗಳ ಜೀವನದ ಮತ್ತೊಂದು ಅಧ್ಯಾಯಕ್ಕೆ ಮುನ್ನುಡಿಯಿದ್ದಂತೆ, ಉತ್ತಮ ವ್ಯಕ್ತಿತ್ವ, ಮತ್ತು ಕೌಶಲ್ಯಗಳನ್ನು ಬೆಳೆಸಿಕೊಂಡು ಆತ್ಮವಿಶ್ವಾಸದೊಂದಿಗೆ ಸುಂದರ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು. ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಕೌಶಲ್ಯವಿರುತ್ತದೆ ಆದರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಅರಿವಿರಬೇಕು, ಜೀವನದಲ್ಲಿ ಸೋಲು ಎಂಬುದನ್ನು ಅನುಭವ ಮತ್ತು ಗೆಲುವಿನ ಮೆಟ್ಟಿಲೆಂದು ತಿಳಿದು ಧೈರ್ಯದಿಂದ ಮುನ್ನಡೆದಾಗ ಯಶಸ್ಸನ್ನು ಕಾಣಬಹುದು ಎಂದರು.

ಇದೇ ಸಂದರ್ಭದಲ್ಲಿ ಗೌರವ ಅತಿಥಿ ನಟೇಶ್‌ ಪಾಲಹಳ್ಳಿ ಮಾತನಾಡಿ,” ಆಧುನಿಕ ತಾಂತ್ರಿಕತೆ ಅವಲಂಭಿತ ಜಗತ್ತಿನಲ್ಲಿ ವಿಪುಲ ಅವಕಾಶಗಳಿವೆ. ಆದರೆ ಅದಕ್ಕೆ ಅನುಗುಣವಾಗಿ ವ್ಯಕ್ತಿತ್ವ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಂಡರೆ ಮಾತ್ರ ಈ ಅವಕಾಶಗಳನ್ನು ಬಳಸಿಕೊಳ್ಳಬಹುದು ಎಂದರು.

ಸಮಾರಂಭದಲ್ಲಿ ಎಟಿಎಂಇ ಆಡಳಿತ ಮಂಡಳಿ ಪದಾಧಿಕಾರಿಗಳಾದ ಡಾ.ಕೆ.ಚಿದಾನಂದಗೌಡ, ಹೆಚ್.ವೆಂಕಟೇಶ್‌, ಧೀರೇಂದ್ರಕುಮಾರ್ ಆರ್.ಮೆಹ್ರಾ, ಎಸ್.ಜೆ.ಸಿ.ಇ. ನಿವೃತ್ತ ಪ್ರಾಂಶುಪಾಲರಾದ ಡಾ.ಸೈಯ್ಯದ್ ಶಕೀಬ್, ರೆಹಮಾನ್, ಐಕ್ಯೂಎಸಿ ನಿರ್ದೇಶಕ ಡಾ.ಬಸವರಾಜ್.ಎಲ್. ವಿವಿಧ ವಿಭಾಗಗಳ ಡೀನ್‌ಗಳಾದ ಡಾ.ಎಂ.ಎಸ್.ಗೋವಿಂದೇಗೌಡ, ಡಾ.ಭಾಗ್ಯಶ್ರೀ.ಎಸ್.ಆರ್ ಸೇರಿದಂತೆ ಕಾರ್ಯಕ್ರಮದ ಪ್ರಧಾನ ಸಂಯೋಜಕ ಇಇಇ ವಿಭಾಗದ ಮುಖ್ಯಸ್ಥ ಡಾ.ಪಾರ್ಥಸಾರಥಿ.ಎಲ್, ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರುಗಳು, ಆಧ್ಯಾಪಕ ಮತ್ತು ಆಡಳಿತ ವಿಭಾಗದ ಸಿಬ್ಬಂದಿ ವರ್ಗದವರು ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸಲಾಯಿತು. ಸಹ ಪ್ರಾಧ್ಯಾಪಕರುಗಳಾದ ಮರಿಯಾಸುಷ್ಮಾ,ಡಾ.ಶಕುಂತಲಾ,ಶ್ರೀಶಯನ,ಸೌಮ್ಯಶ್ರೀ,
ಸ್ವಪ್ನಾ ಎಚ್,ಮತ್ತು ಡಾ.ಸತೀಶ್
ಕಾರ್ಯಕ್ರಮವನ್ನು ನಿರೂಪಿಸಿದರು

 


Share