ಎಲ್ಲಾ ಕ್ಷೇತ್ರದ ಹಾಗೂ ಎಲ್ಲಾ ಜನರನ್ನು ಗಮನದಲ್ಲಿರಿಸಿಕೊಂಡು ಬಜೆಟ್ ಮಂಡನೆ

145
Share

 

2024-25 ನೇ ಸಾಲಿನ ಆಯವ್ಯದಲ್ಲಿ ಮೈಸೂರು ನಗರಕ್ಕೆ ಹಾಗೂ ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಘೋಷಣೆಯಾಗಿರುವ ಹೊಸ ಯೋಜನೆಗಳ ಪೈಕಿ *ನೆಫ್ರೋ ಯುರಾಲಜಿ ಆಸ್ಪತ್ರೆಯ ಉನ್ನತಿಕರಣ, ಎಂ.ಎಂ.ಸಿ.ಆರ್.ಐ ಶತಮಾನೋತ್ಸವ ಆಚರಣೆ ಮಾಡುತ್ತಿರುವ ಈ ವರ್ಷದಲ್ಲಿ ಕೆಆರ್ ಆಸ್ಪತ್ರೆ ಆವರಣದಲ್ಲಿ ಹೊರರೋಗಿ ವಿಭಾಗದ ಕಟ್ಟಡ ನಿರ್ಮಾಣ, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಹಾಗೂ ಮಹಾರಾಣಿ ಕಾಲೇಜಿನ ಹಾಸ್ಟೆಲ್ ಕಟ್ಟಡದ ನಿರ್ಮಾಣ ಹಾಗೂ ಎಪಿಎಂಸಿಯಲ್ಲಿ ಶೀತಲ ಗೃಹ ನಿರ್ಮಾಣ* ಮಾಡುವಂತೆ ಸನ್ಮಾನ್ಯ ಮುಖ್ಯಮಂತ್ರಿ ಅವರನ್ನು ಕೋರಿದರ ಮೇರೆಗೆ, ಮೇಲ್ಕಂಡ ಎಲ್ಲಾ ಯೋಜನೆಗಳನ್ನು ಈ ಆಯವ್ಯಯದಲ್ಲಿ ಘೋಷಣೆ ಮಾಡಿರುವುದಕ್ಕೆ ಸನ್ಮಾನ್ಯ ಮುಖ್ಯಮಂತ್ರಿ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ತಿಳಿಸುತ್ತೇನೆ.

ಸನ್ಮಾನ್ಯ ಮುಖ್ಯಮಂತ್ರಿ ಅವರು ಮಂಡಿಸಿರುವ 2024-25ನೇ ಸಾಲಿನ ಆಯವ್ಯವು ಎಲ್ಲಾ ಕ್ಷೇತ್ರದ ಹಾಗೂ ಎಲ್ಲಾ ಜನರನ್ನು ಗಮನದಲ್ಲಿರಿಸಿಕೊಂಡು ಮಂಡಿಸಿರುತ್ತಾರೆ. ಇದೊಂದು ಅರ್ಥಪೂರ್ಣ ಬಜೆಟ್ ಹಾಗೂ ಎಲ್ಲರಿಗೂ ಸಲ್ಲುವಂತಹ ಬಜೆಟ್ ಆಗಿರುತ್ತದೆ. ಮೈಸೂರಿನ ಹಾಗೂ ಚಾಮರಾಜ ವಿಧಾನಸಭಾ ಕ್ಷೇತ್ರದ ಎಲ್ಲಾ ಜನರ ಪರವಾಗಿ ಸನ್ಮಾನ್ಯ ಮುಖ್ಯಮಂತ್ರಿ ಅವರಿಗೆ ಧನ್ಯವಾದಗಳು ಅರ್ಪಿಸುತ್ತೇನೆ.

*ಕೆ ಹರೀಶ್ ಗೌಡ*
*ವಿಧಾನಸಭಾ ಸದಸ್ಯರು*
*ಚಾಮರಾಜ ವಿಧಾನಸಭಾ ಕ್ಷೇತ್ರ*


Share