ಎಸ್.ಪಿ.ಬಿ, ಪಿ.ಬಿ.ಎಸ್ ಅವರಿಗೆ ಗೌರವ ಸಲ್ಲಿಸಲು ಸೆ.23ಕ್ಕೆ ‘ಮ್ಯೂಸಿಕಲ್ ನೈಟ್’

35
Share

 

ಎಸ್.ಪಿ.ಬಿ, ಪಿ.ಬಿ.ಎಸ್ ಅವರಿಗೆ ಗೌರವ ಸಲ್ಲಿಸಲು ಸೆ.23ಕ್ಕೆ ‘ಮ್ಯೂಸಿಕಲ್ ನೈಟ್’

ಮೈಸೂರು: ಸಂಗೀತ ಕ್ಷೇತ್ರ ಸಾರ್ವಕಾಲಿಕ ದಂತಕತೆಗಳಾದ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಡಾ.ಪಿ.ಬಿ.ಶ್ರೀನಿವಾಸ್ ಅವರಿಗೆ ಗೌರವ ಮತ್ತು ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದಿಂದ ಸೆ.23ರಂದು ಸಂಜೆ 5.30ಕ್ಕೆ ಸ್ಟರ್ಲಿಂಗ್ ಥಿಯೇಟರ್ ಬಳಿ ಇರುವ ಎಂಬಿಸಿಟಿ ಆಡಿಟೋರಿಯಂನಲ್ಲಿ “ಎಂದು ಮರೆಯಾದ ಹಾಡು” ಎಂಬ ಮ್ಯೂಸಿಕಲ್ ನೈಟ್ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು‌ ಬಿಲ್ಡರ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಮೈಸೂರಿನ ವಿದ್ಯುಲ್ಲಹರಿ ಪ್ರಾಯೋಜಿಸಿದೆ. ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಪ್ರವೇಶ ಶುಲ್ಕವಿಲ್ಲ.

ಮೈಸೂರಿನ ಜನತೆ ಈ ಮ್ಯೂಸಿಕಲ್ ನೈಟ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಆನಂದಿಸಿ ಮತ್ತು ಮಹಾನ್ ದಂತಕಥೆಗಳಾದ ಡಾ.ಎಸ್.ಪಿ.ಬಿ ಮತ್ತು ಡಾ.ಪಿ.ಬಿ.ಎಸ್ ಅವರಿಗೆ ಗೌರವ ಸಲ್ಲಿಸಬೇಕೆಂದು ಪ್ರಕಟಣೆ ತಿಳಿಸಿದೆ.

ಮ್ಯೂಸಿಕಲ್ ನೈಟ್ ಅನ್ನು ದೂರದರ್ಶನ ಕಲಾವಿದ ಡಾ. ಎ.ಡಿ. ಶ್ರೀನಿವಾಸನ್ ನಿರ್ದೇಶಿಸಿದ್ದಾರೆ. ಡಾ.ಎಸ್.ಪಿ.ಬಿ ಮತ್ತು ಡಾ.ಪಿ.ಬಿ.ಎಸ್ ಅವರ ಜನಪ್ರಿಯ ಮತ್ತು ಸುಮಧುರ ಗೀತೆಗಳನ್ನು ಪ್ರಸಿದ್ಧ ಗಾಯಕರಾದ ಡಾ.ಎ.ಡಿ.ಶ್ರೀನಿವಾಸನ್, ಡಾ.ಕೆ.ಎಸ್.ಮಂಜುನಾಥ್, ಕುಮಾರಿ ಹಂಸಿನಿ ಎಸ್. ಕುಮಾರ್ ಮತ್ತಿತರರು ಹಾಡಲಿದ್ದಾರೆ.
———-


Share