ಓ ಟಿ ಯಲ್ಲಿ ವಧು ವರರ ಚಿತ್ರೀಕರಣ : ವೈದ್ಯನ ಅಮಾನತ್ತು

280
Share

ಬೆಂಗಳೂರು: ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಪ್ರೀ ವೆಡ್ಡಿಂಗ್ ಶೂಟ್ ( ಮದುವೆಗೆ ಮುಂಚೆ ವಧು ವರರ ಛಾಯಾ ಚಿತ್ರೀಕರಣ ) ಮಾಡಿದ್ದಕ್ಕಾಗಿ ವೈದ್ಯನನ್ನು ರಾಜ್ಯ ಸರ್ಕಾರ ಶುಕ್ರವಾರ ಸೇವೆಯಿಂದ ವಜಾಗೊಳಿಸಿದೆ ಎಂದು ವರದಿಯಾಗಿದೆ.
ಚಿತ್ರದುರ್ಗ ಜಿಲ್ಲೆಯ ಭರಮಸಾಗರ (ಬೆಂಗಳೂರಿನಿಂದ 210 ಕಿಮೀ) ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ವೈದ್ಯರನ್ನು ಗುತ್ತಿಗೆ ವೈದ್ಯ ಅಭಿಷೇಕ್ ಎಂದು ಗುರುತಿಸಲಾಗಿದೆ.
ವೀಡಿಯೊದಲ್ಲಿ, ವೈದ್ಯರು ನಕಲಿ ರೋಗಿಯ ಹೊಟ್ಟೆಯ ಮೇಲೆ ಶಸ್ತ್ರಚಿಕಿತ್ಸೆ ಮಾಡುತ್ತಿರುವುದು ಕಂಡುಬರುತ್ತದೆ, ಆದರೆ ಮಹಿಳೆ ಶಸ್ತ್ರಚಿಕಿತ್ಸಾ ಸಾಧನಗಳೊಂದಿಗೆ ಸಹಾಯ ಮಾಡುವಂತೆ ನಟಿಸಿದ್ದಾರೆ.
ಕೆಲವು ಛಾಯಾಗ್ರಾಹಕರು ಹಿನ್ನಲೆಯಲ್ಲಿ ನಗುತ್ತಿರುವುದನ್ನು ಸಹ ಕಾಣಬಹುದು.
ವೀಡಿಯೋ ವೈರಲ್ ಆದಾಗ, ಜಿಲ್ಲಾ ಆರೋಗ್ಯಾಧಿಕಾರಿಗಳು ಚಿತ್ರೀಕರಣವನ್ನು ಅನುಪಯುಕ್ತ ಆಪರೇಷನ್ ಥಿಯೇಟರ್ (OT) ನಲ್ಲಿ ಚಿತ್ರೀಕರಣ ಮಾಡಲಾಗಿದೆ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗೆ ನೋಟಿಸ್ ನೀಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದರು.
ಆದರೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವೈದ್ಯರನ್ನು ವಜಾಗೊಳಿಸಲು ಆದೇಶ ಹೊರಡಿಸಿದ್ದಾರೆ.

Share