ಕಬಿನಿ ಜಲಾಶ: 10 ದಿನ ಕಾಲುವೆಗಳಿಗೆ ನೀರು ಹರಿವು

22
Share

ಕಬಿನಿ ಜಲಾಶಯದಿಂದ 10 ದಿನಗಳವರೆಗೆ ಕಾಲುವೆಗಳಿಗೆ ನೀರು ಹರಿವು
ಮೈಸೂರು,ಜು.28 :- ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆಯು ಜುಲೈ ಮಾಹೆಯಲ್ಲಿ ಪ್ರಾರಂಭವಾಗಿದ್ದು, ಮೈಸೂರು – ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿನ ಮೈಸೂರು ಚಾಮರಾಜನಗರದ ಜಿಲ್ಲಾ ವ್ಯಾಪ್ತಿಯ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆರೆ ಕಟ್ಟೆ ತುಂಬಿಸಲು ನಾಲೆಗಳ ಮತ್ತು ನದಿ ಮುಖಾಂತರ ಕುಡಿಯುವ ನೀರು ಪೂರೈಸಲು ಉದ್ದೇಶಿಸಿದ್ದು , ಜುಲೈ 24 ರಿಂದ ಆಗಸ್ಟ್ 02 ರವರೆಗೆ 10 ದಿನಗಳು ನೀರು ಹರಿಸಲು ಸರ್ಕಾರ ನಿರ್ದೇಸಿದೆ ಎಂದು ಕಬಿನಿ ಮತ್ತು ವರುಣಾ ನಾಲಾ ವೃತ್ತದ ಅಧೀಕ್ಷಕರ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share