ಕರೊನ-ಆದ್ಯತಾ ವಲಯದವರಿ ಗೆ‌ ಗಡುವಿನೊಳಗೆ ಲಸಿಕೆ ಪೂರ್ಣಗೊಳಿಸಿ, ಡಿಸಿ

493
Share

 

ಆದ್ಯತಾ ವಲಯದವರಿ ಗೆ‌ ಗಡುವಿನೊಳಗೆ ಲಸಿಕೆ ಪೂರ್ಣಗೊಳಿಸಿ
ವಿವಿಧ ಇಲಾಖೆಗಳ ಲಸಿಕಾ ನೋಡಲ್ ಅಧಿಕಾರಿಗಳಿಗೆ ಡಿಸಿ ರೋಹಿಣಿ ಸಿಂಧೂರಿ ಸೂಚನೆ

 

ಮೈಸೂರು,- ಕೊರೋನಾ ವಿರುದ್ದ ಹೋರಾಟ ಮಾಡುತ್ತಿರುವ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡುವ ಕಾರ್ಯ ಪೂರ್ಣಗೊಳಿಸುವ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧ್ಯಕ್ಷತೆಯಲ್ಲಿ ಇಂದು ವಿವಿಧ ಇಲಾಖೆಗಳ ಪರಿಶೀಲನಾ ಸಭೆ ನಡೆಯಿತು.

ಮೈಸೂರು ಜಿಲ್ಲೆಯಲ್ಲಿ ಮುಂಚೂಣಿ ಕಾರ್ಯ ಕರ್ತರಿಗೆ ‌ಲಸಿಕೆ ನೀಡುವಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಗುರಿ ತಲುಪಬೇಕು. ಮುಂಚೂಣಿ ಕಾರ್ಯ ಕರ್ತರಿಗೆ ಲಸಿಕೆ ಕಾರ್ಯ ಪೂರ್ಣಗೊಂಡರೆ ಮುಂದಿನ ವಾರದಲ್ಲಿ 18-45 ವರ್ಷದೊಳಗಿನವರಿಗೆ ಲಸಿಕೆ ಕೊಡುವುದನ್ನು ಆರಂಭಿಸಬಹುದು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಭಿಪ್ರಾಯಪಟ್ಟರು.

ಆರೋಗ್ಯ, ನ್ಯಾಯಾಂಗ ಸೇರಿದಂತೆ ಸಾರ್ವಜನಿಕ ವಲಯದ ಕೊರೋನಾ ವಾರಿಯರ್ಸ್ ಲಸಿಕೆ ಪಡೆಯುವುದನ್ನು ಆದಷ್ಟು ಪೂರ್ಣ ಮಾಡಬೇಕು. ಯಾವುದೇ ಇಲಾಖೆಯಲ್ಲಿ ಲಸಿಕೆ ಕೊಡಿವುದು ಬಾಕಿ ಉಳಿದರೆ, ಅದನ್ನು ಮುಂದೆ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದರು.

ತಮ್ಮ ತಮ್ಮ‌ಇಲಾಖೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ಸಿಬ್ಬಂದಿಗೆ ಲಸಿಕೆ ಪಡೆಯುವಂತೆ ಮನವೊಲಿಸಬೇಕು. ಅವಧಿ ಮುಗಿದ ನಂತರ ಇಲಾಖೆಗಳಿಂದ ಬೇಡಿಕೆ ಬಂದರೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.


Share