ಕರೋನಾ ಎಫೆಕ್ಟ್|ಆಟೋಮೊಬೈಲ್ ಇಂಡಸ್ಟ್ರಿ ಪರಿಸ್ಥಿತಿ

1894
Share

ಮೈಸೂರು.
ಮೈಸೂರು ಪತ್ರಿಕೆ ಎಂಪಿ ಟಾಕ್ ಕಾರ್ಯಕ್ರಮದಲ್ಲಿ ಆಟೋಮೊಬೈಲ್ ಇಂಡಸ್ಟ್ರಿ ಪರಿಸ್ಥಿತಿ ಬಗ್ಗೆ ಚರ್ಚಿಸಲಾಯಿತು.
ಇಂದಿನ ಚರ್ಚೆಯಲ್ಲಿ ಆಟೋಮೊಬೈಲ್ ಉದ್ಯಮಿಗಳಾದ ವಿಜಯ್ ಕುಮಾರ್ ಅವರು ಮಾತನಾಡಿ ಆಟೋಮೊಬೈಲ್ ಇಂಡಸ್ಟ್ರಿ 2018 ರಲ್ಲಿ ವ್ಯಾಪಾರ-ವಹಿವಾಟು ಕುಸಿದಿದ್ದು ಇಂದು ಕೂಡ ಕಷ್ಟನಷ್ಟಗಳನ್ನು ಅನುಭವಿಸುತ್ತಿದೆ ಎಂದರು. ಕೇಂದ್ರ ಸರ್ಕಾರ ಜಿಎಸ್ಟಿ ತೆರಿಗೆ ಜಾರಿಗೆ ಬಂದ ನಂತರ ತೊಂದರೆಯಾಗಿದೆ ಎಂದ ಅವರು ಕರೋನಾ ಸಮಸ್ಯೆಯಿಂದ ಕೂಡ ಅಲ್ಪ ಸ್ವಲ್ಪ ತೊಂದರೆ ಆಗಿದೆ ಅದು ಒಂದು ಕಾರಣ ಎಂದರು ಆಗಲೇ ಆಟೋಮೊಬೈಲ್ ಇಂಡಸ್ಟ್ರಿಯವರು ಕೇಂದ್ರ ಸರ್ಕಾರಕ್ಕೆ ಜಿಎಸ್ಟಿ ತೆರಿಗೆ ಕಡಿಮೆ ಮಾಡಲು ಮನವರಿಕೆ ಮಾಡಿಕೊಟ್ಟಿದ್ದರು ಪ್ರಯೋಜನವಾಗಿಲ್ಲ ಎಂದರು ಹೀಗಾಗಿ ಕೆಳಮಟ್ಟದಿಂದ ವಾಹನ ತಯಾರುಮಾಡುವ ಘಟಕದ ಉದ್ದಿಮೆಯ ವರೆಗೂ ಬಹಳ ತೊಂದರೆಯಾಗಿದೆ ಎಂದರು. ಅವರು ಮುಂದುವರೆದು ಮಾತನಾಡುತ್ತ ವಾಹನ ಖರೀದಿಸುವಾಗ ಎಚ್ಚರಿಕೆ ಹಾಗೂ ವ್ಯವಹರಿಸುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಓದುವ ವಿಷಯದ ಬಗ್ಗೆ ಆರಿಸಿಕೊಳ್ಳುವ ಸಂಬಂಧ ಅರಿವು ಮೂಡಿಸಲಾಯಿತು.


Share