ಕರೋನಾ: ರಾಜ್ಯದಲ್ಲಿ ಆರ್ಥಿಕ ವ್ಯವಸ್ಥೆ ಕುಸಿತ

275
Share

ಕೋವಿಡ್-19 ಆರ್ಥಿಕ ಸ್ಪಂದನೆ ಕಾರ್ಯಕ್ರಮ

 ಕೋವಿಡ್-19 ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಆರ್ಥಿಕ ವ್ಯವಸ್ಥೆ , ಕುಸಿಯುತ್ತಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಅವರು ತಿಳಿಸಿದರು. .ಇಲವಾಲದಲ್ಲಿ ಕೆ.ಆರ್.ಎಸ್ ನಿಸರ್ಗ ವಸತಿ ಬಡಾವಣೆಗೆ ಭೂಮಿ ಭೂಮಾಲೀಕರಿಗೆ ಸಾಂತ್ವನ ನಿವೇಶನ ವಿತರಣಾ ಸಮಾರಂಭದ ಭಾಷಣದಲ್ಲಿ ತಿಳಿಸಿದರು.

ಇಂತಹ ಕಷ್ಟಕರ ಸನ್ನಿವೇಶದಲ್ಲಿ ಭಾರತದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಕಾರಿ ಸಂಸ್ಥೆಗಳ ಮತ್ತು ಸಹಕಾರಿಗಳ ಪಾತ್ರ ಬಹಳ ಮುಖ್ಯವಾಗಿದೆ, ದೇಶ ಮತ್ತು ರಾಜ್ಯದ ಯಾವುದೇ ಕ್ಲಿಷ್ಟಕರ ಸಂದರ್ಭದಲ್ಲಿ ಸಹಕಾರಿ ವ್ಯವಸ್ಥೆಯು ಎದೆಗುಂದದೇ ಎಲ್ಲಾ ವರ್ಗದ ಜನಗರಿಗೆ ತನ್ನ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತದೆ. ಈ ದಿನ ಬೆಳಗಾವಿ ಪ್ರಾಂತದ ಧಾರವಾಡ ಜಿಲ್ಲೆಯಲ್ಲಿ ಈ ’ಆರ್ಥಿಕ ಸ್ಪಂದನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ ರೈತರಿಗೆ ಮತ್ತು ಜನಸಾಮಾನ್ಯರಿಗೆ ಸಹಕಾರ ಇಲಾಖೆ ವತಿಯಿಂದ ದೊರೆಯಬಹುದಾದ ಸಾಲ-ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಉದ್ದೇಶಿಸಲಾಗಿದೆ.

 ಭಾರತ ದೇಶದಲ್ಲಿ ಸಹಕಾರ ರಂಗದಲ್ಲಿ ಪ್ರಪಥಮ ಬಾರಿಗೆ ಸಹಕಾರ ಪಿತಾಮಹರಾದ ಶ್ರೀ. ಸಿದ್ದನಗೌಡಾ ಸಣ್ಣರಾಮನಗೌಡಾ ಪಾಟೀಲ ಇವರು ಕರ್ನಾಟಕ ರಾಜ್ಯದಲ್ಲಿ, ಬೆಳಗಾವಿ ಪ್ರಾಂತದ ಗದಗ ಜಿಲ್ಲೆಯಲ್ಲಿ ಸನ್ 1905ರಲ್ಲಿ ಕಣಗಿನಹಾಳ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪನೆ ಮಾಡಿದ್ದು, ಹೆಮ್ಮೆಯ ವಿಷಯ.

 ಅದೇ ರೀತಿಯಾಗಿ ಪ್ರಸ್ತುತ ಕರೋನಾ ಸಾಂಕ್ರಾಮಿಕದಿಂದ ದೇಶ ತತ್ತರಿಸಿರುವ ಸಂದರ್ಭದಲ್ಲಿ ನಮ್ಮ ಸಹಕಾರಿಗಳ ಸೇವೆ ಮಹತ್ತರವಾಗಿದೆ, ಸನ್ಮಾನ್ಯ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರಿ ನಿಧಿಗೆ ಸಹಕಾರಿ ಸಂಸ್ಥೆಗಳ ವತಿಯಿಂದ ರೂ. 53.00 ಕೋಟಿಗಳ ದೇಣಿಗೆ ನೀಡಲಾಗಿರುತ್ತದೆ. ಅಲ್ಲದೆ ರಾಜ್ಯದ ಸುಮಾರು 42524 ಸಂಖ್ಯೆಯ ಆಶಾ ಕಾರ್ಯಕರ್ತೆಯರಿಗೆ ತಲಾ ರೂ. 3,000/- ಗಳಂತೆ ಒಟ್ಟು ರೂ. 12.75 ಕೋಟಿಗಳನ್ನು ಪ್ರೊತ್ಸಾಹಧನವಾಗಿ ಪಾವತಿಸಲಾಗಿದೆ.

 ಬೆಳಗಾವಿ ಪ್ರಾಂತದಲ್ಲಿರುವ ಸುಮಾರು 11,652 ಸಂಖ್ಯೆಯ ಆಶಾ ಕಾರ್ಯಕರ್ತೆಯರಿಗೆ ತಲಾ ರೂ. 3000 /- ಗಳಂತೆ ಒಟ್ಟು ರೂ. 3.49 ಕೋಟಿಗಳನ್ನು ಪ್ರೊತ್ಸಾಹಧನವಾಗಿ ಪಾವತಿಸಲಾಗಿದೆ.

 ಕೋವಿಡ್-19 ರ ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನಮ್ಮ ಪ್ರಧಾನ ಮಂತ್ರಿಗಳು ’ಆತ್ಮ ನಿರ್ಭರ್ ಭಾರತ್’ ಎಂಬ ಒಂದು ಅಭೂತ ಪೂರ್ವ ಯೋಜನೆಯನ್ನು ಜಾರಿಗೊಳಿಸುವುದರ ಮೂಲಕ ನಮ್ಮ ರಾಜ್ಯಕ್ಕೆ ರೂ. 4525.00 ಕೋಟಿಗಳ ಆರ್ಥಿಕ ನೆರವನ್ನು ಹಂಚಿಕೆ ಮಾಡಿರುತ್ತಾರೆ. ಈ ಯೋಜನೆಯಡಿಯಲ್ಲಿ ವಿಶೇಷವಾಗಿ ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸುವ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ಈ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ 5,340 ಸದಸ್ಯರಿಗೆ ರೂ. 16.33 ಕೋಟಿಗಳ ಹೈನುಗಾರಿಕೆ ಸಾಲ ವಿತರಿಸಲಾಗಿದೆ.

 ಅದೇ ರೀತಿ ಮತ್ತು ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಬಹು ಉಪಯೋಗಿ ಸೇವಾ ಕೇಂದ್ರಗಳನ್ನಾಗಿ (ಒSಅ) ಪರಿವರ್ತಿಸುವ ಯೋಜನೆಯಡಿ ಈವರೆವಿಗೆ 175 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಲವರ್ಧನೆಗೆ ರೂ.81.64 ಕೋಟಿಗಳ ಸೌಲಭ್ಯ ಒದಗಿಸುವುದರ ಮೂಲಕ ಸಾಧನೆ ಮಾಡಲಾಗಿರುತ್ತದೆ.
 ರಾಜ್ಯದ 37,000 ಸಹಕಾರ ಸಂಘಗಳಿಂದ ರೂ. 39 ಸಾವಿರ ಕೋಟಿಗಳ ವಿವಿಧ ರೀತಿಯ ಸಾಲಗಳನ್ನು ವಿತರಿಸಲು ಪ್ರಸ್ತುತ 2020-21 ರ ಆರ್ಥಿಕ ವರ್ಷದಲ್ಲಿ ಗುರಿ ಹೊಂದಲಾಗಿದೆ.

 ಬೆಳಗಾವಿ ಪ್ರಾಂತದ ಏಳು ಜಿಲ್ಲೆಗಳಲ್ಲಿ 2020-21ರ ಆರ್ಥಿಕ ವರ್ಷದಲ್ಲಿ ಪ್ರಾಂತದ 11948 ಸಹಕಾರ ಸಂಘಗಳ ಮೂಲಕ ಸುಮಾರು ರೂ. 29.69 ಲಕ್ಷ ಸದಸ್ಯರಿಗೆ ರೂ. 17,117 ಕೋಟಿಗಳ ವಿವಿಧ ರೀತಿಯ ಸಾಲ ವಿತರಣೆ ಮಾಡಲು ಗುರಿ ಹೊಂದಲಾಗಿದೆ. ಪ್ರಸ್ತುತ ವರ್ಷದಲ್ಲಿ ಸುಮಾರು 10.34 ಲಕ್ಷ ರೈತರಿಗೆ ರೂ. 5629 ಕೋಟಿಗಳ ಬೆಳೆ ಸಾಲ ವಿತರಿಸಲು ಗುರಿ ಹೊಂದಿದ್ದು, ಈವರೆಗೆ 7.05 ಲಕ್ಷ ರೈತರಿಗೆ ರೂ. 3686 ಕೋಟಿಗಳ ಸಾಲ ವಿತರಣೆ ಮಾಡುವುದರ ಮೂಲಕ ಶೇ. 65 ರಷ್ಟು ಸಾಧನೆ ಮಾಡಲಾಗಿದೆ.

 32,725 ಹೊಸ ರೈತರಿಗೆ ರೂ. 242 ಕೋಟಿಗಳ ಸಾಲವನ್ನು ಮತ್ತು 78,973 ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸದಸ್ಯರಿಗೆ ರೂ. 364.19 ಕೋಟಿ ಸಾಲವನ್ನು ವಿತರಿಸಲಾಗಿದೆ.

 3654 ಜನರಿಗೆ ರೂ. 113 ಕೋಟಿಗಳ ಮಧ್ಯಮಾವಧಿ ಸಾಲ ಮತ್ತು 2786 ಜನರಿಗೆ ರೂ. 30 ಕೋಟಿಗಳ ದೀರ್ಘಾವಧಿ ಸಾಲವನ್ನು ಸಹ ವಿತರಿಸಲಾಗಿದೆ.

 ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಐದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳು ಕೆಲಸ ನಿರ್ವಹಿಸುತ್ತಿದ್ದು, ಇವುಗಳ ಮೂಲಕ 6289 ಸ್ವ-ಸಹಾಯ ಸಂಘಗಳಿಗೆ ರೂ. 165 ಕೋಟಿಗಳ ಸಾಲ ವಿತರಿಸುವುದರ ಮೂಲಕ ಸ್ತ್ರೀಯರ ಆರ್ಥಿಕ ಬಲವರ್ಧನೆಗೆ ನೇರವಾಗಿ ಶ್ರಮಿಸುತ್ತಿವೆ. ಸರ್ಕಾರದ ಧ್ಯೆಯೋದ್ದೇಶಗಳಲ್ಲಿ ಒಂದಾಗಿರುವ ಸ್ತ್ರೀ ಆರ್ಥಿಕ ಬಲವರ್ಧನೆಗೆ ಸಹಕಾರಿ ವ್ಯವಸ್ಥೆಯು ಸಂಪೂರ್ಣವಾಗಿ ಸ್ಪಂದಿಸುತ್ತಿದೆ.

 ಡಿಸಿಸಿ ಬ್ಯಾಂಕುಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ’ಬಡವರ ಬಂದು’ ಯೋಜನೆಯಡಿ 6970 ಬೀದಿ ಬದಿ ವ್ಯಾಪಾರಿಗಳಿಗೆ ರೂ. 4.84 ಕೋಟಿಗಳ ಮತ್ತು ಕಾಯಕ ಯೋಜನೆಯಡಿ 409 ಸ್ವ-ಸಹಾಯ ಗುಂಪುಗಳಿಗೆ (SHG) ರೂ. 15 ಕೋಟಿಗಳ ಸಾಲವನ್ನು ವಿತರಿಸಲಾಗಿರುತ್ತದೆ.

 ಪ್ರಾಂತದ ವ್ಯಾಪ್ತಿಯ ಪಟ್ಟಣ ಸಹಕಾರ ಬ್ಯಾಂಕುಗಳು ತನ್ನ ಸದಸ್ಯರಿಗೆ ಗೃಹ ಸಾಲ, ವೈಯಕ್ತಿಕ ಸಾಲ, ವಾಹನ ಸಾಲ ಹಾಗೂ ಚಿನ್ನಭರಣ ಸಾಲವಾಗಿ 1,65,900 ಜನರಿಗೆ ರೂ. 24,13.00 ಕೋಟಿಗಳ ಸಾಲ ವಿತರಿಸುವ ಮೂಲಕ ಪ್ರಸ್ತುತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ಸ್ಪಂದಿಸುತ್ತಿವೆ.

 ಅದೇ ರೀತಿಯಾಗಿ ಪಟ್ಟಣ ಪ್ರದೇಶದ ಪತ್ತಿನ ಸಹಕಾರ ಸಂಘಗಳೂ ಸಹ ರೂ. 2.96 ಲಕ್ಷ ಜನರಿಗೆ ರೂ. 3007.00 ಕೋಟಿಗಳ ಸಾಲವನ್ನು ವಿತರಿಸಿರುತ್ತವೆ.

 ಈ ಪ್ರಕಾರವಾಗಿ ಕರೋನಾ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಸಹ ಏಳು ಜಿಲ್ಲಾ ವ್ಯಾಪ್ತಿಯ ಸಹಕಾರ ಸಂಘಗಳು 11.62 ಲಕ್ಷ ಜನರಿಗೆ ರೂ. 9534.00 ಕೋಟಿಗಳ ಸಾಲ-ಸೌಲಭ್ಯವನ್ನು ಕಳೆದ 7 ತಿಂಗಳಲ್ಲಿ ಹಂಚಿಕೆ ಮಾಡಿರುತ್ತವೆ. ಆ ಮೂಲಕ ರೈತರಿಗೆ ಮತ್ತು ಜನಸಾಮಾನ್ಯರಿಗೆ ಕರೋನಾ ಸಂಕಷ್ಟ ಸಂದರ್ಭದಲ್ಲಿ ಆರ್ಥಿಕವಾಗಿ ತೊಂದರೆಗಳು ಉಂಟಾಗದ ರೀತಿಯಲ್ಲಿ ಸ್ಪಂದಿಸಿರುತ್ತವೆ.
 ಈ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮೂರು ಹಾಲು ಒಕ್ಕೂಟಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿವೆ. ಈ ಕರೋನಾ ಸಂಕಷ್ಟದ ಸಂದರ್ಭದಲ್ಲಿ ಪ್ರತೀ ದಿನ ರೈತರಿಂದ ಬರುವ ಹಾಲನ್ನು ಸಂಪೂರ್ಣವಾಗಿ ಖರೀದಿಸುವುದರ ಮೂಲಕ ರೈತರಿಗೆ ಹಾಲು ಉತ್ಪಾದನೆಗೆ ಸಹಕರಿಸಿರುತ್ತವೆ. ಅದೇ ರೀತಿಯಾಗಿ ಪಟ್ಟಣ ಪ್ರದೇಶದ ಜನಸಾಮಾನ್ಯರಿಗೆ ಲಾಕ್‌ಡೌನ್ ಸಂದರ್ಭದಲ್ಲಿಯೂ ಸಹ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಒದಗಿಸಿ ಕೊಡುವಲ್ಲಿ ಯಶಸ್ವಿಯಾಗಿವೆ. ಕರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಸರ್ಕಾರ ಉಚಿತವಾಗಿ ವಿತರಿಸಿದ ಹಾಲನ್ನು ಬಡ ವರ್ಗದವರಿಗೆ ತಲುಪಿಸುವಲ್ಲಿಯೂ ಸಹ ನಮ್ಮ ಹಾಲು ಒಕ್ಕೂಟಗಳು ಸಮರ್ಥವಾಗಿ ಕೆಲಸ ನಿರ್ವಹಿಸಿರುತ್ತವೆ. ಈ ಪರಿಶ್ರಮದಲ್ಲಿ ಭಾಗಿಯಾದ ಎಲ್ಲರಿಗೂ ನಾನು ವೈಯಕ್ತಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.

 ಈ ಮೂರು ಹಾಲು ಒಕ್ಕೂಟಗಳು ದಿನಂಪ್ರತಿ 5.76 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸಿ ರೂ. 2.89 ಲಕ್ಷ ಲೀಟರ್‌ಗಳಷ್ಟು ಹಾಲನ್ನು ಮಾರಾಟ ಮಾಡುತ್ತಿವೆ. ಉಳಿದ ಸುಮಾರು 2.87 ಲಕ್ಷ ಲೀಟರ್‌ಗಳಷ್ಟು ಹಾಲನ್ನು ಹಾಲಿನ ಪುಡಿ, ಮೊಸರು, ಬೆಣ್ಣೆ, ತುಪ್ಪ, ಲಸ್ಸಿ, ಮಸಾಲೆ ಮಜ್ಜಿಗೆ, ಸಿಹಿ ತಿನಿಸುಗಳಾದ ಪೇಡ, ಕೋವಾ, ಕ್ಯಾಶ್ಯೂ ಬರ್ಫಿ ಇತ್ಯಾದಿಗಳನ್ನು ತಯಾರಿಸುವಲ್ಲಿ ಉಪಯೋಗಿಸಿಕೊಳ್ಳಲಾಗುತ್ತಿದೆ. ಈ ಮೂರು ಹಾಲು ಒಕ್ಕೂಟಗಳ ಒಂದು ದಿನದ ಆರ್ಥಿಕ ವಹಿವಾಟು ರೂ. 2.43 ಕೋಟಿಗಳಾಗಿರುತ್ತದೆ. ಅಲ್ಲದೆ ಸರ್ಕಾರವು ಈ ಏಳು ಜಿಲ್ಲೆಗಳ ವ್ಯಾಪ್ತಿಗೆ ಪ್ರತೀ ಲೀಟರ್‌ಗೆ ರೂ. 5/- ರಂತೆ ಪ್ರೋತ್ಸಾಹಧನವಾಗಿ ಪ್ರತೀ ದಿನ ರೂ. 28.80 ಲಕ್ಷಗಳನ್ನು ಪಾವತಿಸುತ್ತಿದೆ. ಇಂತಹ ಒಂದು ಬೃಹತ್ ವ್ಯವಹಾರವನ್ನು ನನ್ನ ಇಲಾಖೆಯಾದ ಸಹಕಾರ ಇಲಾಖೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಾಲು ಉತ್ಪಾದಿಸುವ ರೈತ ಸಮುದಾಯಕ್ಕೆ ಮತ್ತು ಪಟ್ಟಣ ಪ್ರದೇಶದ ಎಲ್ಲಾ ವರ್ಗದ ಜನರಿಗೆ ಸೇವೆ ಸಲ್ಲಿಸುತ್ತಿರುವು ನನಗೆ ಹೆಮ್ಮೆಯ ವಿಷಯವಾಗಿದೆ. ಆ ಮೂಲಕ ಸುಮಾರು 6,000 ಸಂಖ್ಯೆಯ ಉದ್ಯೋಗಾವಕಾಶಗಳನ್ನು ಒದಗಿಸಿ ಕೊಟ್ಟಿರುವುದು ಶ್ಲಾಘನೀಯ ವಿಷಯವೇ ಆಗಿದೆ.

 ಇಂದಿನ ಈ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ 54 ಫಲಾನುಭವಿಗಳಿಗೆ ರೂ. 47.54 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಬೆಳಗಾವಿ ಪ್ರಾಂತ, ಇತರೆ ಪ್ರಾಂತಗಳಿಗಿಂತ ವಿಭಿನ್ನವಾದ ಸಹಕಾರ ಸಂಘಗಳನ್ನು ಹೊಂದಿರುವ ಪ್ರಾಂತವಾಗಿರುತ್ತದೆ. ಅದರಲ್ಲಿ ವಿಶೇಷಾವಾಗಿ ವಿದ್ಯುತ್ ಕ್ಷೇತ್ರದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಹುಕ್ಕೇರಿ ತಾಲೂಕಿನ ವ್ಯಾಪ್ತಿಯಲ್ಲಿ ಗ್ರಾಮೀಣ ವಿದ್ಯುಚ್ಯಕ್ತಿ ಸಹಕಾರಿ ಸಂಘ ನಿ., ಹುಕ್ಕೇರಿ, ಸಂಘವು ಕಾರ್ಯನಿರ್ವಹಿಸುತ್ತಿದ್ದೆ.

 ವೈದ್ಯಕೀಯ ಕ್ಷೇತ್ರದಲ್ಲಿ ಜೆ.ಜಿ. ಸಹಕಾರಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ನಿ., ಘಟಪ್ರಭಾ, ತಾ: ಗೋಕಾಕ, ಎಂಬ ಸಹಕಾರ ಸಂಘವು ಆರೋಗ್ಯ ಸೇವೆಯನ್ನು ಒದಗಿಸುತ್ತಾ ಈ ಭಾಗದಲ್ಲಿ ಹೆಸರುವಾಸಿಯಾಗಿರುತ್ತದೆ.

 ಕ್ರೀಡಾ ಕ್ಷೇತದಲ್ಲಿ ಬೆಳಗಾವಿ ಜಿಲ್ಲೆಯಲ್ಲಿರುವ ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರಿ ನಿ., ಚಂದರಗಿ ತಾ:ರಾಮದುರ್ಗ, ಎಂಬ ಸಹಕಾರ ಸಂಘವು ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿರುತ್ತದೆ.

 ದಿ. ತೋಟಗಾರ್ಸ್ ಕೋ-ಅಪ್ ಸೇಲ್ ಸೊಸಾಯಿಟಿ ನಿ. ಶಿರಸಿ, (ಟಿಎಸ್‌ಎಸ್), ಈ ಸಂಸ್ಥೆಯು ಅಡಕೆ ಮಾರಾಟ ಮಾಡುವ ಬಹು ದೊಡ್ಡ ಸಂಸ್ಥೆಯಾಗಿದ್ದು, ಇಲ್ಲಿಂದ ದೇಶದ ಇತರೇ ರಾಜ್ಯಗಳಿಗೆ ಅಡಕೆ ರಪ್ತು ಮಾಡಲಾಗುತ್ತದೆ. ಹಾಗೂ ತನ್ನ ಸದಸ್ಯರಿಗೆ ಎಲ್ಲ ತರಹದ ಸೇವೆಗಳನ್ನು ಒದಗಿಸುತ್ತಾ ಬಂದಿರುತ್ತದೆ.
 ಖಾದಿ ಗ್ರಾಮೋದ್ಯೋಗ ಸಹಕಾರ ಉತ್ಪಾದಕ ಸಂಘ ನಿ., ಹುದಲಿ, ತಾ: ಬೆಳಗಾವಿ ಈ ಸಂಘವು ಖಾದಿ, ಪಾಲಿ ವಸ್ತ್ರ, ಹಣ್ಣಿನ ಪಕ್ಕಾ ಮಾಲು, ಸಾಬೂನು, ಊದುಬತ್ತಿ ಹಾಗೂ ಗೋಬರ್ ಗ್ಯಾಸ್ ತಯಾರಿಕಾ ಘಟಕಗಳನ್ನು ಹೊಂದಿದ್ದು ಅನೇಕ ಜನರಿಗೆ ಉದ್ಯೋಗವಕಾಶವನ್ನು ಕಲ್ಪಿಸಿಕೊಟ್ಟಿರುತ್ತದೆ.

 ಇಂತಹ ಸಾಧನೆ ನಿಜಕ್ಕೂ ಮೆಚ್ಚಲೇಬೇಕಾಗಿರುತ್ತದೆ. ಕೋವಿಡ್-19 ರ ಸಂದರ್ಭದಲ್ಲಿ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿರುವ ನನ್ನ ಇಲಾಖಾ ವ್ಯಾಪ್ತಿಯ ಎಲ್ಲಾ ಸಹಕಾರಿ ಸಂಸ್ಥೆ ಮತ್ತು ಬ್ಯಾಂಕುಗಳಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 ಬಡವರಿಗಾಗಿ, ದೀನ ದಲಿತರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ಬೀದಿ ಬೀದಿ ವ್ಯಾಪಾರಸ್ಥರಿಗೆ, ಬಡ ರೈತ ಮಹಿಳೆಯರಿಗೆ, ಸಣ್ಣ ಅತೀ ಸಣ್ಣ ರೈತರಿಗೆ, ಸರ್ಕಾರದಿಂದ ಜಾರಿಗೊಳಿಸಿದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವ ಯಾವದಾದರೂ ಇಲಾಖೆ ಇದ್ದರೆ ಅದು ಸಹಕಾರ ಇಲಾಖೆಯಿಂದ ಮಾತ್ರ ಸಾಧ್ಯ. ಎಂದು ಹೆಮ್ಮೆಯಿಂದ ಹೇಳಲು ಇಚ್ಚೀಸುತ್ತೇನೆ. ಸಹಕಾರ ಸಂಘಗಳು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಜವಾಬ್ದಾರಿಯನ್ನು ನಿರ್ವಹಿಸುವಂತಾಗಲಿ ಎಂದು ಹಾರೈಸುತ್ತಾ, ನನ್ನ ಉದ್ಘಾಟನಾ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ.

ಇದೇ ವೇಳೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರು, ಶಾಸಕರುಗಳು, ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳು, ಹಿರಿಯ ಸಹಕಾರಿಗಳು ಉಪಸ್ಥಿತರಿದ್ದರು.

`ಜೈ ಹಿಂದ್, ಜೈ ಕರ್ನಾಟಕ, ಜೈ ಸಹಕಾರ’


Share