ಕರೋನ ಆರ್ಭಟಕ್ಕೆ ಮೈಸೂರು ನಗರಪಾಲಿಕೆ 3 ದಿನ ಬಂದ್:14 ಮಂದಿ Quarantine.

609
Share

ಮೈಸೂರು ನಗರ ಪಾಲಿಕೆ ಸೀಲ್ ಡೌನ್, ಕರೋನಾ ಯಾರನ್ನೂ ಬಿಡುವುದಿಲ್ಲ . ಹಾಗೇ ನಗರ ಪಾಲಿಕೆಯನ್ನೂ. ಪಾಲಿಕೆಯ ನೌಕರರೊಬ್ಬರಿಗೆ ಸೋಂಕು ದೃಢಪಟ್ಟಿದ್ದು ಈತ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿದುಬಂದಿದೆ. ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ 14 ಮಂದಿಗೆ quarantine ಮಾಡಲಾಗಿದೆ.ಪ್ರತಿ ನಿತ್ಯದ ಕೆಲಸ ಕಾರ್ಯಗಳಿಗಾಗಿ ಈ ವ್ಯಕ್ತಿ ಎಲ್ಲಾ ಕಚೇರಿಗಳಲ್ಲಿ ಅಲೆದಾಡಿರುವುದಾಗಿ,ಇದೀಗ ಈ ವ್ಯಕ್ತಿಗೆ ಘೋರ ಕಾಯಿಲೆ ಬಂದಿರುವುದು ತಿಳಿದು ಬಂದ ತಕ್ಷಣ ನಗರ ಪಾಲಿಕೆ ದಂಗು ಬಡಿದಿದೆ .ಮುನ್ನೆಚ್ಚರಿಕೆಯ ಕ್ರಮವಾಗಿ ಈ ಸಂಜೆಯಿಂದಲೇ ಕೆಲ ಕಾಲ ಅಥವಾ ಕೆಲ ದಿನ ಪಾಲಿಕೆಯ ಕಟ್ಟಡವನ್ನು ಸ್ಯಾನಿ ಟೈಯ್ಸ್ ಮಾಡುವ ಸಲವಾಗಿ ಮುಚ್ಚಬೇಕು ಎಂಬ ತೀರ್ಮಾನಕ್ಕೆ ಆಡಳಿತ ಮಂಡಳಿ ಬಂದಿದೆ ಎಂದು ತಿಳಿದು ಬಂದಿದೆ .ಪಾಲಿಕೆಯನ್ನು ಮುಚ್ಚಬೇಕೆ ಬೇಡವೇ ಎಂಬ ಜಿಜ್ಞಾಸೆಯಲ್ಲಿ ಈಗ ಪಾಲಿಕೆಯು ಸಿಲುಕಿದ್ದು ಇಂದು ಸಂಜೆಯ ವೇಳೆಗೆ ಉನ್ನತ ಮಟ್ಟದ ಸಮಿತಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿದು ಬಂದಿದೆ .ಪಾಲಿಕೆಯ ಮುಖ್ಯ ದ್ವಾರದಲ್ಲಿ ತಾಪ ತಪಾಸಣೆ ಹಾಗೂ ಕೈ ಸ್ಯಾನಿಟೈಸರ್ ಗಳನ್ನು ಬಳಸಿ ಒಳ ಬರುವವರನ್ನು ನಿಗಾವಹಿಸಲಾಗುತ್ತಿದೆ ಯಾದರೂ ಕೆಲವು ನೌಕರರು ಮತ್ತು ಅಧಿಕಾರಿಗಳು ಇದು ತಮಗೆ ಸಂಬಂಧಿಸಿಯೇ ಇಲ್ಲ ಎಂಬಂತೆ ಓಡಾಡುತ್ತಿರುವುದು ಸರ್ವೇ ಸಾಧಾರಣವಾಗಿ ಪಾಲಿಕೆಯಲ್ಲಿ ಕಂಡು ಬರುವುದು .ಇಂತಹ ಧೋರಣೆಗಳಿಗೆ ಈಗ ಅವರೆ ಬೆಲೆ ತೆತ್ತಬೇಕಾಗಿದೆ .ನಗರ ನಿರ್ವಹಣೆಗಾರರಿಗೆ ಈ ಪರಿಸ್ಥಿತಿ ಬಂದರೆ ಸಾಮಾನ್ಯ ಜನರ ಗತಿ ಏನು?ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಪ್ರತಿನಿತ್ಯ ಸಾವಿರಾರು ಕಡತಗಳ ವ್ಯವಹಾರವು ಈ ಕೇಂದ್ರೀಕೃತ ಕಟ್ಟಡದಲ್ಲಿ ನಡೆಯುವುದರಿಂದ ಈಗ ಇದರ ಪರ್ಯಾಯ ವ್ಯವಸ್ಥೆ ಎಲ್ಲಿ? ಮಾಡಿಕೊಳ್ಳಬೇಕೆಂಬುದೇ ಅಧಿಕಾರಿಗಳಿಗೆ ದೊಡ್ಡ ಚಿಂತೆ !!


Share