ಕರ್ನಾಟಕದ ಸಿನಿ ಶೆಟ್ಟಿಗೆ 2022ರ ‘ ಮಿಸ್ ಇಂಡಿಯಾ ‘ ಕಿರೀಟ

595
Share

ಕರ್ನಾಟಕದ 21 ವರ್ಷದ ಸಿನಿ ಶೆಟ್ಟಿಯವರನ್ನು ಮಿಸ್ ಇಂಡಿಯಾ 2022 ರ ವಿಜೇತರೆಂದು ಜುಲೈ 3 ರಂದು ಘೋಷಿಸಲಾಯಿತು. ಮಿಸ್ ಇಂಡಿಯಾ 2020 , ತೆಲಂಗಾಣದ ಮಾನಸಾ ವಾರಣಾಸಿ ತನ್ನ ಉತ್ತರಾಧಿಕಾರಿ ಸಿನಿ ಮಿಸ್ ಇಂಡಿಯಾ 2022 ಕಿರೀಟವನ್ನು ಸಿನಿ ಶೆಟ್ಟಿಯವರಿಗೆ ತೊಡಿಸಿದರು.
ಈ ಕಾರ್ಯಕ್ರಮವು ಭಾನುವಾರ ಸಂಜೆ ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು.
ಸಿನಿ ಶೆಟ್ಟಿ ಕರ್ನಾಟಕ ಮೂಲದವರಾಗಿದ್ದು ಪ್ರಸ್ತುತ ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್ ( ಸಿಎಫ್‌ಎ ) ಕೋರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ . ಅವರು ಈಗ ಪ್ರತಿಷ್ಠಿತ 71 ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ವರದಿಯಾಗಿದೆ.


Share