ಕಲಿಯುಗದಲ್ಲಿ, ಕಷ್ಟ, ದುಃಖ ‌ನಾಶ‌ಮಾ ಡ ಲೆಂದೇ ‌ಆಂಜನೇಯ‌ ಸ್ವಾಮಿ ಅವತರಿಸುತ್ತಾರೆ: ಶ್ರೀ ಗಣಪತಿ ಸ್ವಾಮೀಜಿ

117
Share

ಕಲಿಯುಗದಲ್ಲಿರುವ ಕಷ್ಟ, ದುಃಖ ‌ನಾಶ‌ಮಾ ಡ ಲೆಂದೇ ‌ಆಂಜನೇಯ‌ ಸ್ವಾಮಿ ಅವತರಿಸುತ್ತಾರೆ ಎಂದು ಅವಧೂತ ಪದ್ಧತಿ ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಹನುಮಂತ ಜಯಂತಿ ಸಂಬಂಧವಾಗಿ ತಿಳಿಸಿದರು

ಮೈಸೂರು: ಕಲಿಯುಗದಲ್ಲಿ ಕಾಡುತ್ತಿರುವ ಎಲ್ಲಾ‌ ಬಗೆಯ ಕಷ್ಟ, ದುಃಖ ‌ನಾಶ‌ ಮಾಡಲೆಂದೇ ಶ್ರೀ ‌ಆಂಜನೇಯ‌ ಸ್ವಾಮಿ ಅವತರಿಸಿ ಬರುತ್ತಾರೆ ಎಂದು ‌ಶ್ರೀ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನುಡಿದರು

ಹನುಮದ್ ಜಯಂತಿ ‌ ಅಂಗವಾಗಿ ಅವಧೂತ ದತ್ತಪೀಠದ ಆವರಣದಲ್ಲಿರುವ ಶ್ರೀ ಕಾರ್ಯ ಸಿದ್ದಿ ಹನುಮಾನ್ ಮಂದಿರದಲ್ಲಿ ವಿಶೇಷ ಪೂಜಾಕಾರ್ಯ ‌ನೆರವೇರಿಸಿದ ನಂತರ ಭಕ್ತರಿಗೆ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದರು.

ರಾಮಾಯಣ‌ ಕಾಲದಲ್ಲಿ ಶ್ರೀರಾಮ,ಸೀತಾಮಾತೆಯವರ‌‌ ಕಷ್ಟಗಳನ್ನೇ ದೂರ ಮಾಡಿದ ಹನುಮಂತ ಸಾಮಾನ್ಯ ಮನುಜರ ದುಃಖ‌ ದೂರಮಾಡಲಾರನೆ.

ಖಂಡಿತಾ‌ ಹನುಮನನ್ನು ಭಕ್ತಿಯಿಂದ‌ ಪೂಜಿಸಿ ಆರಾದನೆ ಮಾಡಿ ಪ್ರಾರ್ಥಿಸಿದರೆ‌ ಆತ ಎಲ್ಲರ ಕಷ್ಟ,ಕೋಟಲೆಗಳನ್ನು ದೂರ ಮಾಡುತ್ತಾನೆ ಎಂದು ತಿಳಿಸಿದರು.

ಹನುಮನ‌‌ ಜನ್ಮ ಸ್ಥಳದ ಬಗ್ಗೆ ಗೊಂದಲಗಳಿವೆ‌
ಕೆಲವರು‌ ಅಂಜನಾದ್ರಿ ಎನ್ನುತ್ತಾರೆ ಇನ್ಯಾರೋ ಇನ್ನೊಂದು ಸ್ಥಳ‌ ಹೇಳುತ್ತಾರೆ. ಅವನ ಹುಟ್ಟಿದ‌ ಸ್ಥಳ ಎಲ್ಲಾದರೂ‌ ಆಗಿರಲಿ ಅವನನ್ನು ನಂಬಿ‌ ‌ಶುದ್ದ ಮನಸ್ಸಿನಿಂದ ಪ್ರಾರ್ಥಿಸಿ ಎಂದು ‌ಸ್ವಾಮೀಜಿ ನುಡಿದರು.

ನಮ್ಮ ಮಠದ‌ ಆವರಣದಲ್ಲಿ 25 ವರ್ಷಗಳಿಂದ‌ ಬಯಲು ಆಂಜನೇಯನಿಗೆ ಪೂಜೆ ಮಾಡಲಾಗುತ್ತಿತ್ತು.ಈಗ್ಗೆ 10 ವರ್ಷಗಳಿಂದ ಮಂದಿರ ನಿರ್ಮಿಸಿ ಪೂಜೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ಇಲ್ಲಿ‌ ಮೂರು ಆಂಜನೇಯ ಮೂರ್ತಿಗಳಿವೆ.ಒಂದು ಆಕಾಶದಲ್ಲಿ ಇನ್ನೊಂದು ಮಧ್ಯದಲ್ಲಿ ಮತ್ತೊಂದು ಪಾತಾಳದಲ್ಲಿ ಪ್ರತಿಷ್ಟಾಪನೆ ಮಾಡಲಾಗಿದೆ ಎಂದು ಹೇಳಿದರು.

ರಾಮ-ರಾವಣರ ಯುದ್ಧ ನಡೆಯುತ್ತಿದ್ದಾಗ ರಾವಣನ ಒಬ್ಬ ಮಾಯಾವಿ ತಮ್ಮ ರಾಮ ಮತ್ತು ಲಕ್ಷ್ಮಣನನ್ನು ಮಾಯೆಯಿಂದ ಅಪಹರಿಸಿಬಿಟ್ಟಿದ್ದ.

ಈ ವಿಷಯ ತಿಳಿದ ರಾಮಭಕ್ತ ಹನುಮ ಪಾತಾಳದಲ್ಲಿ ರಾವಣನ ಸಹೋದರನನ್ನು ಕೊಂದು ರಾಮ,ಲಕ್ಷ್ಮಣರನ್ನು ರಕ್ಷಿಸಿ ಕರೆತರುತ್ತಾನೆ‌.

ಹೀಗೆ ದೇವರಾದ ರಾಮನ ಕಷ್ಟ‌ ತೊಡೆದ ಸೀತಾಮಾತೆಯ ದುಃಖ ದೂರ ಮಾಡಿದ
ಹನುಮ ನಮ್ಮ ತೊಂದರೆಗಳನ್ನೂ ದೂರ ಮಾಡುತ್ತಾನೆ ಅವನನ್ನು ನಂಬಿ ಪೂಜೆ ಮಾಡಿ ‌ಎಂದು ಶ್ರೀಗಳು ಸಲಹೆ ನೀಡಿದರು.

ಹನುಮ ಜಯಂತಿ ಸಡಗರ:
ಹನುಮದ್ ಜಯಂತಿ ಪ್ರಯುಕ್ತ ಆಶ್ರಮದ ಆವರಣದಲ್ಲಿರುವ ಕಾರ್ಯಸಿದ್ಧಿ ಹನುಮಾನ್ ದೇವಸ್ಥಾನವನ್ನು‌‌ ಮಾವಿನ ತೋರಣ‌,ಬಾಳೆಕಂದು ಹಾಗೂ ಪುಷ್ಪಮಾಲೆಗಳಿಂದ ಅಲಂಕರಿಸಲಾಗಿತ್ತು.

ಸ್ವಾಮಿಗೆ ಮುಂಜಾನೆಯಿಂದ‌‌ ವಿವಿಧ ಅಭಿಷೇಕ, ಪೂಜಾಕಾರ್ಯಗಳು ನೆರವೇರಿದವು.ಹನುಮ ಮೂರ್ತಿಯನ್ನು ಬಾಳೆ‌ ಹಣ್ಣಿನಿಂದ ಅಲಂಕರಿಸಲಾಗಿತ್ತು.

ಮೊದಲು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಶ್ರೀ ದತ್ತಾತ್ರೇಯ ಸ್ವಾಮಿಗೆ ಪೂಜೆ ನೆರವೇರಿಸಿದರು.

ನಂತರ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಪ್ರಾರ್ಥನಾ ಮಂದಿರದಿಂದ ಮೆರವಣಿಗೆಯಲ್ಲಿ ಕಾರ್ಯ ಸಿದ್ಧಿ ಹನುಮಾನ್ ದೇವಸ್ಥಾನಕ್ಕೆ ಆಗಮಿಸಿದರು.

ಮೆರವಣಿಗೆಯಲ್ಲಿ ವಿದೇಶಿ ಭಕ್ತರು ಸೇರಿದಂತೆ ನೂರಾರು ಮಂದಿ ಕೇಸರಿ ಬಾವುಟ ಹಿಡಿದು ಸಾಗಿದುದು ಎಲ್ಲರ ಗಮನ ಸೆಳೆಯಿತು.

ಇಂದು ಕಾರ್ಯ ಸಿದ್ಧಿ ಹನುಮಾನ್ ದೇವಸ್ಥಾನದ 10 ನೇ ವಾರ್ಷಿಕೋತ್ಸವ ಕಾಡಾ ಇದ್ದುದರಿಂದ ಹಾಗೂ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜೆಯನ್ನು ಗಣಪತಿ‌‌ ಶ್ರೀಗಳು ನೆರವೇರಿಸಿದರು.

ಮೂಲ ಹನುಮ ದೇವರು ಹಾಗೂ ಸ್ವರ್ಣ ಹನುಮ ಮೂರ್ತಿಗೆ ಸ್ವಾಮೀಜಿ 108 ಹನುಮ ಶ್ಲೋಕದೊಂದಿಗೆ ಅಷ್ಟೋತ್ತರ ಪೂಜಾ ಕೈಂಕರ್ಯ ನೆರವೇರಿಸಿದರು.

ನೆರೆದಿದ್ದ ಭಕ್ತ ಸಮೂಹದಿಂದ ಸಂಕಲ್ಪ ಮಾಡಿಸಿ ಕಾರ್ಯಸಿದ್ದಿ ಹನುಮನಿಗೆ ಭಕ್ತರ ಪರವಾಗಿ ಸ್ವಾಮೀಜಿ ಪೂಜೆ ಸಲ್ಲಿಸಿ
ರಕ್ಷಾ ದಾರಗಳು ಹಾಗೂ ವಿವಿಧ‌ ಪುಷ್ಪಗಳಿಂದ ಅರ್ಚನೆ ನೆರವೇರಿಸಿದುದನ್ನು ಸಾವಿರಾರು ಭಕ್ತರು ಕಣ್ ತುಂಬಿಕೊಂಡರು.

ಪೂಜಾ ಕಾರ್ಯ ನೆರವೇರಿದ ನಂತರ ಶ್ರೀ ದತ್ತ‌ವಿಜಯಾನಂದ ತೀರ್ಥ ಸ್ವಾಮೀಜಿ ಅವರ ಮೂಲಕ ಸಾರ್ವಜನಿಕರ ಕಲ್ಯಾಣಾರ್ಥವಾಗಿ ಪೂರ್ಣ ಫಲ ಅರ್ಪಿಸಲಾಯಿತು.

ಬೆಳಿಗ್ಗೆ 7.15 ರಿಂದ ಮೂರೂವರೆ ಗಂಟೆಗಳ ಕಾಲ ಸತತವಾಗಿ ಭಕ್ತರು ದೇವಾಲಯದ ಆವರಣದಲ್ಲಿ ಹನುಮಾನ್ ಚಾಲೀಸ ಪಠಣವನ್ನು ಮಾಡಿದರು.


Share