ಕಾಂಗ್ರೆಸ್ಸಿಗೆ ಕರ್ನಾಟಕ ಜನತೆಯು ವೈರಿಗಳ ?

280
Share

ಕರ್ನಾಟಕ ಕಾಂಗ್ರೆಸ್ಸಿನಿಂದ ಜನವರಿ ಒಂಬತ್ತರಂದು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದು ಅದರ ಹಿಂದೆ ಯಾವುದೇ ರಾಜಕೀಯವಿಲ್ಲ , ಜನರ ಹಿತದ ದೃಷ್ಟಿಯಿಂದಷ್ಟೇ ಮಾಡುತ್ತಿರುವುದಾಗಿ ಕರ್ನಾಟಕದ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ರವರು ತಿಳಿಸಿದ್ದಾರೆ . ಜನರ ಪರವಾಗಿ ನಿಲ್ಲಬೇಕೆನ್ನುವ ಕಾಂಗ್ರೆಸ್ಸಿನ ನಿಲುವು ಸ್ವಾಗತಾರ್ಹ . ರಾಜಕೀಯ ಮರೆತು ಜನರಿಗಾಗಿ ದುಡಿಯ ಬೇಕೆನ್ನುವ ಹಂಬಲವು ಬಹಳ ಸಂತೋಷದ ವಿಷಯ. ಆದರೆ ಅದಕ್ಕೆ ಸರಿಯಾದ ಸಂದರ್ಭ ಇದಾ ಎನ್ನುವುದನ್ನು ಯೋಚಿಸಬೇಕು ಕಾಂಗ್ರೆಸ್ ಪಕ್ಷ .
ಉತ್ತರ ಪ್ರದೇಶದಲ್ಲಿ ಬರುವ ಚುನಾವಣೆಗಾಗಿ ಸರ್ವಪಕ್ಷಗಳಿಂದಲೂ ಭಾರಿ ಚುನಾವಣಾ ಪ್ರಚಾರ ನಡೆಯುತ್ತಿದೆ . ನಿನ್ನೆಯಷ್ಟೇ ಉತ್ತರ ಪ್ರದೇಶದ ಕಾಂಗ್ರೆಸ್ ಪಕ್ಷವು ಈ ವಾರದಲ್ಲಿ ಹಮ್ಮಿಕೊಂಡಿದ್ದ ಎಲ್ಲಾ ದೊಡ್ಡ ಪ್ರಚಾರ ಸಭೆಗಳನ್ನು ರದ್ದುಗೊಳಿಸಿದೆ . ಇದಕ್ಕೆ ಕಾರಣ ಹೆಚ್ಚಾಗುತ್ತಿರುವ ಕರೋನ. ಜನರ ಹಿತದೃಷ್ಟಿಯಿಂದ ಜನರಿಗೆ ತೊಂದರೆಯಾಗಬಾರದು ಎನ್ನುವ ಒಳ್ಳೆಯ ಉದ್ದೇಶದಿಂದ ರ್ಯಾಲಿಗಳನ್ನು ರದ್ದುಗೊಳಿಸಿರುವುದಾಗಿ ಪಕ್ಷವು ತಿಳಿಸಿದೆ .
ಹಾಗಾದರೆ ಪಕ್ಷದ ಯಾವ ನಿಲುವನ್ನು ಜನರು ನಂಬಬೇಕು ? ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದ ಜನತೆಯ ಬಗ್ಗೆ ಕಾಳಜಿ ಇಲ್ಲವೆ ? ಕರ್ನಾಟಕದಲ್ಲಿ ಕರೋನಾ ಯಾವ ಮಟ್ಟದಲ್ಲಿ ಹೋಗುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ? ಮೇಕೆದಾಟು ಪಾದಯಾತ್ರೆ ಯಾವ ರಾಜಕೀಯ ಉದ್ದೇಶದಿಂದಲೂ ನಡೆಸುತ್ತಿಲ್ಲ ಎಂದಿರುವ ಕಾಂಗ್ರೆಸ್ ಪಕ್ಷದ ನಿಲುವು ಎಷ್ಟರ ಮಟ್ಟಿಗೆ ಸತ್ಯ ಎಂಬುದು ತಿಳಿಯುತ್ತಿಲ್ಲ .
ಬಹಿರಂಗವಾಗಿ ಇಷ್ಟೊಂದು ತಾರತಮ್ಯ ತೋರುತ್ತಿರುವ ಕಾಂಗ್ರೆಸ್ಸಿನ ನಿಲುವಿಗೆ ಏನು ಹೇಳಬೇಕೋ ಗೊತ್ತಿಲ್ಲ . ಉತ್ತರ ಪ್ರದೇಶದ ಜನರ ಬಗ್ಗೆ ಇರುವ ಕಾಳಜಿ ಕರ್ನಾಟಕದ ಜನರ ಬಗ್ಗೆ ಏಕೆ ಇಲ್ಲ . ಅಲ್ಲಿ ಬರುವ ಕರೋನಾ ಕರ್ನಾಟಕದಲ್ಲಿ ಬರುವುದಿಲ್ಲವೇ ?
ಇವರ ರಾಜಕೀಯ ಚದುರಂಗದಾಟದಲ್ಲಿ ಬಲಿಯಾಗುವುದು ಸಾಮಾನ್ಯ ಜನರು . ಕಾಂಗ್ರೆಸ್ಸಿನ ನಿಷ್ಠಾವಂತರು ಅಲ್ಲದೆ ಸಾಮಾನ್ಯ ಜನರೆಲ್ಲರಿಗೂ ಇದರಿಂದ ತೊಂದರೆಯೇ ?
ಇಷ್ಟು ಸಾಮಾನ್ಯ ವಿಷಯ ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ ಎನ್ನುವ ಕೀಳರಿಮೆ ಭಾವನೆ ಕರ್ನಾಟಕದ ಜನತೆ ಮೇಲೆ ತೋರುತ್ತಿದ್ದಂತೆ ಇದೆ .
ರಾಜ್ಯಕೀಯ ಪ್ರದರ್ಶನ ಮಾಡಲು ಹೋಗಿ ಜನತೆಯ ಜೀವದೊಂದಿಗೆ ಆಟವಾಡುವುದನ್ನು ರಾಜಕೀಯ ಪಕ್ಷಗಳು ಮೊದಲು ನಿಲ್ಲಿಸಬೇಕು .
ಇಲ್ಲದಿದ್ದರೆ ಜನರೇ ಇವರಿಗೆ ತಕ್ಕ ಬುದ್ಧಿ ಕಲಿಸುತ್ತಾರೆ ಇದರಲ್ಲಿ ಸಂದೇಹವಿಲ್ಲ .

Share