ಕೊರೋನಾ ಆತಂಕ: ಮೈಸೂರು ಎಸಿಪಿ ಕಚೇರಿ ಸೀಲ್ ಡೌನ್

877
Share

ಮೈಸೂರು ಸಹಾಯಕ ಪೊಲೀಸ್ ಕಮಿಷನರ್ ಕಚೇರಿ, ಸಂಚಾರ ವಿಭಾಗ, ಇಂದು ಬೆಳಗ್ಗೆ ಸೀಲ್ ಡೌನ್ ಮಾಡಲಾಗಿದೆ. ಸಂಚಾರ ವಿಭಾಗ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರಿಗೆ ಕೊರೋನ ಪಾಸಿಟಿವ್ ಇರುವ ಹಿನ್ನೆಲೆಯಲ್ಲಿ ಎಸಿಪಿ ಕಚೇರಿಯನ್ನು ಸೀಲ್ಡೌನ್ ಮಾಡಲಾಯಿತು ಎಂದು ಹೇಳಲಾಗಿದೆ. ಎಸಿಪಿ ಕಚೇರಿಯೂ ನಗರದ ಹೃದಯ ಭಾಗದ ಶಿವರಾಮಪೇಟೆ ರಸ್ತೆಯಲ್ಲಿ ಇದ್ದು ಹಿಂದೆ ಈ ಸ್ಥಳದಲ್ಲಿ ನಲ್ಲಪ್ಪ ಪೊಲೀಸ್
ಠಾಣ ಇತ್ತು ಎಂದು ಹೇಳಲಾಗಿದೆ.

ಮೈಸೂರು ನಗರ: ಹೆಚ್ಚಾಗುತ್ತಿರುವ ಸೀಲ್ ಡೌನ್
ಮೈಸೂರಿನ ಶಿವರಾಂ ಪೇಟೆಯಲ್ಲಿರುವ ನಲ್ಲಪಟ್ಟಾಣ ಪೋಲಿಸ್ ಸ್ಟೇಷನ್ನ ಮಹಿಳಾ ಪೇದೆಯೊಬ್ಬರಿಗೆ ಕೊರೋನ ಸೋಂಕು ದೃಢ ಪಟ್ಟಿದ್ದು ಈ ಠಾಣೆಯನ್ನು ಸೀಲ್ಡೌನ್ ಮಾಡಲಾಯಿತು.
ಮೈಸೂರು ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು ನಗರ ಪ್ರದೇಶಗಳಲ್ಲಿ ಮಾಡುತ್ತಿರುವ ಸೀಲ್ ಡೌನ್ ಕೂಡ ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ. ಕುವೆಂಪು ನಗರ ಸೇರಿದಂತೆ ಟಿ.ಕೆ. ಲೇಔಟ್, ರಾಮಕೃಷ್ಣನಗರ, ಪೊಲೀಸ್ ಕ್ವಾಟ್ರಸ್ ಮುಂತಾದ ಸ್ಥಳಗಳಲ್ಲಿ ಸೀಲ್ ಡೌನ್ ಮಾಡಲಾಗಿದೆ. ಮೈಸೂರು ನಗರಪಾಲಿಕೆಯ ಮೂರನೇ ರೋಡ್ನಲ್ಲಿ ಹಾಗೂ ಪೊಲೀಸ್ ಕ್ವಾಟ್ರಸ್ ಬಳಿ ಹೆಚ್ಚಾಗಿ ಸೀಲ್ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.


Share