ಕೋವಿಡ್ ನಡುವೆ ಮಕ್ಕಳ ಭಿಕ್ಷಾಟನೆ ಮಾಡುವವರಿಗೆ ಪುನರ್ವಸತಿ ಕಲ್ಪಿಸಿ*.ವಿಕ್ರಂ ಅಯ್ಯಂಗಾರ್

238
Share

 

*ಕೋವಿಡ್ ನಡುವೆ ಮಕ್ಕಳ ಭಿಕ್ಷಾಟನೆ ಮಾಡುವವರಿಗೆ ಪುನರ್ವಸತಿ ಕಲ್ಪಿಸಿ*

ಕೋವಿಡ್ ಮೂರನೇ ಅಲೆಯ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ಭೀತಿಯ ಕಾಡುತ್ತಿರುವ ಈ ಸಂದರ್ಭದಲ್ಲಿ ನಗರ ಪ್ರದೇಶಗಳಲ್ಲಿ ಭಿಕ್ಷಾಟನೆಗೆ ಸಣ್ಣಮಕ್ಕಳ ತೊಡಗಿರುವುದು ಈಚೆಗೆ ಹೆಚ್ಚಾಗಿ ಕಾಣುತ್ತಿದೆ.ಲಾಕ್ ಡೌನ್ ಸಡಿಲಗೊಂಡ ಕಾರಣ ನಗರದ ಸಿಗ್ನಲ್ ಗಳಲ್ಲಿ ಮಹಿಳೆಯರು ಸಣ್ಣ ಸಣ್ಣ ಮಕ್ಕಳನ್ನು ಎತ್ತಿಕೊಂಡು ಭಿಕ್ಷಾಟನೆ ಮಾಡುತ್ತಿರುವುದು ಅತಿ ಹೆಚ್ಚಾಗಿ ಕಂಡುಬರುತ್ತಿದೆ.ಮಹಿಳೆಯರು ಸಣ್ಣ ಮಕ್ಕಳನ್ನು ತೋರಿಸಿ ಭಿಕ್ಷೆ ಕೇಳುವ ಪರಿಪಾಠ ಆತಂಕ ಸೃಷ್ಟಿಸುತ್ತಿದೆ .
ನಗರ ಮತ್ತು ಪಟ್ಟಣಗಳ ಸಿಗ್ನಲ್ಗಳಲ್ಲಿ ಭಿಕ್ಷಾಟನ ಮಾಡಿಕೊಂಡು ಜೀವನ ಸಾಗಿಸುವ ಕಾಯಕವನ್ನು ಮಹಿಳೆಯರು ಮತ್ತು ಮಕ್ಕಳು ಮಾಡುತ್ತಿದ್ದಾರೆ .ಇಂತಹ ಸ್ಥಳಗಳನ್ನು ಪತ್ತೆ ಹಚ್ಚಿ ಮಕ್ಕಳ ಅಭಿವೃದ್ಧಿ ಘಟಕ .ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪುನರ್ವಸತಿ ಕೇಂದ್ರ ಮತ್ತು ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆ ನಡೆಸಿ ಹಾದಿಬೀದಿಯಲ್ಲಿ ಭಿಕ್ಷಾಟನೆ ಮಾಡುತ್ತಿರುವ ಮಹಿಳೆಯರು ಮತ್ತು ಮಕ್ಕಳಿಗೆ ಮೂಲ ವಸತಿ ಕೇಂದ್ರವಿದೆಯಾ ಎಂದು ತಿಳಿದು ಇದ್ದವರಿಗೆ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಬೇಕು .ವಸತಿ ಸೌಲಭ್ಯ ವಿಲ್ಲದವರನ್ನು ಪತ್ತೆ ಹಚ್ಚಿ ಅಂಥವರನ್ನು ನಿರಾಶ್ರಿತರ ವಸತಿ ಕೇಂದ್ರಕ್ಕೆ ಸೇರಿಸಬೇಕು .
ಆದರೆ ಈ ಇಲಾಖೆಗಳು ಉದಾಸೀನಕ್ಕೆ ಕೋವಿಡ್ ನಡುವೆ ಮಹಿಳೆಯರು ಹಾಗೂ ಎಲೆ ಮಕ್ಕಳು ಭಿಕ್ಷಾಟನೆ ಮಾಡುವ ಮೂಲಕ ಕೋವಿಡ್ ಅನ್ನು ಒಬ್ಬರಿಂದ ಒಬ್ಬರಿಗೆ ಹರಡಲು ಕಾರಣವಾಗುತ್ತಿದೆ .ಕೂಡಲೇ ಇದಕ್ಕೆ ಸಂಬಂಧಪಟ್ಟ ಇಲಾಖೆ ಕ್ರಮ ಜರುಗಿಸಿ ಮುಂದಾಗುವ ದೊಡ್ಡ ಅನಾಹುತವನ್ನು ತಪ್ಪಿಸಬೇಕೆಂದು ಆಗ್ರಹಿಸುತ್ತೇನೆ

-ವಿಕ್ರಂ ಅಯ್ಯಂಗಾರ್
ಸಾಮಾಜಿಕ ಹೋರಾಟಗಾರರು ಮೈಸೂರು


Share