ಕೋವಿಡ್ -19 ಬಿಕ್ಕಟ್ಟಿನಲ್ಲಿ ಒಗ್ಗಟ್ಟು ಮತ್ತು ಭರವಸೆ ಪ್ರದರ್ಶಿಸಲು ನಯಾಗರಾ ಫಾಲ್ಸ್ ಭಾರತೀಯ ತ್ರಿವರ್ಣದೊಂದಿಗೆ ಬೆಳಗಿದ ದೀಪ

818
Share

ಕೆನಡಾದ ಒಂಟಾರಿಯೊದಲ್ಲಿನ ನಯಾಗರಾ ಜಲಪಾತವು ಕೋವಿಡ್ -19 ಎರೆಡನೆ ಅಲೆಯಿಂದ ತತ್ತರಿಸುತ್ತಿರುವ ಭಾರತ ದೇಶದೊಂದಿಗೆ ಐಕಮತ್ಯದಲ್ಲಿ ಭಾರತೀಯ ತ್ರಿವರ್ಣದೊಂದಿಗೆ ದೀಪ ಬೆಳಗಿಸಿತು. ಕಳೆದ 24 ಗಂಟೆಗಳಲ್ಲಿ ಭಾರತವು ಮೊದಲ ಬಾರಿಗೆ 4 ಲಕ್ಷ ಹೊಸ ಕೊರೋನ ಪ್ರಕರಣಗಳನ್ನು ದಾಖಲಿಸಿದೆ. “ಕೋವಿಡ್ -19 ರ ಪರಿಣಾಮವಾಗಿ ಭಾರತವು ಅಪಾರವಾದ ಮಟ್ಟದಲ್ಲಿ ಸೋಂಕು ಮತ್ತು ಪ್ರಾಣಹಾನಿಗಳನ್ನು ಎದುರಿಸುತ್ತಿದೆ. ಭಾರತಕ್ಕೆ ಒಗ್ಗಟ್ಟು ಮತ್ತು ಭರವಸೆ ನೀಡುವ ನಿತ್ತಿನಲ್ಲಿ, ನಯಾಗರಾ ಜಲಪಾತವನ್ನು ಇಂದು ರಾತ್ರಿ 9:30 ರಿಂದ 10 ರವರೆಗೆ ಕಿತ್ತಳೆ, ಬಿಳಿ ಮತ್ತು ಹಸಿರು, ಬಣ್ಣಗಳಲ್ಲಿ ಬೆಳಗಿಸಲಾಗುವುದು #StayStronglndia, “ನಯಾಗರಾ ಪಾರ್ಕ್ಸ್ ಬುಧವಾರ ಒಂದು ಪೋಸ್ಟ್ನಲ್ಲಿ ಹೇಳಿದೆ.ಚಿತ್ರ : ನಯಾಗರ ಫಾಲ್ಸ್ ಟ್ವಿಟರ್


Share