ಖಾಸಗಿ ಹೋಟೆಲ್ ನಲ್ಲಿ ಮುಖ್ಯ ಮತದಾರರ ಸಭೆ

211
Share

 

ವೀರ ಸಾವರ್ಕರ್ ಯುವ ಬಳಗದಿಂದ ಇಂದು ಖಾಸಗಿ ಹೋಟೆಲ್ ನಲ್ಲಿ ಮುಖ್ಯ ಮತದಾರರ ಸಭೆಯನ್ನು ಆಯೋಜಿಸಲಾಗಿತ್ತು.

ಡಾ।ಅರ್ಪಿತಾ ಪ್ರತಾಪ್ ಸಿಂಹರವರು ಪದವೀಧರರನ್ನದ್ದೇಶಿಸಿ ಮಾತನಾಡಿ “ಸಮಾಜದಲ್ಲಿ ಬದಲಾವಣೆ ತರುವಲ್ಲಿ ಬಿಜೆಪಿ ಮಿಕ್ಕೆಲ್ಲಾ ರಾಜಕೀಯ ಪಕ್ಷಗಳಿಗಿಂತ ಮುಂದಿದೆ, ಹಿರಿಯ ಕಾರ್ಯಕರ್ತರೊಬ್ಬರಿಗೆ ಪಕ್ಷ ಈ ಬಾರಿ ಸ್ಪರ್ಧೆಗೆ ಅವಕಾಶ ನೀಡಿದೆ, ಜನರ ನಡುವೆ ಕಳೆದ ೩ ದಶಕಗಳಿಂದ ಕೆಲಸ ಮಾಡುತ್ತಿರುವ ಮೈ.ವಿ. ರವಿಶಂಕರ್ ರವರಿಗೆ ಈ ಬಾರಿ ಜನಪ್ರತಿನಿಧಿಯಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು” ಎಂದು ಮತಯಾಚಿಸಿದರು.

ಮಳೆಯ ನಡುವೆ ತಮ್ಮ ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದ ವಿಜಯನಗರದ ನಿವಾಸಿ ಹಿರಿಯ ನಾಗರೀಕರಾದ ವಿಷ್ಣುಮೂರ್ತಿ ಮಯ್ಯರವರು ಅಭ್ಯರ್ಥಿ ಮೈ.ವಿ
ರವಿಶಂಕರ್ ರವರಿಗೆ ಟಾರ್ಚ್ ವೊಂದನ್ನು ಉಡುಗೊರೆಯಾಗಿ ನೀಡಿ, ಚುನಾವಣೆಯಲ್ಲಿ ವಿಜೇತರಾಗಿ ಪದವೀಧರರ ಜೀವನದಲ್ಲಿ ಬೆಳಕು ತರುವ ಕೆಲಸ ಮಾಡಬೇಕೆಂದು ಆಶೀರ್ವದಿಸಿದ್ದು ವಿಶೇಷವಾಗಿತ್ತು.

ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷರಾದ ರಾಕೇಶ್ ಭಟ್ ಮತ ಕುಲಗೆಡಿಸದೇ ಮತದಾನ ಮಾಡುವ ಸರಿಯಾದ ಕ್ರಮಗಳನ್ನು ವಿವರಿಸಿದರು.

ಹವೀಕ ಸಂಘದ ಅಧ್ಯಕ್ಷರಾದ ಎಲ್.ಎನ್.ಹೆಗಡೆ, ಕಾರ್ಯದರ್ಶಿ ಅರುಣಾಚಲ, ಹವ್ಯಕ ಪರಿಷತ್ ಉಪಾಧ್ಯಕ್ಷರಾದ ಪ್ರಜೀವಾ ಶಿವಕುಮಾರ್, ಹವ್ಯಕ ಸಮಾಜದ ಮುಖಂಡರಾದ ಕೃಷ್ಣ ಹೆಗಡೆ, ಶಾಂತಾರಾಮ ಭಟ್, ಚಿನ್ಮಯ ಹೆಗಡೆ, ತುಳು ಮಾಧ್ವ ಶಿವಳ್ಳಿ ಬ್ರಾಹ್ಮಣ ಸಂಘದ ಉಪಾಧ್ಯಕ್ಷರಾದ ಜಗದೀಶ್ ಹೆಬ್ಬಾರ್, ಬ್ರಾಹ್ಮಣ ಯುವ ವೇದಿಕೆಯ ವಿಕ್ರಮ್ ಅಯ್ಯಂಗಾರ್, ಸಾವರ್ಕರ್ ಬಳಗದ ಜಯಸಿಂಹ, ಲೋಹಿತ್ ಶರ್ಮ, ದೀಪಕ್, ಅರುಣ್.ಟಿ.ಎಸ್. ರವಿ ಕುಂಚಿಟಿಗ, ವಿವಿಧ ಸಂಘದ ಪದಾಧಿಕಾರಿಗಳಾದ ಮಾಲಿನಿ ಪಾಲಾಕ್ಷ, ಪ್ರಮೋದ್ ಗೌಡ, ಭಾಸ್ಕರ್ ಗೌಡ ಸೇರಿದಂತೆ ನಿವೃತ್ತ ಶಿಕ್ಷಕರು, ಬ್ಯಾಂಕುಗಳ ನಿವೃತ್ತ ವ್ಯವಸ್ಥಾಪಕರು, ಖಾಸಗಿ ಸಂಸ್ಥೆಗಳ ಅನೇಕ ಶಿಕ್ಷಕರು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.


Share