ಗಿನ್ನಿಸ್ ‌ದಾಖಲೆ‌ ಬರೆದ ಗಣಪತಿ ಶ್ರೀಗಳ ಜನುಮದಿನದ ಶುಭಾಶಯಗಳ ವಿಡಿಯೋ

439
Share

 

ಗಿನ್ನಿಸ್ ‌ದಾಖಲೆ‌ ಬರೆದ ಗಣಪತಿ ಶ್ರೀಗಳ

ಜನುಮದಿನದ ಶುಭಾಶಯಗಳ ವಿಡಿಯೋ

ಆಲ್ಬಂ !

ಮೈಸೂರು,ಜೂ.10- ಶ್ರೀ ಗಣಪತಿ ‌ಸಚ್ಚಿದಾನಂದ ಸ್ವಾಮೀಜಿಯವರ ಜನುಮ ದಿನದ‌ ಪ್ರಯುಕ್ತ ಶ್ರೀಗಳಿಗೆ ವಿಶ್ವಾದ್ಯಂತ ಭಕ್ತರು ಶುಭಕಾಮನೆಗಳನ್ನು ವಿವಿಧ ಭಾಷೆಗಳಲ್ಲಿ ಸಲ್ಲಿಸಿರುವ ವಿಡಿಯೋಗಳನ್ನೊಳಗೊಂಡ ಬೃಹತ್ ವಿಡಿಯೋ ಆಲ್ಬಮ್ ‌ಗಿನ್ನಿಸ್‌ ದಾಖಲೆ ಮಾಡಿದೆ.

ಇಂದು ನಾದಮಂಟಪದಲ್ಲಿ ಗಿನ್ನೀಸ್ ವರ್ಲ್ಡ್ ಆರ್ಗನೈಸೇಶನ್ ನ‌ ಋಶಿನಾತ್ ಅವರು ದಾಖಲೆಯ ಪ್ರಮಾಣಪತ್ರವನ್ನು ಶ್ರೀಗಳಿಗೆ ನೀಡಿದರು.

ಇಂಗ್ಲಿಷ್ , ತೆಲುಗು , ಕನ್ನಡ , ಹಿಂದಿ , ಸಂಸ್ಕೃತ , ತಮಿಳು , ಅಮೇರಿಕನ್ ಸಂಕೇತ ಭಾಷೆ , ಗುಜರಾತಿ , ಮಲಯಾಳಂ , ಜಪಾನೀಸ್ , ಸ್ವಿಸ್ , ಮರಾಠಿ , ಅರೇಬಿಕ್ , ಇಟಾಲಿಯನ್ , ಮಲಯ , ಸ್ಪ್ಯಾನಿಷ್ , ಸುರ್ನಾಮಿ , ಟರ್ಕಿಶ್ ಮತ್ತು ಸಂಗೀತ ವಾದ್ಯಗಳಲ್ಲಿ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಲಾಗಿದೆ.

ಭಾಷೆಯನ್ನು ಪತ್ತೆಹಚ್ಚಲು ಮತ್ತು ಆಯಾ ಭಾಷೆಯಲ್ಲಿ ಹುಟ್ಟುಹಬ್ಬ ಪದವನ್ನು ಗುರುತಿಸಲು ಭಾಷಾ ತಜ್ಞರು ಪ್ರತಿ ವೀಡಿಯೊವನ್ನು ಹಸ್ತಚಾಲಿತವಾಗಿ ಪರಿಶೀಲಿಸಿದ್ದಾರೆ.

ಈ ಎಲ್ಲಾ ವೀಡಿಯೊ ಬೈಟ್‌ಗಳನ್ನು ಸಂಯೋಜಿಸುವ ದೀರ್ಘ ವೀಡಿಯೊವನ್ನು ಗಿನ್ನೆಸ್ ವಿಶ್ವ ದಾಖಲೆಗಾಗಿ ಜನ್ಮದಿನದ ಶುಭಾಶಯಗಳ ಅತಿದೊಡ್ಡ ಆನ್‌ಲೈನ್ ವೀಡಿಯೊ ಆಲ್ಬಮ್ ಎಂದು ಪರಿಗಣಿಸಲಾಗಿದೆ.

ಇದೇ ವೇಳೆ ಕಿರಿಯ ಶ್ರೀಗಳಾದ‌ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ‌ಗಣಪತಿ ಶ್ರೀಗಳ ಜನ್ಮ ಸ್ಥಳವಾದ ಮೇಕೆದಾಟಿನಿಂದ ಮೈಸೂರಿನ ಆಶ್ರಮದ ವರೆಗೆ ಕೈಗೊಂಡಿದ್ದ ವಿಶ್ವಶಾಂತಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಮಾಡಿದ ವಿವಿಧ ವಿಡಿಯೋಗಳು ಎರಡನೆ ಗಿನ್ನಿಸ್ ‌ವಿಶ್ವ ದಾಖಲೆ ಗಳಿಸಿದ್ದು ಅದನ್ನೂ ಇದೇ ವೇಳೆ ಶ್ರೀಗಳಿಗೆ ಹಸ್ತಾಂತರಿಸಲಾಯಿತು.


Share