ಚಾಮುಂಡಿಬೆಟ್ಟದ ವಾಹನ ಪಾಸ್ ಗಳು ರದ್ದು

663
Share

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡಿಬೆಟ್ಟದ ವಾಹನ ಪಾಸ್ ಗಳು ರದ್ದು ನಗರ ಪೊಲೀಸ್ ಆಯುಕ್ತರಾದ ಡಾ ಚಂದ್ರಗುಪ್ತ ಆದೇಶ*

 

ಆಷಾಡ ಶುಕ್ರವಾರಗಳಂದು ಚಾಮುಂಡಿ ಬೆಟ್ಟಕ್ಕೆ ನೀಡಲಾಗುತ್ತಿದ್ದ ವಾಹನ ಪಾಸ್‌ಗಳನ್ನು ರದ್ದು . ಆಷಾಡ ಶುಕ್ರವಾರ ಹಾಗೂ ಶ್ರೀ.ಚಾಮುಂಡೇಶ್ವರಿ ದೇವಿಯ ವರ್ಧಂತಿ ದಿನಗಳಂದು ಚಾಮುಂಡಿ ಬೆಟ್ಟಕ್ಕೆ ವಾಹನ ಸಂಚಾರವನ್ನು ನಿರ್ಭಂಧಿಸಿದ್ದು , ಕೆಲವು ತುರ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಮಾತ್ರ ಚಾಮುಂಡಿ ಬೆಟ್ಟಕ್ಕೆ ತೆರಳಲು ಪೊಲೀಸ್ ಆಯುಕ್ತರವರ ಕಚೇರಿಯಿಂದ ವಾಹನ ಪಾಸ್‌ಗಳನ್ನು ನೀಡಲಾಗುತ್ತಿತ್ತು . ಆದರೆ ಚಾಮುಂಡಿ ಬೆಟ್ಟದಲ್ಲಿ ಸಾರ್ವಜನಿಕರಿಗೆ ಶ್ರೀ.ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಸುಗಮ ವ್ಯವಸ್ಥೆ ಕಲ್ಪಸುವ ಉದ್ದೇಶದಿಂದ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಚಾಮುಂಡಿ ಬೆಟ್ಟಕ್ಕೆ ಸಂಚರಿಸುವುದನ್ನು ತಪ್ಪಿಸಲು ಈ ಮುಂದೆ ಬರುವ ಆಷಾಡ ಶುಕ್ರವಾರಗಳಾದ ದಿನಾಂಕ : 15/07/2022 , 22/07/2022 ಹಾಗೂ ಶ್ರೀ.ಚಾಮುಂಡೇಶ್ವರಿ ದೇವಿಯ ವರ್ಧಂತಿ ದಿನಾಂಕ : 20/07/2022 ರಂದು ಚಾಮುಂಡಿ ಬೆಟ್ಟಕ್ಕೆ ತೆರಳಲು ಪೊಲೀಸ್ ಆಯುಕ್ತರ ಕಛೇರಿಯಿಂದ ಯಾವುದೇ ರೀತಿಯ ವಾಹನದ ಪಾಸುಗಳನ್ನು ನೀಡಲಾಗುವುದಿಲ್ಲ . ಈ ಹಿಂದೆ ನೀಡಲಾಗುತ್ತಿದ್ದ ವಾಹನ ಪಾಸ್ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ . ಸಾರ್ವಜನಿಕರು ಮುಂದಿನ ಆಷಾಡ ಶುಕ್ರವಾರಗಳು ಮತ್ತು ಶ್ರೀ.ಚಾಮುಂಡೇಶ್ವರಿ ದೇವಿಯ ವರ್ಧಂತಿ ದಿನಗಳಂದು ನಗರ ಸಾರಿಗೆ ಅಥವಾ ದೇವಸ್ಥಾನದ ಆಡಳಿತ ಮಂಡಳಿಯಿಂದ ವ್ಯವಸ್ಥೆ ಮಾಡಿರುವ ಉಚಿತ ಕೆ.ಎಸ್.ಆರ್.ಟಿ.ಸಿ. ಬಸ್‌ಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ಪ್ರಯಾಣಿಸಿ , ದೇವಸ್ಥಾನದಲ್ಲಿ ನಿರ್ಧಿಷ್ಟ ಪಡಿಸಿರುವ ಸರತಿ ಸಾಲುಗಳಲ್ಲಿ ತೆರಳಿ ದೇವರ ದರ್ಶನವನ್ನು ಪಡೆಯಬೇಕೆಂದು ಈ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗಿದೆ .


Share