ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ತರಲು ಆಗ್ರಹ

263
Share

 

ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಪ್ರಯತ್ನಿಸುವಂತೆ ಸಂಸದ ಪ್ರತಾಪ್ ಸಿಂಹರವರಲ್ಲಿ ವೀರ ಸಾವರ್ಕರ್ ಯುವ ಬಳಗದಿಂದ ಮನವಿ ಮಾಡಲಾಯಿತು.

ಭಾರತಕ್ಕೆ ಪರಕೀಯರ ಆಳ್ವಿಕೆಯಿಂದ ಮುಕ್ತಿ ದೊರೆತು ತನ್ನದೇ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುನ್ನಡೆಯಲು ಪ್ರಾರಂಭಿಸಿ ಮುಕ್ಕಾಲು ಶತಮಾನವಾಗಿತ್ತಿದೆ. ಅಪಾರ ಮಾನವ ಸಂಪನ್ಮೂಲ ಹೊಂದಿರುವ ದೇಶವಾಗಿಯೂ ಅನೇಕ ರಂಗಗಳಲ್ಲಿ ಇಂದಿಗೂ ನಿರೀಕ್ಷಿತ ಪ್ರಗತಿಯ ಮಟ್ಟ ತಲುಪಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಅನೇಕ ಕಾರಣಗಳು, ಅದರಲ್ಲಿ ನಾವು ಚಿಕ್ಕಂದಿನಿಂದ ಶಾಲಾ ಪಠ್ಯ-ಪುಸ್ತಕಗಳಲ್ಲಿ ಓದಿಕೊಂಡು ಬಂದ ಜನಂಖ್ಯಾ ಸ್ಪೋಟವೂ ಪ್ರಮುಖ ಕಾರಣ.

ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಮಾನವ ಸಂಪನ್ಮೂಲ ಬಳಕೆ ಹಾಗೂ ಸ್ವ-ಉದ್ಯೋಗ ಸೃಷ್ಟಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕೊರೋನಾ ಸಮಯದಲ್ಲಿ ಲಾಕ್‌ಡೌನ್‌ನೊಂದಾಗಿ ದೇಶದ ಆರ್ಥಿಕತೆಯ ತೊಂದರೆಯ ನಡುವೆಯೂ ಕೋಟ್ಯಾಂತರ ಜನರಿಗೆ ಸರ್ಕಾರಿ ಆಸ್ಪತ್ರಗಳಲ್ಲಿ ಉಚಿತ ಚಿಕಿತ್ಸೆ, ಸರ್ವರಿಗೂ ಉಚಿತ ಲಸಿಕೆ ಜೊತೆ ಬಡ ಕುಟುಂಬಗಳಿಗೆ ಉಚಿತ ಅಕ್ಕಿ ಹಾಗೂ ಧಾನ್ಯಗಳನ್ನು ಸಹ ನೀಡುತ್ತಿದೆ. ಸರ್ಕಾರದ ಉಚಿತ ಸೌಲಭ್ಯಗಳನ್ನು ಬಡವರಿಗೆ ನೀಡುವುದು ಸರಿ, ಆದರೆ ಅದಕ್ಕೂ ಒಂದು ನಿಯಂತ್ರಣ ಬೇಕಲ್ಲವೇ? ನಮ್ಮ ದೇಶದ ನೆರೆ ರಾಷ್ಟ್ರ ಚೀನಾ ಜನಸಂಖ್ಯಾ ನಿಯಂತ್ರಣವನ್ನು ಯಶಸ್ವಿಯಾಗಿ ಮಾಡಿ ಸಾಕಷ್ಟು ಸಕಾರಾತ್ಮಕ ಬೆಳವಣಿಗೆ ಕಂಡಿದೆ. ಭಾರತದ ಹಲವು ರಾಜ್ಯಗಳು ಸಹ ಇಂಥ ಕಾನೂನನ್ನು ಜಾರಿಗೆ ತರುತ್ತಿವೆ ಮತ್ತಷ್ಟು ರಾಜ್ಯಗಳು ಸಹ ಆ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿವೆ.

ಹೀಗಿರುವಾಗ, ಸಂಸದರಾದ ಪ್ರತಾಪ್ ಸಿಂಹರವರು ಸನ್ಮಾನ್ಯ ಪ್ರಧಾನಿಗಳಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕರ್ನಾಟಕದಲ್ಲಿಯೂ ಸಹ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ತರಲು ಕೋರುವ ಮೂಲಕ ರಾಜ್ಯದ ಸಂಪತ್ತು ಸದ್ವಿನಿಯೋಗವಾಗಿ ಸದ್ಬಳಕೆಯಾಗುವಂತೆ ಮಾಡಬೇಕು ಎಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷರಾದ ರಾಕೇಶ್ ಭಟ್, ಕಾರ್ಯದರ್ಶಿ ದೀಪಕ್, ಮುಖಂಡರಾದ ಜಯಸಿಂಹ, ರಂಗನಾಥ, ಚೆನ್ನಬಸವಣ್ಣ, ಹಾಜರಿದ್ದರು.


Share