ಜಿ ಎಸ್ ಟಿ ಸಂಬಂಧ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

248
Share

ಚಾಮುಂಡಿ ಬೆಟ್ಟ ದೇವಿ ದರ್ಶನಕ್ಕೆ ಬಸ್ಸಿನಲ್ಲಿ ತೆರಳಿದ ಶೋಭಾ ಕರಂದ್ಲಾಜೆ

*ದಿನಬಳಕೆ ವಸ್ತುಗಳಿಗೆ ಜಿಎಸ್ ಟಿ ವಿಚಾರ ಸಂಬಂಧ ಇಂದು ಬೆಳಗ್ಗೆ ಚಾಮುಂಡಿ ಬೆಟ್ಟದ ದೇವಿ ದರ್ಶನಕ್ಕೆ ಆಗಮಿಸಿದ್ದ ಸಂಸದ ಶೋಭಾ ಕರಂದ್ಲಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದರು

ಅವರು ತಮ್ಮನ್ನು ಭೇಟಿ  ಸುದ್ದಿಗಾರರೊಂದಿಗೆ ಮಾತನಾಡುತ್ತ
ನಮ್ಮ ಪ್ರಧಾನಿ ತಾಯಿ ಹೃದಯದವರು.ಅವರಿಗೆ ಜನರ ಭಾವನೆಗಳು ಅರ್ಥವಾಗುತ್ತವೆ.
ಇಂದು ಜಿ.ಎಸ್.ಟಿ ಸಂಬಂಧದ ಸಭೆ ಇದೆ. ಜಿ.ಎಸ್.ಟಿಯನ್ನ ಕಡಿಮೆ ಮಾಡಬಹುದು.ಇದೆಲ್ಲ‌ ಶಕ್ತಿ ಪ್ರಧಾನಮಂತ್ರಿ ಕೈಯಲ್ಲಿದೆ.ಜನರ ಭಾವನೆಗೆ ಪ್ರಧಾನ ಮಂತ್ರಿ ಸ್ಪಂಧಿಸುತ್ತಾರೆ. ಇಂದು ಶೋಭಾ ಕರಂದ್ಲಾಜೆ ಅವರು ತಿಳಿಸಿದರು

ಈ ಬಾರಿ ವರ್ಧಂತಿ ವೇಳೆ ಬೆಟ್ಟಕ್ಕೆ ಬರಬೇಕು ಎಂದು ಎಲ್ಲರು ಕೇಳಿಕೊಂಡಿದ್ರು. ಹೀಗಾಗಿ ನಾನು ಈ ಸಮಯದಲ್ಲಿ ಬಂದಿರುವೆ
ನವರಾತ್ರಿಯಲ್ಲಿ ಬೆಟ್ಟ ಹತ್ತುತ್ತೇನೆ ಎಂದು ತಿಳಿಸಿದರು

*ರಾಜ್ಯದಲ್ಲಿ ನೆರೆ ಪ್ರವಾಹ ವಿಚಾರ.*
ರಾಜ್ಯದ ಬೆಳೆ ನಷ್ಟದ ವರದಿ ಇನ್ನೂ ಕೇಂದ್ರದ ಕೈಸೇರಿಲ್ಲಾ. ಎಂದ ಶೋಭಾ ಕರಂದ್ಲಾಜೆ ಅವರು
ನೆರೆ ಪ್ರವಾಹ ಸಂಪೂರ್ಣ ತಗ್ಗಿದ ಮೇಲೆ ಬೆಳೆ ನಷ್ಟ ಎಷ್ಟು ಎಂಬುದು ಗೊತ್ತಾಗಲಿದೆ.
ಪ್ರವಾಹ ತಗ್ಗುವವರೊಗು ಬೆಳೆ ನಷ್ಟದ ಅಂದಾಜು ಕಷ್ಟ.
ಈಗ ಕೇವಲ ರಸ್ತೆ ಸೇತುವೆ ನಾಶವಾಗಿರುವ ಬಗ್ಗೆ ಮಾತ್ರ ವರದಿ ತಯಾರುತ್ತಿದೆ.
ಪ್ರವಾಹದಲ್ಲಿ ಬಹಳ ಜಿಲ್ಲೆಗಳ ರೈತರ ಬೆಳೆ ಕೊಚ್ಚಿ ಹೋಗಿದೆ.
ಅವರಿಗೆ ಮತ್ತೊಮ್ಮೆ ರಸಗೊಬ್ಬರ ಬೀಜ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಹಿಂದೆ ಕೊಟ್ಟ ರಸ ಗೊಬ್ಬರ‌ ಬೀಜದಲ್ಲಿ ಅವರ ಬೆಳೆದ ಬೆಳೆ ನೀರು ಪಾಲಾಗಿದೆ.
ಇದರ ಎಲ್ಲಾ ವರದಿಗಳನ್ನು ತರಿಸಿ ಕೊಳ ಆಳುತ್ತಿದ್ದೇವೆ. ಎಂದು ವಿವರ ನೀಡಿದರು
ನನ್ನ ಜಿಲ್ಲೆಯಲ್ಲೂ ಸಹ ಸಾಕಷ್ಟು ಬೆಳೆ ಹಾನಿಯಗಿದೆ ಎಂದು ಮಾತನಾಡಿದರು. ಪ್ರಶ್ನೆ ಒಂದಕ್ಕೆ ಉತ್ತರಿಸಿದರು


Share