ತ್ರೇತಾ ಯುಗದಲ್ಲಿ 14 ವರ್ಷ ರಾಮನ ವಿಯೋಗ, ಕಲಿಯುಗದಲ್ಲಿ ಶತಮಾನಗಳ ರಾಮನ ವಿಯೋಗ ಸಹಿಸುವಂತಾಯಿತು : ಪ್ರಧಾನಿ ನರೇಂದ್ರ ಮೋದಿ

138
Share

 

ಇಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಲಲ್ಲ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶ್ರದ್ಧೆಯಿಂದ ಪೂಜ ಕೈಂಕರ್ಯಗಳಲ್ಲಿ ತೊಡಗಿಸಿಕೊಂಡರು.
ಅದಾದ ನಂತರ ಮಾತನಾಡಿದ ಪ್ರಧಾನಿಯವರು
ರಾಮನಿಗೆ ನಮೋ ನಮಃ ಎಂದು ಮಾತನ್ನಾರಂಭಿಸಿದರು.
ಪ್ರಧಾನಿಯವರು ಮುಂದುವರೆದು ಮಾನಾಡಿದರು.

1 . ಸಾವಿರ ವರ್ಷ ನಂತರವೂ ಜನ ಈ ದಿನ ಸ್ಮರಿಸುತ್ತಾರೆ.
2 . ತ್ರೇತಾಯುಗದಲ್ಲಿ 14 ವರ್ಷ ರಾಮನ ವಿಯೋಗವಾಗಿತ್ತು. ಕಲಿಯುಗದಲ್ಲಿ ಶತಮಾನಗಳು ರಾಮನ ವಿಯೋಗದಿಂದ ನಾವೆಲ್ಲ ಕಷ್ಟಪಟ್ಟಿದ್ದೇವೆ.
3 . ಭಾರತದಾದ್ಯಂತ ದೀಪಾವಳಿಯಂತೆ ಇಂದು ಆಚರಿಸಲಾಗಿದೆ. ಹಳ್ಳಿ ಹಳ್ಳಿಗಳಲ್ಲಿ, ದೇವಾಲಯಗಳಲ್ಲಿ ರಾಮನನ್ನು ಪೂಜಿಸಲಾಗಿದೆ.
4 . ರಾಮನೆಂದರೆ ವಿವಾದವಲ್ಲ, ಪರಿಹಾರ ಎನ್ನುವುದು ಜನಕ್ಕೆ ಅರ್ಥವಾಗುತ್ತದೆ.
5 . ರಾಮನೆಂದರೆ ಬೆಂಕಿಯಲ್ಲ, ಶಕ್ತಿ ಎನ್ನುವುದು ಅರ್ಥವಾಗುತ್ತದೆ.
6 . ಇಂದು ವಿಶ್ವವೇ ಸಂಭ್ರಮದಲ್ಲಿ ಕೂಡಿದೆ.
7 . ರಾಮ ಸರ್ವವ್ಯಾಪಿ ಎಂಬುದು ಇದರಿಂದ ತಿಳಿಯುತ್ತದೆ.
8 . ರಾಮನ ಪ್ರತಿಷ್ಠಾಪನೆ ವಸುದೈವ ಕುಟುಂಬಕಂ ಎನ್ನುವುದನ್ನು ಸಾರುತ್ತದೆ.
9 . ರಾಮಮಂದಿರ ರಾಷ್ಟ್ರ ಚೇತನದ ಮಂದಿರ.
10 . ರಾಮ ಭಾರತದ ಚೇತನ, ಭಾರತದ ಆತ್ಮ.
11 . ರಾಮ ಮಂದಿರ ಆಯ್ತು ಮುಂದೇನು ಎನ್ನುವುದು ಎಲ್ಲರ ಪ್ರಶ್ನೆ.
12 . ಕಾಲಚಕ್ರ ಬದಲಾಗುತ್ತಿದೆ.
13 . ಮುಂದಿನ ಸಾವಿರ ವರ್ಷಗಳಿಗೆ ಅಡಿಪಾಯ ಹಾಕಲು ಇದು ಸರಿಯಾದ ಸಮಯ.


Share