ದಸರಾ ಉತ್ಸವಕ್ಕೆ 1 ಕೋಟಿ ರೂ ನೀಡಿ ಪ್ಲಾಟಿನಂ ಪ್ರಾಯೋಜಕರು ಸೈಕಲ್ ಬ್ರಾಂಡ್ ಅಗರಬತ್ತಿ ಕಂಪನಿ

49
Share

ದಸರಾ ಪ್ರಾಯೋಜಿತರಿಗೆ ಧನ್ಯವಾದ

*ದಸರಾ ಆಚರಣೆಯಲ್ಲಿ ಸುರಕ್ಷತೆಗೂ ಆದ್ಯತೆಯಿರಲಿ – ಡಿ.ಸಿ.*

ಮೈಸೂರು, ಅ.13

ದಸರಾ ಮಹೋತ್ಸವದ ಆಚರಣೆಯಲ್ಲಿ ಸುರಕ್ಷತೆಯ ಕಡೆಗೂ ಗಮನವಿರಲಿ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ಅರಮನೆ ಮಂಡಳಿ ಕಚೇರಿಯಲ್ಲಿ ಇಂದು ನಡೆದ ದಸರಾ ಕಾರ್ಯಕ್ರಮಗಳ ಪರಿಶೀಲನೆ ಹಾಗೂ ವಿಪತ್ತು ಪರಿಸ್ಥಿತಿ ನಿರ್ವಹಣಾ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ನಗರದ ಸ್ವಚ್ಚತೆ ಕಾರ್ಯ ಮತ್ತಷ್ಟು ಚುರುಕುಗೊಳ್ಳಬೇಕು,ಎಲ್ಲಿಯೂ ವಿದ್ಯುತ್ ಅವಘಢಗಳಾಗದಂತೆ ಎಚ್ಚರಿಕೆವಹಿಸಬೇಕು. ಪಟಾಕಿ ದಾಸ್ತಾನುಗಳಿರುವ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸುರಕ್ಷತಾ ಕ್ರಮಗಳ ಪರಿಶೀಲಿಸಬೇಕು ಎಂದರು.

ನಗರದ ವಿವಿದೆಡೆ ನಡೆಯುತ್ತಿರುವ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತಿದ್ದು ಕೆಲಸ ಚುರುಕುಗೊಳ್ಳಬೇಕು.

ವಿವಿಧ ಉಪಸಮಿತಿಗಳು ತಮ್ಮ ಕಾರ್ಯಕ್ರಮ ಆಯೋಜನೆ ಮಾಡುವ ಮನ್ನ ಸಂಬಂಧಿಸಿದ ಇಲಾಖೆಗಳಿಂದ ಅಗತ್ಯ ಅನುಮತಿ ಪಡೆದುಕೊಳ್ಳುವುದು ಮುಖ್ಯ, ರಸ್ತೆ ಚರಂಡಿಗಳನ್ನ ಕೂಡಲೆ ದುರಸ್ತಿಪಡಿಸಿ,ಹೊರರಾಜ್ಯ ಹಾಗೂ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಅವರುಗಳ ಸುರಕ್ಷತೆಗೂ ಹೆಚ್ಚಿನ ಗಮನಹರಿಸಬೇಕೆಂದರು.

ದಸರಾ ದೀಪಾಲಂಕಾರ ಆಕರ್ಷಕವಾಗಿರುವುದರೊಂದಿಗೆ ರಸ್ತೆಗಳ ಸೌಂದರೀಕರಣಕ್ಕೂ ಒತ್ತು ನೀಡಿ, ಕುಸ್ತಿಪಟುಗಳಿಗೆ ಉತ್ತಮ ಗೌರವ ಧನ ನೀಡಿ,ಚಲನ ಚಿತ್ರೋತ್ಸವವನ್ನು ಹೆಚ್ಚು ಜನ ವೀಕ್ಷಿಸುವಂತೆ ಆಯೋಜನೆ ಮಾಡಿ , ಆಹಾರ ಮೇಳದಲ್ಲಿ ಎಲ್ಲಾ ಭಾಗಗಳ ಆಹಾರ ಮಳಿಗೆಗಳು ಇರುವಂತೆ ನೋಡಿಕೊಳ್ಳಿ ಎಂದರು.

ಇದೇ ವೇಳೆ ದಸರಾ ಉತ್ಸವಕ್ಕೆ 1 ಕೋಟಿ ರೂ ನೀಡಿ ಪ್ಲಾಟಿನಂ ಪ್ರಾಯೋಜಕರಾಗಲು ಒಪ್ಪಿರುವ ಸೈಕಲ್ ಬ್ರಾಂಡ್ ಅಗರಬತ್ತಿ ಕಂಪನಿ ಹಾಗೂ ಸಿಲ್ವರ್ ಪ್ರಾಯೋಜಕತ್ವ ನೀಡಿಲಿರುವ ಎಸ್.ಬಿ.ಐ.ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾಡಳಿತದಿಂದ ಧನ್ಯವಾದ ಹೇಳಲಾಯಿತು.

ಸಭೆಯಲ್ಲಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್,ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್,ಜಿ.ಪಂ.ಸಿಇಒ ಗಾಯತ್ರಿ ಕೆ.ಎಂ. ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ,ಇದ್ದರು.

 


Share