ದಸರಾ ಗೊಂಬೆ  ಕೂರಿಸುವ ಸ್ಪರ್ಧೆ: ಬಹುಮಾನ ವಿತರಣೆ

19
Share

 

*ಮನೆ ಮನೆಗಳಲ್ಲಿ ದಸರಾ ಗೊಂಬೆ  ಕೂರಿಸುವ ಸ್ಪರ್ಧೆಯ ವಿಜೇತರಿಗೆ  ಶ್ರೀ ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಹೆಸರಿನಲ್ಲಿ ಪಾರಿತೋಷಕ ಹಾಗೂ ನಗದು ಬಹುಮಾನ ವಿತರಿಸಲಾಯಿತು*

ನಗರದ ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಹಾಗೂ ಸ್ಪಿರಿಟ್ ಇವೆಂಟ್ ಆಯೋಜಿಸಿದ ಮನೆಮನೆ ಗೊಂಬೆ ಜೋಡಣೆ ಸ್ಪರ್ಧೆಯ ವಿಜೇತರಿಗೆ ಹಾಗೂ ಸ್ಪರ್ಧಿಸಿದ ಸ್ಪರ್ಧಾಳುಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಸ್ಪರ್ಧೆಯಲ್ಲಿ 150ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ದು

ಮೊದಲನೇ ಬಹುಮಾನ
ಗಿರೀದರ್ಶಿನಿ ಬಡಾವಣೆ
ನಿವಾಸಿ ಶ್ರೀಮತಿ ಗೀತಾ ಶ್ರೀಹರಿ ರವರಿಗೆ 2000 ನಗದು ಹಾಗೂ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರಶಸ್ತಿ ಪ್ರಧಾನ ಮಾಡಲಾಯಿತು
ದ್ವಿತೀಯ ಬಹುಮಾನ ರಾಮಚಂದ್ರ ಅಗ್ರಹಾರ ದ
ಅರಬಿ 1000 ರೂ,
ತೃತೀಯ ಬಹುಮಾನ ಜೆಪಿ ನಗರ ನಿವಾಸಿ
ರಾಧಾಕಂತ್ ರವರಿಗೆ 500 ರೂ ನಗದು ಹಾಗೂ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಪಾರಿತೋಷಕ ಪ್ರಶಸ್ತಿ ನೀಡಲಾಯಿತು
ಹಾಗೂ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಮನೆಮನೆಗಳಲ್ಲಿ
ಮೈಸೂರು ದಸರಾದ ಮಹತ್ವ, ಗುರು ಪರಂಪರೆ, ಅಷ್ಠ ಲಕ್ಷ್ಮೀಯರು, ಕೃಷಿ, ಗ್ರಾಮೀಣ ಬದುಕು, ಪಾರಂಪರಿಕ ವೃತ್ತಿಗಳು ಸೇರಿದಂತೆ ಪೌರಾಣಿಕ ಮತ್ತು ಸಾಮಾಜಿಕ ಹಿನ್ನಲೆಯ ಗೊಂಬೆಗಳನ್ನು ಜೋಡಣೆ ಮಾಡಿದ್ದು,
ಭಾರತೀಯ ಸಂಸ್ಕೃತಿ, ಪರಂಪರೆಯ ಬಗ್ಗೆ ಅರಿವು ಮೂಡಿಸಲು ಇಂತಹ ಸ್ಪರ್ಧೆಗಳ ಮೂಲಕ ದಸರಾ ಗೊಂಬೆ ಪ್ರದರ್ಶನ ಆಯೋಜಿಸಲಾಗಿದೆ. ಮನೆಯಲ್ಲಿ ಮಹಿಳೆಯರು ಪುರುಷರು ಹಾಗೂ ಮಕ್ಕಳು ಜೊತೆಗೂಡಿ ಶ್ರಮವಹಿಸಿ ವಿವಿಧ ಬಗೆಯ ಗೊಂಬೆಗಳನ್ನು ಸಂಗ್ರಹಿಸಿ ಅಚ್ಚುಕಟ್ಟಾಗಿ ಜೋಡಿಸಿ ಪ್ರದರ್ಶನ ಮಾಡಲಾಗಿದೆ ಎಂದು ತಿಳಿಸಿದರು.

ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಮಾತನಾಡಿ
ನವರಾತ್ರಿ ಹಬ್ಬದ ಆಚರಣೆ ಬೊಂಬೆಗಳ ಪ್ರದರ್ಶನ ನಮ್ಮ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಹಿರಿಮೆ, ನವದುರ್ಗೆಯರನ್ನು 9 ದಿನಗಳ ಕಾಲ ಪೂಜಿಸುವ ನವರಾತ್ರಿ ಹಬ್ಬ ಹೆಣ್ಣುಮಕ್ಕಳ ಪಾಲಿಗೆ ವಿಶೇಷ. ದೇವಿಯನ್ನು ಅಲಂಕಾರ ಮಾಡಿ ಪೂಜೆ ಸಲ್ಲಿಸಿ, ದೇವಿಗೆ ನೈವೇದ್ಯ ನೀಡುವುದು, ಸಾಯಂಕಾಲ ಮುತ್ತೈದೆ, ಮಕ್ಕಳನ್ನು ಮನೆಗೆ ಕರೆದು ಅರಶಿನ-ಕುಂಕುಮ, ಬಾಗಿನ,ತಿನಿಸು ಕೊಡುವ ಶಾಸ್ತ್ರ ಸಂಪ್ರಾದಯ ನೂರಾರು ವರುಷಗಳಿಂದ ನಡೆದುಕೊಂಡು ಬಂದಿದೆ ಇದು ನಮ್ಮ ಹಿಂದೂ ಧರ್ಮಕ್ಕೆ ಶಕ್ತಿಯಿದ್ದಂತೆ ಎಂದರು,

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಹಿರಿಯ ಸಮಾಜ ಸೇವಕರಾದ ಡಾ. ಕೆ ರಘುರಾಮ್ ವಾಜಪೇಯಿ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್,ಸವಿತಾ ಘಾಟ್ಕೆ ,ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಅಜಯ್ ಶಾಸ್ತ್ರಿ, ಸಚಿಂದ್ರ, ಚಕ್ರಪಾಣಿ, ಎಸ್ ಎನ್ ರಾಜೇಶ್, ನಾಗಶ್ರೀ ಸುಚೇಂದ್ರ, ಕಾವೇರಮ್ಮ, ಹಾಗೂ ಇನ್ನಿತರರು ಭಾಗಿಯಾಗಿದ್ದರು


Share