ದಸರಾ – ಮಕ್ಕಳಿಗೆ ಹಾಗೂ ಯುವತಿಯರು , ಮಹಿಳೆಯರಿಗೆ ಸ್ಪರ್ಧೆ*

89
Share

 

 

*ದಸರಾ ಅಂಗವಾಗಿ ಮಕ್ಕಳಿಗೆ ಮೇಷಭೂಷಣ ಸ್ಪರ್ಧೆ ಹಾಗೂ ಯುವತಿಯರು ಹಾಗೂ ಮಹಿಳೆಯರಿಗೆ ದಸರಾ ಸೀರೆ ಸ್ಪರ್ಧೆ*

ಮೈಸೂರು: ಶ್ರೀ ದುರ್ಗಾ ಫೌಂಡೇಶನ್ ಹಾಗೂ ಮೇಕ್ ಸೊಸೈಟಿ ಸ್ಮೈಲ್ ಫೌಂಡೇಶನ್ ವತಿಯಿಂದ
ಅಕ್ಟೋಬರ್ 21ರ ಶನಿವಾರ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಶಾಲೆಯಲ್ಲಿ
ಮಕ್ಕಳಿಗೆ ದಸರಾ ವೇಷಭೂಷಣ ಸ್ಪರ್ಧೆ ಹಾಗೂ ಯುವತಿಯರು ಹಾಗೂ ಮಹಿಳೆಯರಿಗೆ ದಸರಾ ಸೀರೆ ಸ್ಪರ್ಧೆ ಯ
ಆಯೋಜಿಸಲಾಗಿದ್ದು ಅದರ ಪ್ರಚಾರದ ಪೋಸ್ಟರ್ ಅನ್ನು ಚಾಮರಾಜಪುರಂನಲ್ಲಿರುವ ಶ್ರೀ ದುರ್ಗಾ ಫೌಂಡೇಶನ್ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅರ್ಧ ಶಾಸ್ತ್ರದ ವಿಭಾಗದ ಪ್ರಾಧ್ಯಾಪಕರಾದ ಡಾಕ್ಟರ್ ಆರ್ ಎಚ್ ಪವಿತ್ರ ಬಿಡುಗಡೆಗೊಳಿಸಿದರು
ದಸರಾ ಹಬ್ಬದಲ್ಲಿ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ದಸರಾ ಇತಿಹಾಸ ಹಾಗೂ ನಮ್ಮ ಪರಂಪರೆಯ ವಿಚಾರಗಳು ಹೆಚ್ಚು ಪ್ರಚಲಿಸುತ್ತದೆ, ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ
ಮಕ್ಕಳಿಗೆ ನಮ್ಮ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರ ಹಾಗೂ ಪರಂಪರೆ ಉಳಿಸಿ ಬೆಳೆಸುವ ಜಾಗೃತಿ ಮೂಡುತ್ತದ ಎಂದು ಹೇಳಿದರು

ಬಳಿಕ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮನಂದೀಶ್ ಭಾರತದಲ್ಲಿ ಸೀರೆಗೆ ತನ್ನದೇ ಆದ ಮಹತ್ವ ಇದೆ. ಸೀರೆ ಹಿಂದು ಸಂಸ್ಕೃತಿಯ ಪ್ರತೀಕ. ಇಂತಹ ಸಂಸ್ಥೆಗಳು ಸೀರೆ ಉಡುವ ನಾರಿಗೆ ಸ್ಪರ್ಧೆ ಆಯೋಜಿಸುವ ಮೂಲಕ ಸೀರೆಯ ಮಹತ್ವ ತಿಳಿಸುತ್ತಿರುವುದು ಸಂತಸದ ಸಂಗತಿ ಎಂದರು.

ನಂತರ ಕಾರ್ಯಕ್ರಮದ ವಿವರಗಳನ್ನು ತಿಳಿಸಿದ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ಮಕ್ಕಳಿಗಾಗಿ ದಸರಾ ಗೆ ಸಂಬಂಧಪಟ್ಟ ವೇಷಭೂಷಣ ಸ್ಪರ್ಧೆಯಲ್ಲಿ 1 ರಿಂದ 12 ವರ್ಷದ ಮೂರು ವಿಭಾಗದ ಇರುತ್ತದೆ, ನೊಂದಣಿ ಶುಲ್ಕ 250 ಇರುತ್ತದೆ , ಸ್ಪರ್ಧಿಸಿದ ಎಲ್ಲಾ ಮಕ್ಕಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು,
ಆನಂತರ 16 ವರ್ಷದಿಂದ 60 ವರ್ಷದವರ 4 ವಿಭಾಗದ ಯುವತಿಯರು ಹಾಗೂ ಮಹಿಳೆಯರಿಗೆ ಸೀರಿ ಸ್ಪರ್ಧೆಯು ಆಯೋಜಿಸಲಾಗಿದ್ದು ಅದರ ನೊಂದಣಿ ಶುಲ್ಕ 499 ರೂ ಇರುತ್ತದೆ , 5ವಿಜೇತರಿಗೆ ಬೆಳ್ಳಿ ನಾಣ್ಯ ಬಹುಮಾನ ವಿರುತ್ತದೆ ಎಂದು ತಿಳಿಸಿದರು

ಸ್ಪರ್ಧೆಯಲ್ಲಿ ಭಾಗವಹಿಸುವವರು ಹಾಗೂ ಮಾಹಿತಿ ಪಡೆಯುವವರು 8971389539 / 88846 89700 ಸಂಪರ್ಕಿಸಬಹುದು

ಇದೇ ಸಂದರ್ಭದಲ್ಲಿ ಮೇಕ್ ಸೊಸೈಟಿ ಸ್ಮೈಲ್ ಫೌಂಡೇಶನ್ ಅಧ್ಯಕ್ಷರಾದ ರಂಜಿತಾ ಸುಬ್ರಹ್ಮಣ್ಯ,ಸಮತ್ವo ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ವನಮಾಲ, ಪದ್ಮ, ವೀಣಾ, ನಂದಿನಿ ಎಂ ಜೆ, ಸ್ಪೂರ್ತಿ ಕೆ ಯಾದವ್, ಪೂಜಾ ಎಸ್ ಎಲ್, ಹಾಗೂ ಇನ್ನಿತರರು ಭಾಗವಹಿಸಿದರು


Share