ದಸರಾ-ವಿಶೇಷ ರೈಲು ಸೇವೆ/SPECIAL TRAIN SERVICE

20
Share

SOUTH WESTERN RAILWAY

*SPECIAL TRAIN SERVICE BETWEEN BENGALURU AND VASCO DA GAMA FOR DASARA FESTIVAL*

South Western Railway has decided to run a special one-trip train service between Vasco da Gama and Sir M. Visvesvaraya Terminal (SMVT) Bengaluru to cater to the high passenger demand during the upcoming Dasara festival.

Train No. 07357 will commence its journey from SMVT Bengaluru at 5:30 pm on October 20, 2023, and is scheduled to arrive at Vasco da Gama at 9:30 a.m. the next day.

In the return direction, Train No. 07358 will depart from Vasco da Gama at 02:30 p.m. on October 24, 2023, and reach its destination, SMVT Bengaluru, at 5:00 a.m. the next day.

The special train will make halts at the following stations in both directions: Chikbanavar, Tumakuru, Arsikere, Birur, Davangere, SMM Haveri, SSS Hubballi, Dharwad, Londa, Castle Rock, Kulem, Sanvordem and Madgaon.

The special trains will comprise a total of 17 coaches including AC first class (1), AC two tier (1), AC three tier (2), sleeper class (9), general second class (2) and SLR (2). coaches.

For further information, passengers are advised to check the official website (https://enquiry.indianrail.gov.in), or dial 139, or contact their nearest railway station.

*ದಸರಾ ಹಬ್ಬದ ಪ್ರಯುಕ್ತ ಬೆಂಗಳೂರು-ವಾಸ್ಕೋ ಡ ಗಾಮಾ ನಡುವೆ ವಿಶೇಷ ರೈಲು ಸೇವೆ*

ದಸರಾ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ವಾಸ್ಕೋ ಡ ಗಾಮಾ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್ಎಂವಿಟಿ) ಬೆಂಗಳೂರು ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ರೈಲು ಸೇವೆಯನ್ನು ಓಡಿಸಲು ನೈರುತ್ಯ ರೈಲ್ವೆಯು ನಿರ್ಧರಿಸಿದೆ.

ರೈಲು ಸಂಖ್ಯೆ 07357 ಅಕ್ಟೋಬರ್ 20 ರಂದು ಸಂಜೆ 5:30 ಕ್ಕೆ ಎಸ್ಎಂವಿಟಿ ಬೆಂಗಳೂರಿನಿಂದ ಪ್ರಯಾಣವನ್ನು ಆರಂಭಿಸಿ, ಮರುದಿನ ಬೆಳಿಗ್ಗೆ 9:30 ಕ್ಕೆ ವಾಸ್ಕೋ ಡ ಗಾಮಾ ನಿಲ್ದಾಣವನ್ನು ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 07358 ಅಕ್ಟೋಬರ್ 24 ರಂದು ಮಧ್ಯಾಹ್ನ 02:30 ಕ್ಕೆ ವಾಸ್ಕೋ ಡ ಗಾಮಾದಿಂದ ಹೊರಟು ಮರುದಿನ ಬೆಳಿಗ್ಗೆ 5:00 ಗಂಟೆಗೆ ತನ್ನ ಗಮ್ಯಸ್ಥಾನವಾದ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.

ಎರಡೂ ಮಾರ್ಗಗಳಲ್ಲಿ ಈ ವಿಶೇಷ ರೈಲು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಎಸ್.ಎಂ.ಎಂ ಹಾವೇರಿ, ಎಸ್.ಎಸ್.ಎಸ್ ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್ ರಾಕ್, ಕುಲೆಮ್, ಸ್ಯಾನ್ವೊರ್ಡೆಮ್ ಮತ್ತು ಮಡಗಾಂವ್ ನಿಲ್ದಾಣಗಳಲ್ಲಿ ನಿಲ್ಲಲಿವೆ.

ವಿಶೇಷ ರೈಲುಗಳು ಎಸಿ ಪ್ರಥಮ ದರ್ಜೆ (1), ಎಸಿ ಎರಡನೇ ದರ್ಜೆ (1), ಎಸಿ ಮೂರನೇ ದರ್ಜೆ (2), ಸ್ಲೀಪರ್ ಕ್ಲಾಸ್ (9), ಸಾಮಾನ್ಯ ದ್ವಿತೀಯ ದರ್ಜೆ (2) ಮತ್ತು ಎಸ್ಎಲ್ಆರ್ (2) ಸೇರಿದಂತೆ ಒಟ್ಟು 17 ಬೋಗಿಗಳು ಒಳಗೊಂಡಿರುತ್ತವೆ.

ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ಅಧಿಕೃತ ವೆಬ್ಸೈಟ್ (https://enquiry.indianrail.gov.in) ಅನ್ನು ಪರಿಶೀಲಿಸಿ ಅಥವಾ 139 ಗೆ ಡಯಲ್ ಮಾಡಿ ಅಥವಾ ತಮ್ಮ ಹತ್ತಿರದ ರೈಲ್ವೆ ನಿಲ್ದಾಣವನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.

 

 


Share