ದಸರಾ,4-10-21ರ,-ಸರಳ,ಆಯುಧ ಪೂಜೆ – ವೇದ ,ಬ್ರಹ್ಮ ,ಶ್ರೀ. ರವಿಶಂಕರ್ ಶರ್ಮಾ ನವರಿಂದ ಕೇಳಿ/ವೀಕ್ಷಿಸಿ

1118
Share

 

https://www.facebook.com/mysore.pathrike/videos/2634954870100104/

ಹರಿ ಓಂ- 4 10 22ರ ದಸರಾ ಮಹೋತ್ಸವದ ಅಂಗವಾಗಿ ಆಯ್ದು ಪೂಜೆ ಪ್ರಯುಕ್ತ ಪುರೋಹಿತರು ನಿಮ್ಮ ಮನೆಗೆ  ಕೈಗಾರಿಕೆಗೆ ಬಂದು ಪೂಜೆ ಮಾಡಿಸಲಿದ್ದಾರೆ .

ವಿಶೇಷ ಸೂಚನೆ

04-10-2022 ಮಂಗಳವಾರದ ನಿತ್ಯ ಪಂಚಾಂಗ.

ನವಮಿ, ಶುಕ್ಲ ಪಕ್ಷ
ಆಶ್ವೀಜ

ತಿಥಿ ನವಮಿ 14:20:23
ಪಕ್ಷ ಶುಕ್ಲ
ನಕ್ಷತ್ರ ಉತ್ತರಾಷಾಡ 22:50:05
ಯೋಗ ಅತಿಗಂಡ 11:21:35
ಕರಣ ಕೌಳವ 14:20:23
ಕರಣ ತೈತುಲ 25:10:21*
ವಾರ ಮಂಗಳವಾರ
ತಿಂಗಳು (ಅಮಾವಾಸ್ಯಾಂತ್ಯ) ಆಶ್ವೀಜ
ತಿಂಗಳು (ಹುಣ್ಣಿಮಾಂತ್ಯ) ಆಶ್ವೀಜ
ಚಂದ್ರ ರಾಶಿ    ಮಕರ
ಸೂರ್ಯ ರಾಶಿ    ಕನ್ಯಾ
ಋತು ಶರದ್
ಆಯನ ದಕ್ಷಿಣಾಯಣ
ಸಂವತ್ಸರ ಶುಭಕೃತ್
ಸಂವತ್ಸರ (ಉತ್ತರ) ರಾಕ್ಷಸ
ವಿಕ್ರಮ ಸಂವತ್ 2079 ವಿಕ್ರಮ ಸಂವತ್
ವಿಕ್ರಮ ಸಂವತ್ (ಕರ್ತಕ) 2078 ವಿಕ್ರಮ ಸಂವತ್
ಶಕ ಸಂವತ್ 1944 ಶಕ ಸಂವತ್ ಆಶ್ವೀಜ
ಸೂರ್ಯೋದಯ 06:13:39 ಸೂರ್ಯಾಸ್ತ 18:10:31
ಹಗಲಿನ ಅವಧಿ 11:56:52 ರಾತ್ರಿಯ ಅವಧಿ 12:03:09
ಚಂದ್ರೋದಯ 14:03:55 ಚಂದ್ರಾಸ್ತ 25:46:05*

ಸೂರ್ಯೋದಯ
ಲಗ್ನ   ಕನ್ಯಾ 16°37′ , 166°37′
ಸೂರ್ಯ ನಕ್ಷತ್ರ ಹಸ್ತ ಚಂದ್ರ ನಕ್ಷತ್ರ ಉತ್ತರಾಷಾಡ
ಪಾದ, ಚರಣ
2 ಭೊ ಉತ್ತರಾಷಾಡ 11:37:32
3 ಜಾ ಉತ್ತರಾಷಾಡ 17:13:55
4 ಜೀ ಉತ್ತರಾಷಾಡ 22:50:05
1 ಖೀ ಶ್ರಾವಣ 28:26:07*
ಸೂರ್ಯೋದಯ 06:13:39 ಸೂರ್ಯಾಸ್ತ 18:10:31
ಹಗಲಿನ ಅವಧಿ 11:56:52 ರಾತ್ರಿಯ ಅವಧಿ 12:03:09
ಲಗ್ನ ಸೂರ್ಯೋದಯ
  ಕನ್ಯಾ 16°37′ , 166°37′
ಮುಹೂರ್ತ
ರಾಹು ಕಾಲ 15:11 – 16:41 ಅಶುಭ
ಯಮಘಂಡ ಕಾಲ 09:13 – 10:42 ಅಶುಭ
ಗುಳಿಕ ಕಾಲ 12:12 – 13:42
ಅಭಿಜಿತ್ 11:48 -12:36 ಶುಭ
ದುರ್ಮುಹೂರ್ತ 08:37 – 09:25 ಅಶುಭ
ದುರ್ಮುಹೂರ್ತ 22:59 – 23:48 ಅಶುಭ

ಆಯುಧ ಪೂಜೆ ಮಾಡುವವರು ಈ ಕೆಳಗಿನ ಪಂಚಾಂಗವನ್ನು ಓದಿಕೊಂಡು ಅಂದರೆ ತಿಥಿ ವಾರ ನಕ್ಷತ್ರ ಓದಿಕೊಂಡು ಆಯುಧ ಪೂಜೆಯನ್ನು ಮಾಡಬೇಕಾಗಿ ಮನವಿ ಮಾಡಲಾಗಿದೆ

ಮೈಸೂರು. ಮಾನವಕುಲವನ್ನು ರಕ್ಷಿಸುವ ಆಯುಧ ಪೂಜೆಯನ್ನು ಮಾಡಿಸಲು ನಿಮ್ಮ ಮನೆಯ ಬಾಗಿಲಿಗೆ ಬಂದು ಮಾಡಿಸಲಿದ್ದಾರೆ, ಮೈಸೂರು ನಗರದ ವೇದಬ್ರಹ್ಮ ಶ್ರೀ ರವಿಶಂಕರ್ ಶರ್ಮಾ ಅವರು ಆಯುಧ ಪೂಜೆ ಮಾಡುವ ಸರಳ ವಿಧಾನವನ್ನು ವಿಡಿಯೋ ಚಿತ್ರದ ಮೂಲಕ ತಿಳಿಸಿಕೊಡುವ ಪ್ರಯತ್ನ ಮಾಡಿದ್ದಾರೆ.

ತಾಂತ್ರಿಕ ತೊಂದರೆಯಿಂದಾಗಿ ಕಡೆಯ ಒಂದು ನಿಮಿಷ ಧ್ವನಿ ಸ್ಥಗಿತಗೊಂಡಿದೆ ( ಕಡೆಯಲ್ಲಿ ಹೇಳಿರುವುದು ಹೀಗೆ ಇರುತ್ತದೆ ಮೆಣಸಿನಕಾಯಿ ಇತ್ಯಾದಿ ಎಲ್ಲವನ್ನು ಮುಖ್ಯದ್ವಾರ ಮನೆ ಅಂಗಡಿ ಕೈಗಾರಿಕೆ ಎಲ್ಲಿ ಪೂಜೆ ನಡೆದಿರುತ್ತದೆ ಆ ಸ್ಥಳದಲ್ಲಿ ಕಟ್ಟಬೇಕು)
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ
ರವಿಶಂಕರ್ ಶರ್ಮ
9845679566

ಆಯುಧಪೂಜೆಗೆ ಏನೆಲ್ಲಾ ಬೇಕು
ವೇ||ಬ್ರ||ಶ್ರೀ ರವಿ ಶಂಕರ್ ಶರ್ಮ
ಮೈಸೂರು-
ನವರಾತ್ರಿ ಬಂತೆಂದರೆ ಸಾಕು, ತಕ್ಷಣ ಗಮನಸೆಳೆಯುವುದು ಮಾರ್ನೋಮಿ ಅಥವಾ ಆಯುಧಪೂಜೆ. ಎಲ್ಲಿನೋಡಿದರಲ್ಲಿ ವಾಹನಗಳು, ಅಂಗಡಿ-ಮುಂಗಟ್ಟುಗಳು ಸ್ವಚ್ಛ ಗೊಂಡು ಹಸಿರು ಮಾವಿನಸೊಪ್ಪು ಹೂವುಗಳಿಂದ ಶೃಂಗರಿಸಿಕೊಂಡು ಅವರವರ ಶಕ್ತಿ ಅನುಸಾರ ಅಚ್ಚುಕಟ್ಟಾದ ಆಕರ್ಷಿತ ಅಲಂಕಾರದಿಂದ ಕಂಗೊಳಿಸುವಂತೆ ಮಾಡುತ್ತಾರೆ‌.
ಹೀಗೆ ಆಯುಧಪೂಜೆಗೆ ಏನೆಲ್ಲಾ ಪೂಜಾ ಸಲಕರಣೆಗಳು ಬೇಕೆಂದು, ಎಲ್ಲವನ್ನು ಶೇಖರಿಸಿಟ್ಟುಕೊಂಡು ಅಚ್ಚುಕಟ್ಟಾದ ಸಮಯೋಚಿತ ಪೂಜೆ ಮಾಡಲೆಂದು ಪೂಜಾ ಸಾಮಗ್ರಿಗಳ ಪಟ್ಟಿಯನ್ನು ವೇದ ಬ್ರಹ್ಮ ಶ್ರೀ ರವಿಶಂಕರ್ ಶರ್ಮ ಅವರು ಹೇಗೆಲ್ಲಾ ತಯಾರಿ ಮಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ.ಹಾಗು ಸಾಮಗ್ರಿಗಳ ಪಟ್ಟಿಗಳನ್ನು ವಿವರಿಸಿದ್ದಾರೆ,
ಅದರಂತೆ
ಅರಿಶಿನ-ಕುಂಕುಮ , ಮಂಗಳಾರತಿ ಹಲ್ಲೆ, ದೀಪದ ಕಂಬ, ಪಂಚಪಾತ್ರೆ —ಉದ್ದರಣೆ
ವಿಳ್ಳೇದೆಲೆ ಅಡಿಕೆ ಗಂಧದಕಡ್ಡಿ ,ಕರ್ಪೂರ, ಬಿಡಿ ಹೂವು ,ಕಟ್ಟಿದ ಹೂವು ,ನಿಂಬೆಹಣ್ಣು ಬೂದುಗುಂಬಳಕಾಯಿ ಸ್ವೀಟ್ ಗಳು ಬಾಳೆಕಂಬ ಮಾವಿನಸೊಪ್ಪು ಗೆಜ್ಜೆವಸ್ತ್ರ ಹಾಗೂ ಗಂಧ
ಒಂದು ನಿಂಬೆಹಣ್ಣಿಗೆ 7 ಮೆಣಸಿನಕಾಯಿ ಪೋಣಿಸಿ ಇಟ್ಟುಕೊಳ್ಳಬೇಕು . ಕುಂಬಳಕಾಯಿಯನ್ನು ಒಂದು ಭಾಗ ರಂದ್ರ ಕೊರೆದು ಅರಿಶಿನ ಕುಂಕುಮ ಚಿಲ್ಲರೆ ನಾಣ್ಯ ಹಾಕಿ ತಯಾರಿಸಿಕೊಳ್ಳಬೇಕು ಐದು ರೀತಿಯ ಹಣ್ಣುಗಳು ಬಾಳೆಹಣ್ಣು ಇತ್ಯಾದಿಗಳನ್ನು ಇಟ್ಟುಕೊಳ್ಳಬೇಕು ಎಂದು ಶ್ರೀ ರವಿಶಂಕರ್ ಶರ್ಮ ತಿಳಿಸುತ್ತಾರೆ.
ಇವೆಲ್ಲವೂ ಪ್ರತಿನಿತ್ಯ ಅಥವಾ ವಿಶೇಷ ಸಂದರ್ಭದಲ್ಲಿ ಅನ್ವಯಿಸುವಂತೆ, ಗಡಿಬಿಡಿ ಗಳಿಲ್ಲದೆ ಅಚ್ಚುಕಟ್ಟಾದ ಪೂಜೆಗೆ ಬೇಕಾದ ಪದಾರ್ಥಗಳು.

ಸಂಪರ್ಕಿಸಿ
ರವಿಶಂಕರ್ ಶರ್ಮ
9845679566


Share