ನಮಸ್ಕಾರ ಮೈಸೂರು ಪತ್ರಿಕೆಯನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿರುವ ನಿಮಗೆ ವಂದನೆಗಳು

757
Share

ನಮಸ್ಕಾರ ಮೈಸೂರು ಪತ್ರಿಕೆಯನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿರುವ ನಿಮಗೆ ವಂದನೆಗಳು . ಕಳೆದ 87 ವರ್ಷಗಳಿಂದ ಮೈಸೂರು ಪತ್ರಿಕೆಯು ನಿಮ್ಮ ಅಭಿಲಾಷೆಗೆ ತಕ್ಕಂತೆ ದೇಶ ವಿದೇಶಗಳ ಆಗು ಹೋಗುಗಳನ್ನು ಆಗಿಂದಾಗೆ ಪ್ರಕಟಿಸುತ್ತಾ ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು ಸರಿಯಷ್ಟೆ. ಇತ್ತೀಚಿನ ಸ್ಪರ್ಧಾಯುಗದಲ್ಲಿ ಮೈಸೂರು ಪತ್ರಿಕೆಯನ್ನು ಮುದ್ರಣ ಕ್ರಮದಲ್ಲಿ ಪುಟಗಳ ವಿನ್ಯಾಸದಲ್ಲಿ ತರಲು ಶ್ರಮಿಸುತ್ತಿರುವುದಾದರೂ ನ್ಯೂಸ್ ಪ್ರಿಂಟ್, ಮೆಷಿನ್ ಆಧಾರಿತ ಪ್ರಿಂಟಿಂಗ್, ಇವುಗಳೆಲ್ಲದರ ವೆಚ್ಚ ಅಧಿಕವಾಗುತ್ತಿರುವುದರಿಂದಲೂ ಮುದ್ರಣಗೊಂಡ ಪತ್ರಿಕೆಯನ್ನು ವಿತರಿಸಲು ವಿತರಕರು ಸಕಾಲದಲ್ಲಿ ಬರದೆ ಓದುಗರಿಗೆ ತಲುಪಿಸಲು ವ್ಯತ್ಯಾಸಗಳಾ ಗುತ್ತಿರುವುದರಿಂದಲೂ ಮುದ್ರಣ ಮಾಡುವುದಲ್ಲದೆ .ಈ- ಪೇಪರ್ ಆಗಿಯೂ ಹೊರ ತರಲಾಗುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಷಯವೇ . ನಿಮ್ಮ ಪ್ರೋತ್ಸಾಹದಿಂದ ಮೈಸೂರು ಪತ್ರಿಕೆಯನ್ನು ಬಣ್ಣಗಳ ವಿನ್ಯಾಸದೊಂದಿಗೆ ಈ -ಪೇಪರ್ ಆಗಿ ಹೊರತಂದು ಜನರ, ಸರ್ಕಾರದ ಮೆಚ್ಚುಗೆಗೆ ಪಾತ್ರವೂ ಆಗಿದೆ .ಇಷ್ಟಾದರೂ ಬಹುತೇಕ ಕಡೆ ಪತ್ರಿಕೆಯನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ ಅಥವಾ ಈ ಮುದ್ರಣ ಪ್ರತಿ ಬಹುತೇಕರಿಗೆ ತಲುಪುತ್ತಿಲ್ಲ ಎಂಬ ವಿಷಯ ಕೇಳಿ ಬರುತ್ತಿದೆ .ಇದರಿಂದ ಮತ್ತಷ್ಟು ಉತ್ತೇಜಿತರಾದ ನಮ್ಮ ಆಡಳಿತ ವರ್ಗವು ಹೊಸದೊಂದು ವೆಬ್ ಸೈಟ್ ಒಂದನ್ನು ಪ್ರಾರಂಭಿಸಿ ಅದರ ಮುಖಾಂತರ ಸುದ್ದಿಗಳನ್ನು ತಲುಪಿಸಲು ಪ್ರಾರಂಭಿಸಿದೆ. ಹಿಂದೆ ಒಮ್ಮೆ ಇದನ್ನು ಪ್ರಾರಂಭಸಿತ್ತಾದರೂ, ವೆಬ್ ಸೈಟ್ನ ನಿಯಮಾನುಸಾರ ಕೆಲವು ಮಾರ್ಪಾಡುಗಳನ್ನು ಮಾಡಬೇಕಾಗಿ ಬಂದಿದ್ದರಿಂದ ಇದೀಗ ಅದನ್ನೆಲ್ಲಾ ಸರಿಪಡಿಸಿ ಇನ್ನು ಮುಂದೆ ನಿರಂತರವಾಗಿ ತರಲು ಪ್ರಾರಂಭಿಸಿದ್ದೇವೆ. .ಓದುಗರೆ ನಿಮ್ಮ ಪ್ರೋತ್ಸಾಹ ಒಂದೇ ನಮಗೆ ಮಹಾ ಆಶೀರ್ವಾದ .ಇಂದು ಇದನ್ನು ಪ್ರಾರಂಭಿಸುತ್ತಿದ್ದು ಒಂದೆರಡು ದಿನಗಳವರೆಗೆ ಸ್ವಲ್ಪ ವ್ಯತ್ಯಾಸಗಳು ಕಂಡು ಬಂದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಕೇಳಿಕೊಳ್ಳುತ್ತೇವೆ . ನಾವು ಅದನ್ನೆಲ್ಲ ಪರಿಗಣಿಸಿ ನಿಮಗೆಲ್ಲ ಮೆಚ್ಚುಗೆ ಆಗುವ ರೀತಿಯಲ್ಲಿ ನಿಮ್ಮ ಮುಂದೆ ಹೊಸದೊಂದು ರೀತಿಯಲ್ಲಿ ಮುಂದಿಡಲು ಸರ್ವ ಪ್ರಯತ್ನವನ್ನೂ ಮಾಡುವೆವು.ಸಾವಿರದ ಒಂಬೈನೂರ ಮೂವತ್ತು ಮೂರು ನೇ ಇಸ್ವಿಯಿಂದ ಸಾವಿರದ ಒಂಬೈನೂರ ಎಪ್ಪತ್ತು ಆರು ನೇ ಇಸವಿಯವರೆಗೆ ಟಿ ನಾರಾಯಣರಾಯರು ಅವರ ಸಂಪಾದಕತ್ವದಲ್ಲಿ ಪತ್ರಿಕೆ ಪ್ರಕಟಿಸಲಾಯಿತು
ಸಾವಿರದ ಒಂಬೈನೂರ ಎಪ್ಪತ್ತು ಆರು ನೇ ಇಸವಿಯಿಂದ ಎರಡು ಸಾವಿರದ ಹದಿನೆಂಟು ರವರೆಗೆ ಸಂಪಾದಕರಾದ ಟಿ ವೆಂಕಟರಾಮು ಅವರ ನೇತೃತ್ವದಲ್ಲಿ ಪತ್ರಿಕೆಯನ್ನು ಪ್ರಕಟಿಸಿ ಪ್ರಕಟಿಸಲಾ ಯಿತು. ನಿಮ್ಮೆಲ್ಲರ ಪ್ರೋತ್ಸಾಹದಿಂದ ಪತ್ರಿಕೆಯು ಹೊಸ ದಾಪುಗಾಲನ್ನು ಇಡಲು ಪ್ರಯತ್ನಿಸುತ್ತಿದ್ದು ಮತ್ತೊಮ್ಮೆ ನಿಮ್ಮ ಪ್ರೋತ್ಸಾಹವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ


Share