ನಿಫಾ ವೈರಸ್ ಬಗ್ಗೆ ಕರ್ನಾಟಕ ಸರ್ಕಾರದ ಕಟ್ಟೆಚ್ಚರ

275
Share

ಕರ್ನಾಟಕದ ಗಡಿ ಕೇರಳದಲ್ಲಿ ಇತ್ತೀಚೆಗೆ ಯುವಕನೋರ್ವನಲ್ಲಿ ನಿಫಾ ವೈರಸ್ ಪತ್ತೆಯಾಗಿರುವ ಹಿನ್ನೆಲೆ ಕರ್ನಾಟಕ ರಾಜ್ಯ ಸರ್ಕಾರ ತೀವ್ರ ಎಚ್ಚರಿಕೆ ವಹಿಸಿದೆ.
ಕರೋನಾ ಗಿಂತ ತೀವ್ರವಾಗಿರುವ ಈ ವೈರಸ್ ಹೇಗೆ ಹರಡುತ್ತದೆ,ಯಾವ ರೀತಿಯ ಮುಂಜಾಗರೂಕಥೆ ಯನ್ನು ವಹಿಸಬೇಕು ಇತ್ಯಾದಿ ವಿಷಯಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ವರದಿ ನೀಡಲು ಮುಖ್ಯಮಂತ್ರಿಗಳು ಬೊಮ್ಮಾಯಿ ರವರು ಗಡಿ ಪ್ರದೇಶದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಿಫಾ ಎಂಬ ಜಾತಿಯ ಬಾವಲಿಯಲ್ಲಿ ಮಾರಣಾಂತಿಕ ವೈರಸ್ ಕಂಡುಬಂದಿದ್ದು ಅವು ತಿಂದು ಬಿಟ್ಟ ಹಣ್ಣುಗಳು ಕೆಳಗೆ ಬಿದ್ದು ಹೋದರೆ ಅದನ್ನು ತಿನ್ನುವ ಯಾವುದೇ ಪ್ರಾಣಿ ಅಥವಾ ಪಕ್ಷಿಗಳಿಂದ ಈ ವೈರಾಣುಗಳು ಮನುಷ್ಯರನ್ನು ಹೊಕ್ಕು ಐದರಿಂದ 45 ದಿನಗಳೊಳಗೆ ತೀವ್ರ ರೀತಿಯ ಕೆಮ್ಮು ಮೆದುಳು ಜ್ವರ ಬಂದು ಸಾವು ಸಂಭವಿಸಬಹುದಾಗಿದೆ.2018 ಈ ವೈರಾಣುವಿನಿಂದ ಅನೇಕ ಸಾವು ಸಂಭವಿಸಿರುವುದನ್ನು ಇಲ್ಲಿ ಸ್ಮರಿಸಬಹುದು .

ಚಿತ್ರಕೃಪೆ : ಇಂಡಿಯಾ ಟುಡೆ


Share