ನಿಸಾರ್ ಅಹಮದ್ ಅವರು ಕನ್ನಡ ಸಾರಸ್ವತ ಲೋಕದ ದಿಗ್ಗಜ

627
Share

ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲ ಹಾಗೂ ಶಾರದಾದೇವಿ ನಗರ ಹಿತರಕ್ಷಣಾ ವೇದಿಕೆ ವತಿಯಿಂದ ಶಾರದಾ ದೇವಿ ವೃತ್ತದಲ್ಲಿರುವ ಶಾರದಾ ದೇವಿ ಉದ್ಯಾನವನದಲ್ಲಿ ನಿತ್ಯೋತ್ಸವ
ಪ್ರೊ ನಿಸಾರ್ ಅಹಮದ್
ಭಾವಚಿತ್ರ ಹಿಡಿದು ಸಂತಾಪ ಸಲ್ಲಿಸಲಾಯಿತು ನಂತರ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ ವೈ ಡಿ ರಾಜಣ್ಣ
ಪ್ರಧಾನವಾಗಿ ನಿತ್ಯೋತ್ಸವ ಕಾವ್ಯದ ಮೂಲಕ ಕನ್ನಡಿಗರ ಪ್ರೀತಿಯನ್ನ
ಸಂಪಾದಿಸಿದವರು
ಶ್ರೇಷ್ಟ ಕೃತಿ ಗಳನ್ನ ಕನ್ನಡಿಗರ‌‌ ಮಡಿಲಿಗೆ ಹಾಕಿದ್ದಾರೆ
ಕೋಮು ಜಾತಿ ಗಡಿ ಗಳಾಚೆ
ನಿಂತ ಶ್ರೇಷ್ಠ ‌ಸಾಹಿತಿಯಾಗಿ
ನಮ್ಮ ಜನಮಾನಸದಲ್ಲಿ
ನೆಲೆಸಿದ್ದಾರೆ
ನಿಸಾರ್ ಅಹಮದ್ ಅವರು ಕನ್ನಡ ಸಾರಸ್ವತ ಲೋಕದ ದಿಗ್ಗಜ. ನಮ್ಮ ನಾಡನ್ನು ನಿತ್ಯೋತ್ಸವ ಗೀತೆ ಮೂಲಕ ಅದ್ಭುತವಾಗಿ ವರ್ಣಿಸಿ ನಿತ್ಯೋತ್ಸವ ಕವಿ ಎಂದು ಖ್ಯಾತಿ ಪಡೆದವರು. ಅವರ ಅಗಲಿಕೆ ಸುದ್ದಿ ಬೇಸರ ತಂದಿದೆ.
ನಿಸಾರ್ ಅಹಮದ್ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆ ಅಪಾರ. ಮನಸು ಗಾಂಧಿಬಜಾರು, ನಿತ್ಯೋತ್ಸವ ಸೇರಿದಂತೆ ಒಟ್ಟು 21 ಕವನ ಸಂಕಲನಗಳು, 14 ವೈಚಾರಿಕ ಕೃತಿಗಳು, 5 ಮಕ್ಕಳ ಸಾಹಿತ್ಯ, 5 ಅನುವಾದ ಕೃತಿಗಳು, 13 ಸಂಪಾದನಾ ಗ್ರಂಥಗಳನ್ನು ನೀಡುವ ಮೂಲಕ , ಬೆಣ್ಣೆ ಕದ್ದ ನಮ್ಮ ಕೃಷ್ಣದಂತಹ ಕವನದ ಮೂಲಕ ಅಕ್ಷರ ಲೋಕಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದ ನಿಸಾರ್ ಅಹಮದ್ ಅವರ ಅಕ್ಷರ ಸೇವೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಿಂದ ಹಿಡಿದು, ಮಾಸ್ತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಯವ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿವೆ.
ನಂತರ ಮಾತನಾಡಿದ ಬಿಜೆಪಿ
ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷರಾದ ಬಿಎಂ ರಘು ಮಾತನಾಡಿ
ಇಂತಹ ಮಹಾನ್ ಕವಿಯನ್ನು ಕಳೆದುಕೊಳ್ಳುವ ಮೂಲಕ ಕನ್ನಡ ಸಾರಸ್ವತ ಲೋಕ ಬಡವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ.ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ನೀಡಲಿ .ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧರಾಗಿದ್ದ ಸುಗಮ ಸಂಗೀತ ಲೋಕದಲ್ಲಿ ಅವರ ನಿತ್ಯೋತ್ಸವ ಗೀತೆಯನ್ನು ಯಾವುದೇ ಒಬ್ಬ ಗಾಯಕ ಆಡಿದ್ರೂ ಸಹ ಪ್ರೇಕ್ಷಕರೆಲ್ಲರೂ ಕೂಡಿ
ಪ್ರತಿಯೊಂದು ಸಾಲುಗಳನ್ನು ಹಡುವಷ್ಟರ ಮಟ್ಟಿಗೆ ಅವರ ಪ್ರಭಾವ ಪ್ರೇಕ್ಷಕರ ಮೇಲೆ ಆಗಿತ್ತು ಪ್ರತಿಯೊಂದು ಸಾಲುಗಳಲ್ಲಿ ಸಹ ಕನ್ನಡದ ಕಂಪು ಎದ್ದು ಕಾಣುತ್ತಿತ್ತು ಮತ್ತೊಮ್ಮೆಈ ಪುಣ್ಯ ಭೂಮಿಯಲ್ಲಿ ಹುಟ್ಟಿ ಬರಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದರು
ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರ (ನಗರಮಂಡಲ) ವತಿಯಿಂದ ಇಂದು ವಿಧಿವಶರಾದ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ರವರಿಗೆ ಶಾರದಾ ದೇವಿ ನಗರ ವೃತ್ತದಲ್ಲಿ, ಸಂತಾಪ ಸೂಚಿಸಲಾಯಿತು ಈ ಸಂದರ್ಭದಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಅಧ್ಯಕ್ಷ ಬಿ ಎಂ ರಘು, ಮುಖಂಡರಾದ ಕಸಾಪ ಅಧ್ಯಕ್ಷ ವೈ ಡಿ ರಾಜಣ್ಣ, ರೇವಣ್ಣ, ಲಕ್ಷ್ಮಿದೇವಿ, ಮಂಡಲ ಪ್ರದಾನ ಕಾರ್ಯದರ್ಶಿ ಎಚ್ ಜಿ ರಾಜಮಣಿ,ಉಪಾಧ್ಯಕ್ಷರರಾದ ಗಿರೀಶ್ ದಟ್ಟಗಳ್ಳಿ, ವಿಜಯ ಮಂಜುನಾಥ್, ಕಾರ್ಯದರ್ಶಿಗಳಾದ ಬಿ ಸಿ ಶಶಿಕಾಂತ್, ನಾಗರಾಜ್ ಜನ್ನು, ಮಹಿಳಾ ಅಧ್ಯಕ್ಷೆ ಶುಭಶ್ರೀ,ಹಿಂದುಳಿದ ಮೋರ್ಚಾ ಅಧ್ಯಕ್ಷ ರಾಚಪ್ಪಾಜಿ, ಅಭಿಷೇಕ್ ಗೌಡ, ರಮಾಬಾಯಿ, ಪೂರ್ಣಿಮಾ ಕಾಮತ್,ಸ್ಥಳೀಯರಾದ, ಲೋಹಿತ್, ಸುಚೇಂದ್ರ,ಜೀವನ್, ಸಾಗರ್, ಭರತ್, ವಡಿವೇಲ್, ಉಪಸ್ಥಿತರಿದ್ದರು.


Share