ನೈರುತ್ಯ ರೈಲ್ವೆಗೆ 1 ಚಿನ್ನ, ಬೆಳ್ಳಿ: ಪದಕ

24
Share

*62 ನೇ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೈರುತ್ಯ ರೈಲ್ವೆಗೆ 1 ಚಿನ್ನ, ಬೆಳ್ಳಿ*ಕನಕ

ಒರಿಸ್ಸಾದ ಭುವನೇಶ್ವರದಲ್ಲಿ ಜೂನ್ 15 ರಿಂದ 19 ರವರೆಗೆ ನಡೆದ 62 ರಾಷ್ಟ್ರೀಯ ಅಂತರ ರಾಜ್ಯ ಹಿರಿಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೈರುತ್ಯ ರೈಲ್ವೆ ವಲಯದ ಕ್ರೀಡಾಪಟುಗಳು 1 ಚಿನ್ನ ಮತ್ತು 1 ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.

ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಶ್ರೀ ಜುನೆದ್ ಅವರು ಕಮರ್ಷಿಯಲ್ ಕ್ಲರ್ಕ್ ಕಮ್‌ ಟಿಕೆಟ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅವರು, 35 ಕಿ.ಮೀ ನಡಿಗೆ ಓಟದಲ್ಲಿ 1 ಚಿನ್ನದ ಪದಕವನ್ನು ಪಡೆದಿದ್ದಾರೆ.

ಇದೇ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್ನೊರ್ವ ಕ್ರೀಡಾಪಟುಗಳಾದ ಶ್ರೀ ಜೆಸ್ಸಿ ಸಂದೇಶ್ ಅವರು ಟಿಕೆಟ್ ಪರೀಕ್ಷಕರಾಗಿದ್ದು, ಎತ್ತರ ಜಿಗಿತ ಸ್ಫರ್ಧೆಯಲ್ಲಿ 1 ಬೆಳ್ಳಿ ಪದಕ (2.24 ಮೀ) ಪಡೆದು ಇದೇ ವರ್ಷ ನಡೆಯಲಿರುವ ಏಷ್ಯನ್ ಗೇಮ್ಸ್ ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಅನೀಶ ಹೆಗಡೆ
ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ
ನೈಋತ್ಯ ರೈಲ್ವೆ, ಹುಬ್ಬಳ್ಳಿ.


Share