ಪಂಚರಾಜ್ಯ ಚುನಾವಣೆ:ರ್ಯಾಲಿ ವಿಜಯೋತ್ಸವ ನಿರ್ಭಂದ

318
Share

ದೇಶದ ಎಲ್ಲೆಡೆ ಕರೋನ -19 ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ 2022ರ ಪಂಚ ರಾಜ್ಯಗಳ(ಉತ್ತರ ಪ್ರದೇಶ’ ಉತ್ತರಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ) ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಇಂದುಪ್ರಕಟಿಸಿದ್ದು ,ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಚಂದ್ರ ಪತ್ರಿಕಾಗೋಷ್ಠಿಯಲ್ಲಿ ನೀಡಿದ ವಿವರಗಳ ಪ್ರಮುಖ ಅಂಶಗಳು ಹೀಗಿವೆ .
*ಮತದಾರರು ಕರೋನದಿಂದ ಅಂತರ ಕಾಪಾಡಲು ಶೇಕಡಾ ಹದಿನಾರು ರಷ್ಟು ಮತಗಟ್ಟೆಗಳನ್ನು ಹೆಚ್ಚಿಸಲಾಗಿದೆ .
* ನೂಕುನುಗ್ಗಲು ಆಗಬಾರದೆಂದು 1ಗಂಟೆ ಕಾಲ ಮತದಾನ ಅವಧಿಯನ್ನು ಹೆಚ್ಚಿಸಲಾಗಿದೆ .
*1250ಜನರಿಗೆ ಮಾತ್ರ 1ಮತಕೇಂದ್ರದಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ .
*ಮಾಸ್ಕ್ ಧಾರಣೆ ಕಡ್ಡಾಯ, ಅಂತರ ಕಾಪಾಡುವಿಕೆ, ಪ್ರತಿ ಮತಗಟ್ಟೆಯನ್ನು ಸ್ಯಾನಿಟೈಸ್ ಮಾಡುವ ಬಗ್ಗೆ ಕ್ರಮ.
*ಕರೋನಾ ಪೀಡಿತರಿಗೆ ಅಂಚೆ ಮೂಲಕ ಮತದಾನ ವ್ಯವಸ್ಥೆ . *ಚುನಾವಣೆಯಲ್ಲಿ ಭಾಗವಹಿಸುವ ಎಲ್ಲಾ ಅಧಿಕಾರಿಗಳನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಪರಿಗಣನೆ. ಇವರೆಲ್ಲರೂ 2ಡೋಸ್ ಲಸಿಕೆ ಹಾಕಿಸಿಕೊಂಡಿರುವುದು ಕಡ್ಡಾಯ. *ಚುನಾವಣೆಗೆ ಹೋಗುತ್ತಿರುವ ಎಲ್ಲಾ ರಾಜ್ಯಗಳು ಶೇಕಡಾ ನೂರರಷ್ಟು ವ್ಯಾಕ್ಸಿನ್ ಪಡೆಯುವಂತೆ ನೋಡಿಕೊಳ್ಳಬೇಕು.
*ಶೇ ನೂರರಷ್ಟು ಎರಡನೇ ಡೋಸ್ ಆಗಿರುವಂತೆ ಕ್ರಮ ಕೈಗೊಳ್ಳಬೇಕೆಂದು ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ .
*ಅಭ್ಯರ್ಥಿಗಳು ಆನ್ ಲೈನ್ ಮೂಲಕವೂ ನಾಮಪತ್ರ ಸಲ್ಲಿಸಬಹುದಾದ ವಿನೂತನ ಪ್ರಯೋಗ ಜಾರಿಗೆ.
*ನಾಮಪತ್ರ ಸಲ್ಲಿಸಲು ನೇರವಾಗಿ ಚುನಾವಣಾ ಕೇಂದ್ರಕ್ಕೆ ಹೋಗುವ ಇಬ್ಬರಿಗೆ ಮಾತ್ರ ಅವಕಾಶ .
*ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜಾರಿಗೆ ಬಂದಿದ್ದು ಜನವರಿ ಹದಿನೈದರವರೆಗೆ ಯಾವುದೇ ಸಭೆ ಸಮಾರಂಭಗಳನ್ನು ರ್ಯಾಲಿಗಳನ್ನು ರೋಡ್ ಶೋ ಸೈಕಲ್/ಬೈಕ್ ರ್ಯಾಲಿ ಮಾಡದಂತೆ ನಿಷೇಧ .
*ಮನೆ ಮನೆಗೆ ತೆರಳಿ ಮತದಾನ ಯಾಚಿಸುವವರು 5ಜನರಿಗಿಂತ ಹೆಚ್ಚು ಇರುವಂತಿಲ್ಲ .
*ಚುನಾವಣೆಯ ನಂತರ ಗೆದ್ದ ಅಭ್ಯರ್ಥಿಗಳು ವಿಜಯೋತ್ಸವ ಸಮಾರಂಭ ಸಂಭ್ರಮಾಚರಣೆ ಮಾಡುವಂತಿಲ್ಲ .
ಹೀಗೆ ಕರೋನಾ ಹಿನ್ನೆಲೆಯಲ್ಲಿ ಹತ್ತು ಹಲವು ವಿಷಯಗಳನ್ನು ಪ್ರಕಟಿಸಿರುವ ಚುನಾವಣಾ ಆಯೋಗ ಇದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದೆ.


Share