“ಪರಮಾವತಾರಿ ಶ್ರೀಕೃಷ್ಣ” ಹೊಸ ಧಾರವಾಹಿ ಜೀ ಟಿವಿಯಲ್ಲಿ

1246
Share

ಜೀ಼ ಕನ್ನಡದಲ್ಲಿ ಹೊಸ ಧಾರಾವಾಹಿ “ಪರಮಾವತಾರಿ ಶ್ರೀಕೃಷ್ಣ”

ಕನ್ನಡದ ಜನಪ್ರಿಯ ವಾಹಿನಿ ಜೀ಼ ಕನ್ನಡ ಇದೀಗ “ಪರಮಾವತಾರಿ ಶ್ರೀಕೃಷ್ಣ” ಪ್ರಾರಂಭಿಸುತ್ತಿದೆ. ಜೂನ್ 22, 2020ರಂದು ಸಂಜೆ 6ರಿಂದ 7ರವರೆಗೆ ಸೋಮವಾರದಿಂದ ಶನಿವಾರದವರೆಗೆ ಪ್ರಸಾರವಾಗಲಿರುವ ಈ ಧಾರಾವಾಹಿ ಶ್ರೀ ಕೃಷ್ಣನ ಲೀಲೆಗಳನ್ನು ಕನ್ನಡ ಕಿರುತೆರೆ ವೀಕ್ಷಕರಿಗೆ ಉಣಬಡಿಸಲಿದೆ.

ಶ್ರೀಕೃಷ್ಣನ ಪಾತ್ರ ಎಲ್ಲರಿಗೂ ಚಿರಪರಿಚಿತ. ಹುಟ್ಟಿಗೂ ಮೊದಲೇ ತನ್ನ ಮಾವ ಕಂಸನ ಬೆದರಿಕೆಯ ನಡುವೆ ಜನ್ಮ ತಳೆದು ಕಂಸನನ್ನು ಕೊಂದು ಪಾರಮ್ಯ ಸಾಧಿಸುವ ಕೃಷ್ಣನ ಲೀಲೆಗಳು ಅಪಾರ. ಬೆಣ್ಣೆ ಕದಿಯುವ ಮುದ್ದು ಕೃಷ್ಣ,ಗೋಪಿಕೆಯರೊಂದಿಗೆ ಆಡುವ ತುಂಟ ಕೃಷ್ಣ ನಂತರ ಕುರುಕ್ಷೇತ್ರದಲ್ಲಿ ಪಾಂಡವರ ಪರವಾಗಿ ನಿಂತು ಅರ್ಜುನನಿಗೆ ಭಗವದ್ಗೀತೆ ಬೋಧಿಸಿ ಯುದ್ಧದಲ್ಲಿ ಅವರಿಗೆ ಗೆಲುವು ತಂದುಕೊಡುತ್ತಾನೆ.

ವಿಷ್ಣುವಿನ ಅವತಾರ ಶ್ರೀಕೃಷ್ಣನ ಕುರಿತು ಹಲವು ಕುತೂಹಲಗಳು ಜನರಲ್ಲಿವೆ. ದೇವರಾದ ಕೃಷ್ಣನು ಬೆಣ್ಣೆ ಕದಿಯುತ್ತಿದ್ದುದು ಏಕೆ? ರಾಧೆ-ಕೃಷ್ಣೆಯರ ಪ್ರೇಮದ ನಡುವೆಯೂ ಕೃಷ್ಣ ಏಕೆ ರಾಧೆಯನ್ನು ವರಿಸಲಿಲ್ಲ? ಇಂತಹ ಹಲವು ಪ್ರಶ್ನೆಗಳಿಗೆ ಈ ಧಾರಾವಾಹಿ ಉತ್ತರಿಸುತ್ತದೆ.

ಶ್ರೀ ಕೃಷ್ಣನ ಜೀವನ, ಬಲರಾಮನೊಂದಿಗೆ ಸೋದರ ಪ್ರೇಮ, ರಾಧೆಯೊಂದಿಗೆ ಪ್ರೀತಿ, ಕುರುಕ್ಷೇತ್ರದಲ್ಲಿ ಮುತ್ಸದ್ದಿತನ, ಭಗವದ್ಗೀತೆ ಬೋಧಿಸಿದ ಕೃಷ್ಣನ ಜೀವನದ ಅಸಂಖ್ಯ ಆಯಾಮಗಳಿವೆ. ಈ ಧಾರಾವಾಹಿಯಲ್ಲಿ ಶ್ರೀಕೃಷ್ಣ ತುಂಟ, ಸದಾ ಶಾಂತ ಸ್ವಭಾವದ, ಅಗತ್ಯವಿದ್ದಾಗ ಪ್ರತಿರೋಧ ತೋರುವ ಅಂಧ ವಿಶ್ವಾಸಗಳನ್ನು ನಿರಾಕರಿಸುವ ಎಲ್ಲರ ಪ್ರೀತಿ ಗಳಿಸಿದ ವ್ಯಕ್ತಿಯಾಗಿರುತ್ತಾನೆ. ಅದೇ ರೀತಿ ಕೃಷ್ಣನೊಂದಿಗೆ ಬೆಣ್ಣೆ ಕದಿಯುವ ರಾಧೆ ಧೈರ್ಯವಂತೆ, ತಾಳ್ಮೆಯುಳ್ಳವಳು, ಕ್ಷಮೆ ನೀಡುವವಳು, ಕೃಷ್ಣನನ್ನು ಪ್ರೀತಿಸುವ ವ್ಯಕ್ತಿಯಾಗಿರುತ್ತಾಳೆ.

ಶ್ರೀಕೃಷ್ಣನ ತಾಯಿ ಯಶೋದೆ ಮಗನನ್ನು ಮುದ್ದಿಸುವ ಅವನ ಚೇಷ್ಟೆಗಳಿಗೆ ಶಿಕ್ಷಿಸುವ ಮಮತಾಮಯಿ ತಾಯಿ. ಕಂಸ ದುರಾಸೆಯ, ಸ್ವಾರ್ಥದ ಕೃಷ್ಣನನ್ನು ನಾಶ ಮಾಡಲು ಬಯಸುವ ದುಷ್ಟ. ನಂದ ಎಲ್ಲರನ್ನೂ ಸ್ನೇಹಮಯವಾಗಿ ಕಾಣುವ ಎಲ್ಲರಿಗೂ ನೆರವಾಗುವ ಸಮಸ್ಯೆಗಳನ್ನು ಪರಿಹರಿಸುವ ಶಾಂತ ಸ್ವಭಾವದ ವ್ಯಕ್ತಿ.

ಕಂಸನ ಸೋದರಿ ದೇವಕಿ ದೇವರನ್ನು ನಂಬಿ ಕೃಷ್ಣನನ್ನು ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗುವ ಧೀರೋದಾತ್ತ ಮಹಿಳೆ. ಮಾಹಿಷ್ಮತಿಯ ರಾಜ ವಸುದೇವ ಯೋಧ ಹಾಗೂ ಕಾಳಜಿ ವಹಿಸುವ ಪತಿಯಾಗಿರುತ್ತಾನೆ. ಶೇಷನಾಗನ ಅವತಾರ ಬಲರಾಮ ಕೃಷ್ಣನ ಕುರಿತು ಅಪಾರ ಪ್ರೀತಿ ಹೊಂದಿರುತ್ತಾನೆ.

ಪೌರಾಣಿಕ ಧಾರಾವಾಹಿಗಳನ್ನು ಇಷ್ಟಪಡುತ್ತಿರುವ ಕನ್ನಡ ಕಿರುತೆರೆ ವೀಕ್ಷಕರಿಗೆ ಇದು ಮನರಂಜನೆಯ ರಸದೌತಣ ಬಡಿಸುವುದರಲ್ಲಿ ಸಂಶಯವಿಲ್ಲ.

ಜೀ಼ ಕನ್ನಡದಲ್ಲಿ “ಪರಮಾವತಾರ ಶ್ರೀಕೃಷ್ಣ” ಧಾರಾವಾಹಿ ಪ್ರಸಾರ ಕುರಿತು ಜೀ಼ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, “ಕನ್ನಡ ವೀಕ್ಷಕರು ಸದಾ ಪೌರಾಣಿಕ ಧಾರಾವಾಹಿಗಳನ್ನು ಬಹಳ ಇಷ್ಟಪಟ್ಟು ವೀಕ್ಷಿಸುತ್ತಾರೆ. ಜೀ಼ ಕನ್ನಡ ವೀಕ್ಷಕರ ಅಭಿರುಚಿ ಅರಿತು ಅದಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಈ ಸಾಲಿಗೆ ಪರಮಾವತಾರ ಶ್ರೀಕೃಷ್ಣ ಸೇರ್ಪಡೆಯಾಗಿದೆ. ಶ್ರೀಕೃಷ್ಣ ಬಾಲ್ಯ, ಕೌಮಾರ್ಯ, ಯೌವನ ಹಾಗೂ ಕುರುಕ್ಷೇತ್ರದಲ್ಲಿ ಪಾಂಡವರ ಪರವಾಗಿ ನಿಂತು ಹೋರಾಟ ನಡೆಸುವವರೆಗೆ ಅತ್ಯಂತ ವರ್ಣರಂಜಿತ ಹಾಗೂ ಕುತೂಹಲಕಾರಿ ವ್ಯಕ್ತಿತ್ವ. ಶ್ರೀಕೃಷ್ಣನ ಬಾಲಲೀಲೆಗಳು, ಸೋದರ ಪ್ರೇಮ, ರಾಧೆಯ ಪ್ರೀತಿ ಎಲ್ಲವೂ ಜೀ಼ ಕನ್ನಡ ವೀಕ್ಷಕರಿಗೆ ಮನರಂಜನೆಯ ಹೊಸ ಎತ್ತರಕ್ಕೆ ಕೊಂಡೊಯ್ಯುವುದರಲ್ಲಿ ಅನುಮಾನವಿಲ್ಲ” ಎನ್ನುತ್ತಾರೆ.

ಜೂನ್ 22 2020 ರಂದು ಸಂಜೆ 6ರಿಂದ 7ರವರೆಗೆ ಸೋಮವಾರದಿಂದ ಶುಕ್ರವಾರವಾರದವರೆಗೆ ಪ್ರಸಾರವಾಗಲಿದೆ. ಇನ್ನೇಕೆ ತಡ ಮನೆಯಲ್ಲಿ ಮನೆ ಮಂದಿ ಜೊತೆ ಕುಳಿತು ಸಮಯ ಕಳೆಯುವ ಇದೇ ಹೊತ್ತಿನಲ್ಲಿ ಮತ್ತೊಮ್ಮೆ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ “ಪರಮಾವತಾರ ಶ್ರೀಕೃಷ್ಣ” ಧಾರಾವಾಹಿ ಕುಟುಂಬದ ಜೊತೆ ನೋಡಿ ಆನಂದಿಸಿ


Share