ಪರಿಸರ ದಿನಾಚರಣೆ : ” ಮನೆಯಲ್ಲಿ ಬೆಳೆಸಿ, ಮಹಿಮೆಯ ತುಳಸಿ “

610
Share

 

ಜೂನ್ ಐದರ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಇಂದು ಮೈಸೂರಿನ ಅವಧೂತ ದತ್ತ ಪೀಠದ ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದಲ್ಲಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಭಕ್ತಾದಿಗಳಿಗೆ ತುಳಸಿ ಗಿಡ ನೀಡಿ ” ಮನೆಯಲ್ಲಿ ಬೆಳೆಸಿ ಮಹಿಮೆಯ ತುಳಸಿ ” ಎಂದು ಅರಿವು ಮೂಡಿಸಿ ಭಕ್ತಾದಿಗಳಿಗೆ ತುಳಸಿ ಸಸಿ ನೀಡುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ಮನುಷ್ಯರು ತಮ್ಮ ಜೀವಿತದಲ್ಲಿ ಕನಿಷ್ಠ 5 ವೃಕ್ಷಗಳನ್ನಾದರು ಬೆಳೆಸಬೇಕು. ಅದಕ್ಕೆ ಅವಕಾಶ ಆಗದಿದ್ದಲ್ಲಿ ಪ್ರತಿಯೊಬ್ಬರು ಮನೆಯಲ್ಲಿ ತುಳಸಿ ಗಿಡವನ್ನಾದರು ಬೆಳೆಸಿ. ಅದರಿಂದ ಪರಿಸರವನ್ನು ಬೆಳೆಸಬಹುದು. ತುಳಸಿ ಗಾಳಿಯ ಸೇವನೆಯಿಂದ ಆರೋಗ್ಯವು ವೃದ್ಧಿಯಾಗುತ್ತದೆ ಎಂದು ತಿಳಿಸಿದರು.


Share