ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ

29
Share

ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್‌ನ ಹೊರಗೆ ಮಂಗಳವಾರ ಬಂಧಿಸಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪಾಕಿಸ್ತಾನದ ದಿನಪತ್ರಿಕೆ ಡಾನ್ ವರದಿ ಮಾಡಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್‌ನ ಹೊರಗಿನಿಂದ ರೇಂಜರ್‌ಗಳು ಬಂಧಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಅಧಿಕಾರದಿಂದ ಕೆಳಗಿಳಿದ ನಂತರ ಖಾನ್ ಅವರು ನೂರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿದ್ದರು.
ಸ್ಥಳೀಯ ವರದಿಗಳ ಪ್ರಕಾರ, ಪಿಟಿಐ ಅಧ್ಯಕ್ಷರನ್ನು ರೇಂಜರ್‌ಗಳು ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ವರದಿಯಾಗಿದೆ, ನ್ಯಾಯಾಲಯಕ್ಕೆ ಅವರು ತಮ್ಮ ವಿರುದ್ಧ ದಾಖಲಾದ ಅನೇಕ ಎಫ್‌ಐಆರ್‌ಗಳಿಗೆ ಜಾಮೀನು ಪಡೆಯಲು ಹೋಗಿದ್ದರು.
ಖಾನ್ ಅವರು ದಂಗೆ ಪ್ರಕರಣ ಹಾಗೂ ಇನ್ನೊಂದು ಕೊಲೆ ಯತ್ನದ ಆರೋಪಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆಯಲು ಹೈಕೋರ್ಟ್‌ಗೆ ಹಾಜರಾಗಲು ನಿರ್ಧರಿಸಿ ತೆರಳಿದ್ದರು ಎಂದು ಸ್ಥಳೀಯ ಮಾದ್ಯಮಗಳು ವರದಿ ಮಾಡಿವೆ.

Share