ಪುಟ್ಟರಾಜ ಗವಾಯಿ ನಮನ ಕಾರ್ಯಕ್ರಮ

418
Share

 

ಸಾವಿರಾರು ಅಂಧರಿಗೆ ಕಣ್ಣಾದ ಪುಟ್ಟರಾಜ್ ಗವಾಯಿ ಎಲ್ ಆರ್ ಮಹದೇವಸ್ವಾಮಿ

ಪುಟ್ಟರಾಜ ಗವಾಯಿಗಳು ಹುಟ್ಟು ಕುರುಡರಾಗಿದ್ದರೂ ಸಾವಿರಾರು ಅಂಧರ ಬಾಳಿಗೆ ಬೆಳಕಾಗಿದ್ದಾರೆ ಎಂದು ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಎಲ್ ಆರ್ ಮಹದೇವಸ್ವಾಮಿ

ನಗರದ ಕೆ ಎಂ ಪ್ರವೀಣ್ ಕುಮಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಚಾಮುಂಡಿಪುರಂ ವೃತ್ತ ದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಪುಟ್ಟರಾಜ ಗವಾಯಿ ನಮನ ಕಾರ್ಯಕ್ರಮವನ್ನು ಆಯೋಜಿಸಲಾಯಿತು
ಪುಟ್ಟರಾಜ್ ಗವಾಯಿ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಎಲ್ ಆರ್ ಮಹದೇವಸ್ವಾಮಿ ಪಂ|ಪುಟ್ಟರಾಜ ಗವಾಯಿ ಮನುಕುಲಕ್ಕೆ ದಾರಿದೀಪ ಪಂ| ಪುಟ್ಟರಾಜ ಗವಾಯಿಗಳು ಇಡೀ ಮನುಕುಲಕ್ಕೆ ದಾರಿದೀಪ ಆದವರು.
ಅಂಥ ಮಹಾತ್ಮರಿಂದ ಸಾವಿರಾರು ವಿದ್ಯಾರ್ಥಿಗಳು ಸಂಗೀತಾಭ್ಯಾಸ ಮಾಡುವ ಮೂಲಕ ಇಂದು ಖ್ಯಾತನಾಮರಾಗಿದ್ದಾರೆ ಎಂದರು.
ಸಂಗೀತದಲ್ಲಿ ಅತ್ಯುದ್ಭುತ ಶಕ್ತಿ ಇದ್ದು, ನಮ್ಮಲ್ಲಿರುವ ಕೆಟ್ಟ ಗುಣಗಳನ್ನು ಹೊರಹಾಕುವ ಶಕ್ತಿ ಇದೆ.
ಸಮಾಜದಲ್ಲಿರುವ ಆಸ್ಪತ್ರೆಗಳು ಔಷಧಿ ನೀಡುವ ಮೂಲಕ ರೋಗವನ್ನು ಗುಣಮುಖ ಮಾಡಿದರೆ, ಸಂಗೀತದಲ್ಲಿ ರೋಗವೇ ನಮ್ಮ ಬಳಿ ಸುಳಿಯದಂತೆ ಮಾಡುವ ಶಕ್ತಿ ಇದೆ. ಆದ್ದರಿಂದ ಸಂಗೀತ ಎಂಬ ಕಲೆಯನ್ನು ಎಲ್ಲರೂ ಕರಗತ ಮಾಡಿಕೊಳ್ಳಬೇಕು ಎಂದರು.
ನಂತರ ಮಾತನಾಡಿದ ಮೈಲಾಕ್ ಅಧ್ಯಕ್ಷ ರಾದ ಎನ್ ವಿ ಫಣೀಶ್ ಕಣ್ಣಿದ್ದವರು ಮಾಡದ ಸಾಧನೆ ಕಣ್ಣಿಲ್ಲದ ಪಂ.ಪುಟ್ಟರಾಜ ಗವಾಯಿಗಳು ಮಾಡಿದ್ದಾರೆ. ಭಗವಂತನು ಅವರನ್ನು ವಿಶೇಷವಾಗಿ ಸೃಷ್ಟಿ ಮಾಡಿ ಅವರ ಸಾಧನೆಗೆ ಎಲ್ಲರೂ ಮಾರು ಹೋಗುವಂತೆ ಮಾಡಿದ್ದಾರೆ. ಮಹಾನ್‌ ಸಂತರು ಬರೆದ 8 ಹಿಂದಿ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ಹಿರಿಮೆ ಅವರದು. ಯಾವುದೇ ಭಾಷೆ ಕಲಿಯಬಹುದು ಆದರೆ, ಭಾಷೆಯೊಳಗಿನ ಅಂತರಂಗ, ಕಲೆ ಹಾಗೂ ಸೌಂದರ್ಯ ಅರಿಯುವುದು ಕಷ್ಟ .ಅಂತಹ ಸಾಧನೆಯನ್ನು ಪಂ.ಪುಟ್ಟರಾಜ ಗವಾಯಿಗಳು ಮಾಡಿದ್ದಾರೆ. ಕಬ್ಬಿಣದ ಕಡಲೆಯಾಗಿದ್ದ ಬಸವ ಪುರಾಣವನ್ನು ಹಿಂದಿ ಭಾಷೆಗೆ ಅನುವಾದ ಮಾಡಿದ ಏಕೈಕ ಕನ್ನಡ ವಿದ್ವಾಂಸರು ಪಂ.ಪುಟ್ಟರಾಜರು ಆಗಿದ್ದಾರೆ. ಸಂಸ್ಕೃತದ 4 ಸಾವಿರ ವ್ಯಾಕರಣ ಸೂತ್ರಗಳನ್ನು ಕಂಠಪಾಠ ಮಾಡಿ ಹೇಳಿರುವುದು ನಿಜಕ್ಕೂ ಅಚ್ಚರಿಯ ಸಂಗತಿ ಎಂದರು
ನಂತರ ಮಾತನಾಡಿದ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ಗಾನಯೋಗಿ ಡಾ. ಪುಟ್ಟರಾಜ ಗವಾಯಿ ಅವರ ಜನ್ಮದಿನದಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ಪಂಚಾಕ್ಷರಿ ಗವಾಯಿಗಳ ಶಿಷ್ಯತ್ವ ಸ್ವೀಕರಿಸಿದ ನಾಡೋಜ ಪುಟ್ಟರಾಜ ಗವಾಯಿಗಳು ಹಿಂದುಸ್ಥಾನಿ ಸಂಗೀತ ಕ್ಷೇತ್ರದ ಮೇರು ಶಿಖರವಾಗಿ ಬೆಳೆದರು.
ಇಂತಹ ಅಪೂರ್ವ ಚೇತನವನ್ನು ಸ್ಮರಿಸುವ ಮೂಲಕ ನಾವೆಲ್ಲರೂ ಅವರ ಹಾದಿಯಲ್ಲಿ ಸಾಗುವ ಪ್ರಯತ್ನ ಮಾಡೋಣ.
ಇದೇ ಸಂದರ್ಭದಲ್ಲಿ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ,ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಾದ ಎಲ್ ಆರ್ ಮಹದೇವಸ್ವಾಮಿ ,ಮೈಲ್ಯಾಕ್ ಅಧ್ಯಕ್ಷ ರಾದ ಎನ್ ವಿ ಫಣೀಶ್ ,ನಗರಪಾಲಿಕೆ ಸದಸ್ಯ ಮಾ ವಿ ರಾಮ್ ಪ್ರಸಾದ್ ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿರ್ದೇಶಕರಾದ ಲಕ್ಷ್ಮಿದೇವಿ, ನವೀನ್ ಕುಮಾರ್ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರಾದ ಲಕ್ಷ್ಮಿದೇವಿ ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್ ,ಅಜಯ್ ಶಾಸ್ತ್ರಿ ,ಜೀವಧಾರ ರಕ್ತನಿಧಿ ಕೇಂದ್ರ ನಿರ್ದೇಶಕರಾದ ಗಿರೀಶ್, ಸಿಂಡಿಕೇಟ್ ಜಗದೀಶ್ ,ಸುಚೀಂದ್ರ, ಚಕ್ರಪಾಣಿ,ಶ್ರೀಕಾಂತ್ ಕಶ್ಯಪ್ ,
ನವೀನ್ ,ಎಸ್ ಎನ್ ರಾಜೇಶ್ ,ರಾಕೇಶ್ ಕುಂಚಿಟಿಗ, ಚೇತನ್ ,
ಹಾಗೂ ಇನ್ನಿತರರು ಹಾಜರಿದ್ದರು


Share