ಪ್ರಧಾನ ಮಂತ್ರಿಗಳಿಂದ ಬೆಂಗಳೂರು-ಮೈಸುರು ಕಾರಿಡಾರ್ ನ ಲೋಕಾರ್ಪಣೆ

227
Share

 

*ಪ್ರಧಾನ ಮಂತ್ರಿಗಳಿಂದ ಬೆಂಗಳೂರು-ಮೈಸುರು ಕಾರಿಡಾರ್ ನ ಲೋಕಾರ್ಪಣೆ*

ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಇಂದು ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ ಕಾಲೋನಿಯಲ್ಲಿ ಬೆಂಗಳೂರು-ಮೈಸೂರು ಕಾರಿಡಾರ್ ಅನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದರು.

ಬೆಂಗಳೂರು-ನಿಡಘಟ್ಟ ವಿಭಾಗ ಷಟ್ಪಥ ರಾಷ್ಟ್ರೀಯ ಹೆದ್ದಾರಿ 275 ಯೋಜನೆಯ ವೆಚ್ಚ ರೂ 4429  ಕೋಟಿ, ಉದ್ದ 56.20 ಕಿಮೀ, ನಿಡಘಟ್ಟ- ಮೈಸೂರು ವಿಭಾಗ ಷಟ್ಪಥ ರಾಷ್ಟ್ರೀಯ ಹೆದ್ದಾರಿ 275  ಯೋಜನೆಯ ವೆಚ್ಚ 4050.3 ಕೋಟಿ,ಉದ್ದ 61.10 ಕಿ.ಮೀ ಆಗಿರುತ್ತದೆ.

ಮೈಸೂರು -ಕುಶಾಲನಗರ ಕಾರಿಡಾರ್ ನ ಶಂಕುಸ್ಥಾಪನೆ ಯನ್ನು ಇದೇ ವೇದಿಕೆಯಲ್ಲಿ ಪ್ರಾಧಾನ ಮಂತ್ರಿಗಳು ನೆರವೇರಿಸಿದರು. ಈ ಯೋಜನೆಯಲ್ಲಿ ನಾಲ್ಕು ಪ್ಯಾಕೇಜ್ ಗಳು ಸೇರಿದ್ದು,   ಗುಡ್ಡೆ ಹೊಸುರು (ಕುಶಾಲನಗರ ಬೈಪಾಸ್) ನಿಂದ ಹೆಮ್ಮಿಗೆ ಗ್ರಾಮ( ಪಿರಿಯಾಪಟ್ಟಣ ರಸ್ತೆ ಜಂಕ್ಷನ್) ದವರೆಗೆ ರಾಷ್ಟ್ರೀಯ ಹೆದ್ದಾರಿ 275 ವಿಭಾಗದ ಚತುಷ್ಪಥ ಹೆದ್ದಾರಿ ನಿರ್ಮಾಣ ಯೋಜನೆಯ ವೆಚ್ಚ ರೂ. 909.90 ಕೋಟಿ, ಉದ್ದ 22.70 ಕಿಮೀ.
ಹೆಮ್ಮಿಗೆ ಗ್ರಾಮ ( ಪಿರಿಯಾಪಟ್ಟಣ ರಸ್ತೆ ಜಂಕ್ಷನ್) ದಿಂದ ಹುಣಸೂರು ( ಕೆ.ಆರ್. ನಗರ ಜಂಕ್ಷನ್) ವರೆಗೆ ರಾಷ್ಟ್ರೀಯ ಹೆದ್ದಾರಿ 275 ವಿಭಾಗದ ಚತುಷ್ಪಥ ಹೆದ್ದಾರಿ ನಿರ್ಮಾಣ ಯೋಜನೆಯ ವೆಚ್ಚ ರೂ. 883.60 ಕೋಟಿ,‌ ಉದ್ದ 24.10 ಕಿಮೀ‌.
ಹುಣಸೂರು ( ಕೆ.ಆರ್ ನಗರ ಜಂಕ್ಷನ್) ನಿಂದ ಯಲಚಹಳ್ಳಿ ಗ್ರಾಮ ( ಕೆ.ಆರ್ ನಗರ ರಸ್ತೆ ಜಂಕ್ಷನ್) ದವರೆಗೆ ರಾಷ್ಟ್ರೀಯ ಹೆದ್ದಾರಿ 275 ವಿಭಾಗದ ಚತುಷ್ಪಥ ಹೆದ್ದಾರಿ ನಿರ್ಮಾಣ ಯೋಜನೆಯ ವೆಚ್ಚ ರೂ 1062.80 ಕೋಟಿ, ಉದ್ದ 26.55 ಕಿಮೀ.
ಯಲಚಹಳ್ಳಿ ಗ್ರಾಮ (ಕೆ ಆರ್ ನಗರ ರಸ್ತೆ ಜಂಕ್ಷನ್) ದಿಂದ ಅದರ ಶ್ರೀರಂಗಪಟ್ಟಣ ಬೈಪಾಸ್(ಪಶ್ಚಿಮ ವಾಹಿನಿ) ವರೆಗೆ ರಾಷ್ಟ್ರೀಯ ಹೆದ್ದಾರಿ 275 ವಿಭಾಗದ ಚತುಷ್ಪಥ ಹೆದ್ದಾರಿ ನಿರ್ಮಾಣ ಯೋಜನೆಯ ವೆಚ್ಚ ರೂ.1272.70 ,ಕೋಟಿ, ಉದ್ದ 18.98 ಕಿಮೀ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಭುವನೇಶ್ವರಿ ದೇವತೆ ಮತ್ತು ಆದಿಚುಂಚನಗಿರಿ ಮತ್ತು ಮೇಲುಕೋಟೆಯ ಗುರುಗಳಿಗೆ ನಮನ ಸಲ್ಲಿಸುವ ಮೂಲಕ ಪ್ರಾರಂಭಿಸಿದರು. ರಾಜ್ಯದ ವಿವಿಧ ಭಾಗಗಳಲ್ಲಿ ಕರ್ನಾಟಕದ ಜನರ ನಡುವೆ ಇರಲು ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

“ಭಾರತಮಾಲಾ’ ಮತ್ತು ‘ಸಾಗರಮಾಲಾ’ದಂತಹ ಉಪಕ್ರಮಗಳು ಭಾರತದ ಭೂದೃಶ್ಯವನ್ನು ಪರಿವರ್ತಿಸುತ್ತಿವೆ” ಈ ವರ್ಷದ ಬಜೆಟ್‌ನಲ್ಲಿ ದೇಶದ ಮೂಲಸೌಕರ್ಯ ಅಭಿವೃದ್ಧಿಗೆ 10 ಲಕ್ಷ ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ ಎಂದರು.

“ಉತ್ತಮ ಮೂಲಸೌಕರ್ಯವು ‘ಜೀವನದ ಸುಲಭತೆಯನ್ನು’ ಹೆಚ್ಚಿಸುತ್ತದೆ. ಇದು ಪ್ರಗತಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.”ದೇಶದಲ್ಲಿ ದಶಕಗಳಿಂದ ಬಾಕಿ ಉಳಿದಿದ್ದ ನೀರಾವರಿ ಯೋಜನೆಗಳು ತ್ವರಿತ ಗತಿಯಲ್ಲಿ ಪೂರ್ಣಗೊಳ್ಳುತ್ತಿವೆ
ಎಂದರು.

‘ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಯಲ್ಲಿ ಮಂಡ್ಯ ಭಾಗದ 2.75 ಲಕ್ಷಕ್ಕೂ ಹೆಚ್ಚು ರೈತರಿಗೆ ಕೇಂದ್ರ ಸರ್ಕಾರ 600 ಕೋಟಿ ರೂ. ನೀಡಲಾಗಿದೆ.ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ 12,000 ಕೋಟಿ ರೂಪಾಯಿಗಳನ್ನು ಸರ್ಕಾರ ನೇರವಾಗಿ ಕರ್ನಾಟಕದ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದೆ ಎಂದು ಪ್ರಧಾನಿ ತಿಳಿಸಿದರು. ಮಂಡ್ಯ ಜಿಲ್ಲೆಗೆ ಕೇಂದ್ರ ಸರಕಾರವೇ 600 ಕೋಟಿ ಅನುದಾನ ನೀಡಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 6000 ರೂಪಾಯಿ ಕಂತಿಗೆ 4000 ರೂಪಾಯಿಗಳನ್ನು ಸೇರಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರವನ್ನು ಪ್ರಧಾನಿ ಶ್ಲಾಘಿಸಿದರು.

ದೇಶದ ಯುವಕರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯ ಅಲ್ಲಿರುವ ಆಧುನಿಕ ಮತ್ತು ಉತ್ತಮ ಗುಣಮಟ್ಟದ ಬಗ್ಗೆ ಹೆಮ್ಮೆಪಡುತ್ತಿದ್ದಾರೆ . ಈ ಎಕ್ಸ್‌ಪ್ರೆಸ್‌ವೇ ಮೈಸೂರು-ಬೆಂಗಳೂರು ನಡುವಿನ ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡಿದೆ ಎಂದು ಅವರು ತಿಳಿಸಿದರು.

ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಇಬ್ಬರು ಮಹಾನ್ ವ್ಯಕ್ತಿಗಳನ್ನು ಪ್ರಧಾನಿ ಸ್ಮರಿಸಿದರು. “ಕರ್ನಾಟಕದ ಮಹಾನ್ ಪುತ್ರರಾದ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಅವರು ದೇಶಕ್ಕೆ ಹೊಸ ದೃಷ್ಟಿಕೋನ ಮತ್ತು ಶಕ್ತಿಯನ್ನು ನೀಡಿದರು ಎಂದರು.

ಇಡೀ ಜಗತ್ತು ಕರೋನಾ ಸಾಂಕ್ರಾಮಿಕ ರೋಗದಿಂದ ಹೋರಾಡುತ್ತಿರುವಾಗಲೂ ದೇಶದಲ್ಲಿ ಮೂಲಸೌಕರ್ಯ ಬಜೆಟ್ ಅನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ ಈ ಬಾರಿಯ ಬಜೆಟ್‌ನಲ್ಲಿ ದೇಶದ ಮೂಲಸೌಕರ್ಯ ಅಭಿವೃದ್ಧಿಗೆ 10 ಲಕ್ಷ ಕೋಟಿಗೂ ಹೆಚ್ಚು ಹಣ ಮೀಸಲಿಡಲಾಗಿದೆ.ಕರ್ನಾಟಕದಲ್ಲಿಯೇ ಇತ್ತೀಚಿನ ವರ್ಷಗಳಲ್ಲಿ ಹೆದ್ದಾರಿ ಸಂಬಂಧಿತ ಯೋಜನೆಗಳಲ್ಲಿ ಸರ್ಕಾರ 1 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಮಾಡಿದೆ ಎಂದು ಅವರು ಮಾಹಿತಿ ನೀಡಿದರು.

ಬೆಂಗಳೂರು-ಮೈಸೂರು ಎರಡು ನಗರಗಳ ನಡುವೆ ಪ್ರಯಾಣಿಸುವಾಗ ಹೆಚ್ಚಿನ ವಾಹನ ದಟ್ಟಣೆಯ ಬಗ್ಗೆ ಜನರು ಆಗಾಗ್ಗೆ ದೂರು ನೀಡುತ್ತಾರೆ ಮತ್ತು ಎಕ್ಸ್‌ಪ್ರೆಸ್‌ವೇ ಎರಡು ನಗರಗಳ ನಡುವಿನ ಸಮಯವನ್ನು ಒಂದೂವರೆ ಗಂಟೆಗಳಿಗೆ ಕಡಿಮೆ ಮಾಡುತ್ತದೆ ಮತ್ತು ಈ ಪ್ರದೇಶದ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ರಾಮನಗರ ಮತ್ತು ಮಂಡ್ಯದ ಪಾರಂಪರಿಕ ಪಟ್ಟಣಗಳ ಮೂಲಕ ಹಾದು ಹೋಗಿರುವುದು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ ಎಂದರು.

ಸರ್ಕಾರವು ಬಡವರ ಸೇವೆಗಾಗಿ ನಿರಂತರವಾಗಿ ಕೆಲಸ ಮಾಡಿದೆ. ವಸತಿ, ಕೊಳವೆ ನೀರು, ಉಜ್ವಲ ಅನಿಲ ಸಂಪರ್ಕ, ವಿದ್ಯುತ್, ರಸ್ತೆಗಳು, ಆಸ್ಪತ್ರೆಗಳು ಮತ್ತು ಬಡವರಿಗೆ ವೈದ್ಯಕೀಯ ಚಿಕಿತ್ಸಾ ಚಿಂತೆಗಳನ್ನು ಕಡಿಮೆ ಮಾಡಲು ಆದ್ಯತೆ ನೀಡಿದೆ. ಕಳೆದ 9 ವರ್ಷಗಳಲ್ಲಿ ಸರ್ಕಾರ ಬಡವರ ಮನೆ ಬಾಗಿಲಿಗೆ ಹೋಗಿ ಅವರ ಬದುಕನ್ನು ಸುಗಮಗೊಳಿಸಿದೆ ಎಂದರು

ದೀರ್ಘಕಾಲದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಸರ್ಕಾರದ ವಿಧಾನದ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಕಳೆದ 9 ವರ್ಷಗಳಲ್ಲಿ 3 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ, ಅದರಲ್ಲಿ ಲಕ್ಷ ಮನೆಗಳನ್ನು ಕರ್ನಾಟಕದಲ್ಲಿ ನಿರ್ಮಿಸಲಾಗಿದೆ ಮತ್ತು 40 ಲಕ್ಷ ಹೊಸ ಮನೆಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಬೆಳೆಗಳ ಅನಿಶ್ಚಿತತೆಯು ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ರೈತರ ದೀರ್ಘ ಬಾಕಿಗೆ ಕಾರಣವಾಗಿದೆ. ಎಥೆನಾಲ್ ಅಳವಡಿಕೆಯಿಂದ ಸಮಸ್ಯೆಗೆ ಹೆಚ್ಚಿನ ಪರಿಹಾರ ಸಿಗಲಿದೆ ಎಂದು ಪ್ರಧಾನಿ ಹೇಳಿದರು.

ಬಂಪರ್ ಬೆಳೆಗಳ ಸಂದರ್ಭದಲ್ಲಿ, ಹೆಚ್ಚುವರಿ ಕಬ್ಬು ಎಥೆನಾಲ್ ಅನ್ನು ಉತ್ಪಾದಿಸುತ್ತದೆ, ಇದು ರೈತರಿಗೆ ಸ್ಥಿರ ಆದಾಯವನ್ನು ಖಚಿತಪಡಿಸುತ್ತದೆ. ಕಳೆದ ವರ್ಷ ದೇಶದ ಸಕ್ಕರೆ ಕಾರ್ಖಾನೆಗಳು 20 ಸಾವಿರ ಕೋಟಿ ಮೌಲ್ಯದ ಎಥೆನಾಲ್ ಅನ್ನು ತೈಲ ಕಂಪನಿಗಳಿಗೆ ಮಾರಾಟ ಮಾಡಿದ್ದು, ಕಬ್ಬಿನ ಹಣವನ್ನು ರೈತರಿಗೆ ಸಕಾಲದಲ್ಲಿ ಪಾವತಿಸಲು ಸಹಾಯ ಮಾಡುತ್ತದೆ ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ‌ ಮುಖ್ಯಮಂತ್ರಿ ಬಸವರಜು‌ ಬೊಮ್ಮಾಯಿ, ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವರು, ನಿತಿನ್ ಗಡ್ಕರಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಅಬಕಾರಿ ಸಚಿವ ಗೋಪಾಲಯ್ಯ ಕೆ, ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಡಾ: ಕೆ.ಸಿ ನಾರಾಯಣ ಗೌಡ, ಸಂಸದರಾದ ಸುಮಲತಾ ಅಂಬರೀಶ್, ಪ್ರತಾಪ್ ಸಿಂಹ‌ ಉಪಸ್ಥಿತರಿದ್ದರು.


Share