ಫ್ಲೆಕ್ಸ್ ಮುಕ್ತ ಮೈಸೂರು ನಗರ ಘೋಷಣೆಗಷ್ಟೇ ಸೀಮಿತ- ವಿಕ್ರಮ ಅಯ್ಯಂಗಾರ್

28
Share

 

*ಫ್ಲೆಕ್ಸ್ ಮುಕ್ತ ಮೈಸೂರು ನಗರ ಘೋಷಣೆಗಷ್ಟೇ ಸೀಮಿತ*

ಮೈಸೂರು ನಗರವನ್ನು ಫ್ಲೆಕ್ಸ್ ಮುಕ್ತ ಎಂದು ಘೋಷಣೆ ಮಾಡಲಾಗಿದೆ, ಆದರೆ ಇದು ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ, ನಗರದಲ್ಲಿ ಯಾವುದೇ ದೊಡ್ಡ ಸಮಾರಂಭ ಸಮಾವೇಶಗಳು ನಡೆದ ಸಂದರ್ಭ ಇದರ ಉಲ್ಲಂಘನೆ ಆಗುತ್ತಲೇ ಇರುತ್ತದೆ, ಈ ಬಗ್ಗೆ ನಗರ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳುವ ಮನಸ್ಸು ಮಾಡುತ್ತಿಲ್ಲ, ನಗರದಲ್ಲಿ ಎಲ್ಲೆಂದರಲ್ಲಿ ಅನಧಿಕೃತ ಫ್ಲೆಕ್ಸ್ ಗಳು ರಾಜಾಜಿಸುತ್ತಿವೆ, ದೇಶದ ಸ್ವಚ್ಛ ನಗರಿಯಾಗಿರುವ ಮೈಸೂರಿನ ಅಂದವನ್ನು ಈ ಫ್ಲೆಕ್ಸ್ ಗಳು ಕೆಡಿಸುತ್ತಿವೆ, ನಗರದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಸಮಾವೇಶ ಹಮ್ಮಿಕೊಂಡ ಸಂದರ್ಭ ಹಾಗೂ ವಿವಿಧ ಕಾರ್ಯಕ್ರಮಗಳ ಸಂದರ್ಭದಲ್ಲೂ ಫ್ಲೆಕ್ಸ್ ಬಲಿಕೆಯಾಗಿದೆ, ನಗರ ಪಾಲಿಕೆ ಇನ್ನಾದರೂ ಯಾವುದೇ ಒತ್ತಡಕ್ಕೆ ಮಣಿಯದೆ ಫ್ಲೆಕ್ಸ್ ಬಲಿಕೆ ಮಾಡುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು,
ಇತ್ತೀಚಿನ ದಿನಗಳಂತೂ ಸರ್ಕಾರಿ ಗುದ್ದಲಿ ಪೂಜೆ ಕಾರ್ಯಕ್ರಮ ಹಾಗೂ ಕೆಲವು ರಾಜಕಾರಣಿಗಳ ಬೆಂಬಲಿಗರ ಜನುಮದಿನ ಸೇರಿದಂತೆ ಪ್ರತಿಯೊಂದುಕ್ಕೂ ಫ್ಲೆಕ್ಸ್ ಇಲ್ಲದೆ ಕಾರ್ಯಕ್ರಮವನ್ನು ನಡೆಯುವುದೇ ಇಲ್ಲ ಇದನ್ನು ತಡೆಗಟ್ಟಲು ನಗರ ಪಾಲಿಕೆ ಅಧಿಕಾರಿಗಳು ಮುಂದಾಗಬೇಕು ಇಲ್ಲವಾದಲ್ಲಿ ಮೈಸೂರಿನ ನಾಗರೀಕರ ಜೊತೆ ಸೇರಿ ಮೈಸೂರು ನಗರ ಪಾಲಿಕೆ ಮುಂಬಾಗ ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್ ಎಚ್ಚರಿಸಿದ್ದಾರೆ


Share