ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಅನುದಾನ ನೀಡಲು ಅಗ್ರಹ

194
Share

 

*ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಅನುದಾನ ಕೊಡಿ: ಮುಳ್ಳೂರು ಗುರುಪ್ರಸಾದ್ ಆಗ್ರಹಿಸಿದ್ದಾರೆ*

ರಾಜ್ಯ ಬಜೆಟ್‌ನಲ್ಲಿ 200 ಕೋಟಿ ಮೀಸಲಿಡಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಜೆಟ್ ಮ೦ಡಿಸುವ ತಯಾರಿಯ ಲ್ಲಿದ್ದಾರೆ. ಸಮಸ್ತ ವಿಪ್ರ ಸಮಾಜ ಅಭಿವೃದ್ಧಿಯ ದೃಷ್ಟಿಕೋನ ಇಟ್ಟು ಕೊಂಡು ಬಜೆಟ್ ನಲ್ಲಿ ಬ್ರಾಹ್ಮಣ ಅಭಿವೃದ್ಧಿ ಮ೦ಡಳಿಗೆ 200 ಕೋಟ ರು. ಅನುದಾನ ಮೀಸಲಿಡಬೇಕು ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಗೌರವ ಅಧ್ಯಕ್ಷ ಮುಳ್ಳೂರು ಗುರುಪ್ರಸಾದ್ ಮನವಿ ಮಾಡಿದ್ದಾರೆ

ರಾಜ್ಯದಲ್ಲಿ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ಜಾರಿಗೆ ತರಲಿಲ್ಲ. ವಿಪ್ರ ಸಮಾಜದ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ಕೊಡುವ ಮೂಲಕ ಸಮಾಜಕ್ಕೆ ಆದ ಅನ್ಯಾಯವನ್ನು ಸರಿಪಡಿಸಬೇಕು.
ವಿಪ್ರ ಸಮಾಜದಲ್ಲೂ ಸಾಕಷ್ಟು ಜನರು ಬಡವರಿದ್ದಾರೆ. ವಾಸಿಸಲು
ಮನೆಯಿಲ್ಲದವರಿದ್ದಾರೆ.
ನಿರಾಶ್ರಿತರಿಗೆ ಮಂಡಳಿಯಿಂದ ಸೂರು ಕಲ್ಪಿಸಿಕೊಡಬೇಕು. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಲು ಮಂಡಳಿಗೆ ಅನುದಾನ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ ಮುಂಬರುವ ಬಜೆಟ್ ನಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮಕ್ಕೆ 200 ಕೋಟಿ ರು. ನೀಡಲಿ ಸಬ್‌ ಸಾತ್ ಸಬ್ ವಿಕಾಸ್ ಎನ್ನುವ ನಿಟ್ಟಿನಲ್ಲಿ ಸರ್ಕಾರ ಮಾಡಲಿ. ಎಲ್ಲಾ ಸಮುದಾ ಯಲ್ಲಿ ನೀಡುವ ಹಾಗೆ ಬ್ರಾಹ್ಮಣ ಅಭಿವೃದ್ಧಿಗೂ ಅನುದಾನ ಮೀಸಲಿಡಬೇಕೆಂದು ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಗೌರವ ಅಧ್ಯಕ್ಷ ಮುಳ್ಳೂರು ಗುರುಪ್ರಸಾದ್ ಆಗ್ರಹಿಸಿದ್ದಾರೆ


Share