ಭೀಕರ ರಸ್ತೆ ಅಪಘಾತ : ಹುತಾತ್ಮರಾದ 16 ಯೋಧರು

292
Share

ಶುಕ್ರವಾರ ಭಾರತ-ಚೀನಾ ಗಡಿಯ ಸಮೀಪ ಉತ್ತರ ಸಿಕ್ಕಿಂನಲ್ಲಿ ಸೇನಾ ವಾಹನವೊಂದು ರಸ್ತೆಯಿಂದ ಜಾರಿ ಕಮರಿಗೆ ಬಿದ್ದು ಹದಿನಾರು ಸೇನಾ ಯೋಧರು ಸಾವನ್ನಪ್ಪಿದ್ದಾರೆ ಮತ್ತು ಇತರ ನಾಲ್ವರು ಗಾಯಗೊಂಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಗಾಯಾಳುಗಳನ್ನು ಉತ್ತರ ಬಂಗಾಳದ ಸೇನಾ ಆಸ್ಪತ್ರೆಗೆ ವಿಮಾನದ ಮೂಲಕ ರವಾನಿಸಲಾಗಿದೆ.
ರಾಜ್ಯದ ರಾಜಧಾನಿ ಗ್ಯಾಂಗ್‌ಟಾಕ್‌ನಿಂದ ಸುಮಾರು 130 ಕಿಮೀ ದೂರದಲ್ಲಿರುವ ಲಾಚೆನ್‌ನಿಂದ ಸುಮಾರು 15 ಕಿಮೀ ದೂರದಲ್ಲಿರುವ ಜೆಮಾನಲ್ಲಿ ಬೆಳಿಗ್ಗೆ 8 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ.
ಸೇನಾ ವಾಹನವು 20 ಪ್ರಯಾಣಿಕರೊಂದಿಗೆ ಗಡಿ ಪೋಸ್ಟ್‌ಗಳತ್ತ ಸಾಗುತ್ತಿತ್ತು ಎಂದು ಚುಂಗ್‌ಥಾಂಗ್ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಅರುಣ್ ಥಾಟಲ್ ಮಾಹಿತಿ ನೀಡಿದ್ದಾರೆ.
ಅಪಘಾತದ ಸ್ಥಳದಿಂದ ಎಲ್ಲಾ 16 ಮೃತದೇಹಗಳನ್ನು ಹೊರತೆಗೆಯಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ನಾಲ್ವರು ಸೇನಾ ಸಿಬ್ಬಂದಿಗಳ ಸ್ಥಿತಿ ಇನ್ನೂ ತಿಳಿದುಬಂದಿಲ್ಲ ಎಂದು ಲಾಚೆನ್‌ನ ಪೊಲೀಸ್ ತಂಡದೊಂದಿಗೆ ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.


Share