ಮಲೇಷಿಯಾ : ನದಿ ಪ್ರವಾಹದಲ್ಲಿ ಒಂದೇ ಕುಟುಂಬದ 10 ಮಂದಿ ನೀರು ಪಾಲು

44
Share

ಕೌಲಾಲಂಪುರ್:
ಮಲೇಷ್ಯಾದಲ್ಲಿ ನದಿಯ ಪ್ರವಾಹದಲ್ಲಿ ಒಂದೇ ಕುಟುಂಬದ 10 ಮಂದಿ ಕೊಚ್ಚಿ ಹೋಗಿದ್ದು, ಅವರು ಈಜುತ್ತಿದ್ದ ಸ್ಥಳದಿಂದ 25 ಕಿಲೋಮೀಟರ್ ದೂರದಲ್ಲಿ ಏಳು ಶವಗಳು ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಈ ದುರಂತವು ಕಳೆದ ಶುಕ್ರವಾರದಂದು ಪೂರ್ವ ರಾಜ್ಯವಾದ ತೆರೆಂಗಾನುವಿನ ಚುಕೈ ಜಿಲ್ಲೆಯ ಕಾಡಿನ ಆಳದಲ್ಲಿರುವ ಜೆರಾಮ್ ಮಾವರ್ ಜಲಪಾತದಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ.
ಬಲಿಪಶುಗಳಲ್ಲಿ ಒಂಬತ್ತು ಮಂದಿ ಸಂಬಂಧಿಗಳು ಮತ್ತು ಒಬ್ಬರು ಆ ಕುಟುಂಬದೊಂದಿಗೆ ಮದುವೆ ನಿಶ್ಚಿತವಾಗಿದ್ದ ವರ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಹನ್ಯಾನ್ ರಮ್ಲಾನ್ ಎಎಫ್‌ಪಿಗೆ ತಿಳಿಸಿದ್ದಾರೆ.
“ಸಂತ್ರಸ್ತ ಕುಟುಂಬದವರು ಶುಕ್ರವಾರ ನದಿಯಲ್ಲಿ ಈಜುತ್ತಿದ್ದಾಗ ಹಠಾತ್ ನೀರಿನ ಮಟ್ಟ ಉಲ್ಬಣವಾಗಿ ಅವರನ್ನು ಮುಳುಗಿಸಿದೆ. ನೀರಿನ ಮಟ್ಟವು ಸುಮಾರು ಮೂರು ಮೀಟರ್‌ಗಳವರೆಗೆ ಏರಿಬಿಟಿತ್ತು ” ಎಂದು ಹನ್ಯನ್ ತಿಳಿಸಿದ್ದಾರೆ.
ಈ ದುರ್ಘಟನೆಯ ಬಲಿಪಶುಗಳು ನಾಲ್ಕರಿಂದ 40 ವರ್ಷ ವಯಸ್ಸಿನವರಾಗಿದ್ದು, ಏಳು ಶವಗಳು ಅಪಘಾತದ ಸ್ಥಳದಿಂದ ಸುಮಾರು 24 ಕಿಲೋಮೀಟರ್ (15 ಮೈಲುಗಳು) ದೂರದಲ್ಲಿ ಪತ್ತೆಯಾಗಿವೆ ಎಂದು ಹನ್ಯನ್ ಹೇಳಿದ್ದಾರೆ.
ಉಳಿದ ಮೂವರು ಸಂತ್ರಸ್ತರಿಗಾಗಿ ನಾವು ಶೋಧವನ್ನು ತೀವ್ರಗೊಳಿಸಿದ್ದೇವೆ. ವಿವಿಧ ಏಜೆನ್ಸಿಗಳ 210 ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದ್ದಾರೆ.

Share