ಮಹಿಳಾ ಕೈದಿಗಳನ್ನು ಸಮಾಜವು ತನ್ನದಾಗಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕು: ಮುಖ್ಯ ನ್ಯಾಯಮೂರ್ತಿ

272
Share

ಜೈಲಿನಲ್ಲಿರುವ ಮಹಿಳೆಯರು ಆಗಾಗ್ಗೆ ಗಂಭೀರವಾದ ಪೂರ್ವಾಗ್ರಹಗಳು, ಕಳಂಕ ಮತ್ತು ತಾರತಮ್ಯವನ್ನು ಎದುರಿಸಬೇಕಾಗುತ್ತದೆ, ಇದು ಅವರ ಪುನರ್ವಸತಿ ಕಠಿಣ ಸವಾಲಾಗಿ ಪರಿಣಮಿಸುತ್ತದೆ ಎಂದು ಭಾರತದ ಮುಖ್ಯ ನ್ಯಾಯಾಧೀಶರಾದ ಎನ್ ವಿ ರಮಣ ಬುಧವಾರ ಮಹಿಳಾ ಕೈದಿಗಳ ಸಂಕಷ್ಟವನ್ನು ಗಮನಿಸಿ ಹೇಳಿದ್ದಾರೆ.
” ಮಹಿಳಾ ಕೈದಿಗಳಿಗೆ ಪುರುಷರೊಂದಿಗೆ ಸಮಾನವಾಗಿ ಸಮಾಜದಲ್ಲಿ ಪರಿಣಾಮಕಾರಿಯಾಗಿ ಪುನರ್ಮಿಲನಗೊಳ್ಳಲು ಅನುವು ಮಾಡಿಕೊಡುವ ಕಾರ್ಯಕ್ರಮಗಳು ಮತ್ತು ಸೇವೆಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು. ನಲ್ಸಾ (ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ) ದ 32 ನೇ ಕೇಂದ್ರ ಪ್ರಾಧಿಕಾರದ ಸಭೆಯಲ್ಲಿ ಮುಖ್ಯ ನ್ಯಾಯಾಧೀಶರ ಮುಖ್ಯ ಭಾಷಣದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಮಹಿಳಾ ಕೈದಿಗಳ ಪುನರ್ವಸತಿ ಕುರಿತ ವರದಿಯನ್ನು ನೋಡಿ ಅವರು ಸಂತೋಷ ವ್ಯಕ್ತಪಡಿಸಿ, ಇದು ಚರ್ಚೆಯ ಕಾರ್ಯಸೂಚಿಯಲ್ಲಿ ಒಂದಾಗಿದೆ. ಮುಖ್ಯ ನ್ಯಾಯಾಧೀಶರು ಮಹಿಳಾ ಕೈದಿಗಳು ಸಮಾಜದಲ್ಲಿ ಬೆರೆಯುವುದಕ್ಕಾಗಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದರು. ಶಿಕ್ಷಣ ಮತ್ತು ವೃತ್ತಿಪರ ತರಬೇತಿಗೆ ತಾರತಮ್ಯವಿಲ್ಲದ ಪ್ರವೇಶ, ಘನತೆ ಮತ್ತು ಸಂಭಾವನೆಯೊಂದಿಗೆ ಕೆಲಸಕ್ಕೆ ಅನುವು ಮಾಡಿಕೊಡಬೇಕೆಂದು ಸೂಚಿಸಿದರು.
ಸೆಪ್ಟೆಂಬರ್ 11 ರಂದು ಆಯೋಜಿಸಲಾದ ಲೋಕ ಅದಾಲತ್ ನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯವನ್ನು ಶ್ಲಾಘಿಸಿದ ಮುಖ್ಯ ನ್ಯಾಯಾಧೀಶರು, ದೇಶದ 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 29.5 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಕ್ಕಾಗಿ ಕಾನೂನು ಸೇವೆಗಳ ಅಧಿಕಾರಿಗಳನ್ನು ಅಭಿನಂದಿಸಿದರು.
ಮುಖ್ಯ ನ್ಯಾಯಮೂರ್ತಿ ರಮಣ ಅವರು “ನ್ಯಾಯ ಪಡೆಯುವ ದಾರಿ ” ಹೆಚ್ಚಿಸಲು ಒತ್ತು ನೀಡಿದರು ಮತ್ತು ನ್ಯಾಯ ಪಡೆಯುವುದನ್ನು ಹೆಚ್ಚಿಸುವ ಬಗ್ಗೆ ಹೆಚ್ಚು ಮಾತನಾಡಲಾಗಿದ್ದರೂ, ಎಲ್ಲಾ ವರ್ಗದ ಜನರಿಗೆ ನ್ಯಾಯಕ್ಕಾಗಿ ಪರಿಣಾಮಕಾರಿ ಮತ್ತು ಪ್ರಮುಖ ದಾರಿಯನ್ನು ಹೇಗೆ ಖಾತ್ರಿಪಡಿಸಿಕೊಳ್ಳುವುದು ಮತ್ತು ಹೇಗೆ ಈ ಅಂತರವನ್ನು ಕಡಿಮೆ ಮಾಡುವುದು ಎನ್ನುವುದರ ಬಗ್ಗೆ ಮಾತನಾಡಿದರು.
ನಲ್ಸಾ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಯು ಯು ಲಲಿತ್ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಜಸ್ಟೀಸ್ ಲಲಿತ್ ಜೈಲುಗಳಲ್ಲಿರುವ ಸಮಸ್ಯೆಯನ್ನು ಎತ್ತಿ ತೋರಿಸಿದರು ಮತ್ತು ಅಂತಹದಕ್ಕೆ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಸಾಂಕ್ರಾಮಿಕ ನಿರ್ಬಂಧಗಳಿಂದಾಗಿ, ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ಬಾಲಾಪರಾಧಿ ಮನೆಗಳು, ವೀಕ್ಷಣಾ ಮನೆಗಳು ಮತ್ತು ಮಕ್ಕಳ ಮನೆಗಳಲ್ಲಿ ವಾಸಿಸುವ ಮಕ್ಕಳು ಊಹಿಸಲಾಗದ ಪರಿಸ್ಥಿತಿಯಲ್ಲಿದ್ದಾರೆ, ಇದರಲ್ಲಿ ವಿವಿಧ ವಯಸ್ಸಿನ ಮಕ್ಕಳಿಗೆ ಮೂಲ ಶಿಕ್ಷಣವನ್ನು ನೀಡಲು ಕೇವಲ ಒಂದು ವೀಡಿಯೋ ಮಾನಿಟರ್ ಸಾಕಾಗುವುದಿಲ್ಲ ಎಂದು ಅವರು ಇರುವ ತೊಂಫರೆಯತ್ತ ಗಮನಸೆಳೆದರು.
ನ್ಯಾಯಮೂರ್ತಿ ಲಲಿತ್ ಕಾನೂನು ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸೇವೆಗಳನ್ನು ಬಳಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು, ಅವರು ಅಂತರವನ್ನು ಕಡಿಮೆ ಮಾಡಬಹುದು ಮತ್ತು ದೇಶಾದ್ಯಂತ ಪ್ರತಿ ಜಿಲ್ಲೆಯ ಮೂರು ಅಥವಾ ನಾಲ್ಕು ತಾಲೂಕುಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದ ತಳಮಟ್ಟದಲ್ಲಿ ಕಾನೂನು ಅನುಕೂಲತೆ ತಲುಪಬಹುದು ಎಂದು ಹೇಳಿದ್ದಾರೆ.


Share