ಮೂಡ-ಬಡ್ಡಿ ರಹಿತವಾಗಿ ಹಣ ಪಾವತಿಸಲು ಕಾಲಾವಕಾಶ

304
Share

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಇ – ಹರಾಜು ಪ್ರಕಟಣೆ ಸಂಖ್ಯೆ -04 / 2020-21 ದಿನಾಂಕ : 29.10.2020 ಹಾಗೂ ಪ್ರಕಟಣೆ ಸಂಖ್ಯೆ : 05 / 2020-21 ದಿನಾಂಕ : 02.03.2021 ರಲ್ಲಿ ನಿವೇಶನಗಳನ್ನು ಇ – ಹರಾಜುಗಳ ಮೂಲಕ ವಿಲೇ ಮಾಡಿದ್ದು , ಬಿಡ್ಡುದಾರರಿಗೆ ಹರಾಜು ಸ್ಥಿರೀಕರಣ ಪತ್ರವನ್ನು ಕಳುಹಿಸಲಾಗಿರುತ್ತದೆ . ಬಿಡ್ಡುದಾರರಿಗೆ ಶೇಕಡ 75 ಭಾಗ ಹಣವನ್ನು ಬಡ್ಡಿ ರಹಿತವಾಗಿ ಪಾವತಿಸಲು 45 ದಿನಗಳ ಕಾಲಾವಕಾಶವಿರುತ್ತದೆ . ನಂತರ 90 ದಿನಗಳು ಮತ್ತು 30 ದಿನಗಳು ಬಡ್ಡಿಯೊಂದಿಗೆ ಪಾವತಿಸಲು ಕಾಲಾವಕಾಶವಿರುತ್ತದೆ . ಇ – ಹರಾಜಿನಲ್ಲಿ ಖರೀದಿಸಲಾದ ನಿವೇಶನಗಳ ಬಾಕಿ ಮೌಲ್ಯ ಪಾವತಿಸಲು ಕೋರೊನ ವೈರಸ್ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಸರ್ಕಾರವು ದಿನಾಂಕ : 28.04.2021 ರಿಂದ 14.06.2021 ರವರೆಗೆ 48 ದಿನಗಳ ಲಾಕ್ ಡೌನ್ ವಿಧಿಸಿದ್ದು , ಬಿಡ್ಡುದಾರರು ಹಣಕಾಸು ಸಂಸ್ಥೆ ಹಾಗೂ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯಗಳನ್ನು ಪಡೆಯಲು ಆಗದೇ ವಿಶೇಷ ಪರಿಸ್ಥಿತಿ ಎದುರಾಗಿರುವುದರಿಂದ ನಿವೇಶನದ ಶೇಕಡ 75 ಭಾಗ ಹಣ ಪಾವತಿಸಲು ಲಾಕ್ಡೌನ್ ಅವಧಿ ದಿನಗಳ ( ಬಡ್ಡಿ ರಹಿತವಾಗಿ ) ಕಾಲಾವಕಾಶವನ್ನು ವಿಸ್ತರಿಸಲಾಗಿರುತ್ತದೆ . 48 ಈಗ ಮೈಸೂರಿನಲ್ಲಿ ದಿನಾಂಕ : 14.06.2021 ರಿಂದ 05.07.2021 ರವರೆಗೆ ಹೆಚ್ಚುವರಿ ಲಾಕ್‌ಡೌನ್ ವಿಸ್ತರಿಸಿರುವುದರಿಂದ ಸರ್ವಾಜನಿಕರ ಮನವಿಯ ಮೇರೆಗೆ ಈ ಲಾಕ್‌ಡೌನ್ ಅವಧಿಯ ಬಡ್ಡಿ ರಹಿತವಾಗಿ ಹಣ ಪಾವತಿಸಲು ಕಾಲಾವಕಾಶ 21 ದಿನಗಳ ( ಬಡ್ಡಿ ರಹಿತವಾಗಿ ) ಹೆಚ್ಚುವರಿಯಾಗಿ ಕಾಲಾವಕಾಶವನ್ನು ವಿಸ್ತರಿಸಲಾಗಿರುತ್ತದೆ . ಆದ್ದರಿಂದ ಕೋವಿಡ್ -19 ಲಾಕ್‌ಡೌನ್ ಸಂಬಂಧ ಹರಾಜಿನಲ್ಲಿ ಭಾಗವಹಿಸಿದ ಬಿಡ್ಡುದಾರರಿಗೆ ಶೇಕಡ 75 ಭಾಗ ಹಣ ಪಾವತಿಸಲು ಸರ್ಕಾರ ವಿಧಿಸಿರುವ ದಿನಾಂಕ : 28.04.2021 ರಿಂದ 14.06.2021 ರವರೆಗೆ 48 ದಿನಗಳ ಜೊತೆಗೆ ಹೆಚ್ಚುವರಿಯಾಗಿ ದಿನಾಂಕ : 14.06.2021 ರಿಂದ 05.07.2021 ರವರೆಗೆ 21 ದಿನಗಳ ಲಾಕ್‌ಡೌನ್ ವಿಸ್ತರಿಸಿರುವುದರಿಂದ ಕೋವಿಡ್ -19 ಅಸಾಧಾರಣ ಜಾಗತಿಕ ಪ್ರಕರಣವಾಗಿರುವುದರಿಂದ 21 ದಿನಗಳ ಹೆಚ್ಚುವರಿಯಾಗಿ ಕಾಲಾವಕಾಶವನ್ನು ವಿಸ್ತರಿಸಲಾಗಿರುತ್ತದೆ . ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಪ್ರಕಟಣೆ ತಿಳಿಸಿದೆೆ ಚಿತ್ರಕೃಪೆ ಪ್ರಜಾವಾಣಿ.


Share