ಮೈಸೂರಲ್ಲಿ-ವಿಶೇಷ ಕೈಮಗ್ಗ ಮೇಳ –

28
Share

 

ಜೆ ಎಸ್ ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ವಿಶೇಷ ಕೈಮಗ್ಗ ಮೇಳ – ಸಂಸ್ಕೃತಿ- ಹತ್ ಕರ್ಗ್ -2023 “ನನ್ನ ಕೈಮಗ್ಗ ನನ್ನ ಹೆಮ್ಮೆ”ಹಮ್ಮಿಕೊಳ್ಳಲಾಗಿದೆ

ಸಾಂಸ್ಕೃತಿಕ ನಗರಿ ಮೈಸೂರಿನ ನಾಗರಿಕರಿಗೊಂದು ಸುವರ್ಣ ಅವಕಾಶ ದಿನಾಂಕ 22-09-2023 ರಿಂದ 06-10-2023 ಜವಳಿ ಅಭಿವೃದ್ಧಿ ಆಯುಕ್ತರು ಕೈಮಗ್ಗ ಜವಳಿ ಮಂತ್ರಾಲಯ, ನವದೆಹಲಿ ಇವರ ಸಹಯೋಗದೊಂದಿಗೆ ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆ , ಬೆಂಗಳೂರು ಕರ್ನಾಟಕ ಸರಕಾರ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ ಕಾವೇರಿ ಹ್ಯಾಂಡ್ಲೂಮ್ಸ್ ಬೆಂಗಳೂರು ಮತ್ತು ಜೆ ಎಸ್ ಎಸ್ ಮೈಸೂರು ಅರ್ಬನ್ ಹಾತ್ ಇವರುಗಳ ಸಂಯುಕ್ತ ಆಶ್ರಯದಲ್ಲಿ “ವಿಶೇಷ ಕೈಮಗ್ಗ ಮೇಳ” – ಸಂಸ್ಕೃತಿ- ಹತ್ ಕರ್ಗ್ -2023 ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜೆ ಎಸ್ ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಏರ್ಪಡಿಸಲಾಗಿದೆ.
ವಿಶೇಷ ಕೈಮಗ್ಗ ಮೇಳ – ಸಂಸ್ಕೃತಿ- ಹತ್ ಕರ್ಗ್ -2023 :
ನೇಕಾರರು /ನೇಕಾರ ಸಹಕಾರ ಸಂಘಗಳು ತಯಾರು ಮಾಡುತ್ತಿರುವ ಕೈಮಗ್ಗ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆಯನ್ನು ಒದಗಿಸುವ ದೃಷ್ಟಿಯಿಂದ ಮತ್ತು ಕೈಮಗ್ಗ ಉತ್ಪನ್ನಗಳು ನಶಿಸಿ ಹೋಗದಂತೆ ಕಾಪಾಡಿಕೊಂಡು ಹೋಗಲು ಈ ಮೇಳವನ್ನು ಆಯೋಜನೆ ಮಾಡಿರುವುದು ಸರಕಾರದ ಮೂಲ ಉದ್ದೇಶವಾಗಿದೆ . ಈ ವೃತ್ತಿಯನ್ನು ಅವಲಂಬಿಸಿ ಜೀವನ ನಿರ್ವಹಣೆ ಮಾಡುತ್ತಿರುವ ನೇಕಾರರ ಕುಟುಂಬಗಳಿಗೆ ಒಂದೇ ಸೂರಿನಡಿಯಲ್ಲಿ ತಾವು ತಯಾರು ಮಾಡಿದ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ.
ವಿಶೇಷ ಕೈಮಗ್ಗ ಮೇಳ – ಸಂಸ್ಕೃತಿ- ಹತ್ ಕರ್ಗ್ -2023
ಈ ಮೇಳದಲ್ಲಿ ದೇಶದ ಸುಮಾರು 75ಕ್ಕೂ ಹೆಚ್ಚು ಕೈಮಗ್ಗ ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸಿರುವ ಉತ್ಪನ್ನಗಳು ಪ್ರದರ್ಶನ ಮತ್ತು ಮಾರಾಟ ಗೊಳ್ಳುತ್ತಿದೆ. ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಾದ ಚಿತ್ರದುರ್ಗ, ಹಾವೇರಿ ,ಚಾಮರಾಜನಗರ, ಮಂಡ್ಯ ,ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ,ಶಿವಮೊಗ್ಗ, ಚಿತ್ರದುರ್ಗ, ಗದಗ, ಬಾಗಲಕೋಟೆ ,ಗುಲ್ಬರ್ಗ ಇನ್ನೂ ಹಲವು ಜಿಲ್ಲೆಗಳ ಕೈಮಗ್ಗ ನೇಕಾರರು ತಯಾರಿಸಿದ ರೇಷ್ಮೆ ಹತ್ತಿ ಮತ್ತು ಉಣ್ಣೆ ಹಾಗೂ ವಿವಿಧ ಮಿಶ್ರಿತ ನೂಳುಗಳಿಂದ ತಯಾರಿಸಲಾಗ ಕೈಮಗ್ಗ ಉತ್ಪನ್ನಗಳನ್ನು ಇದರ ಜೊತೆಗೆ ನಮ್ಮ ದೇಶದ ಸುಮಾರು 15ಕ್ಕೂ ಹೆಚ್ಚು ರಾಜ್ಯಗಳ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ.

ಶೇಕಡಾ 20% ರಿಯಾಯಿತಿ ದರದಲ್ಲಿ ಕೈಮಗ್ಗ ನೇಕಾರರ/ ಸಹಕಾರ ಸಂಘಗಳಿಂದ ಉತ್ಪಾದಿಸಿದ ಉತ್ಪನ್ನಗಳು ನೇರವಾಗಿ ಗ್ರಾಹಕರಿಗೆ ಲಭ್ಯವಿದೆ.

ಮೇಳದಲ್ಲಿ ಪ್ರದರ್ಶನ ಗೊಳ್ಳುತ್ತಿರುವ ಉತ್ಪನ್ನಗಳು:

ನಮ್ಮ ರಾಜ್ಯದ ರೇಷ್ಮೆ ಸೀರೆ ಮೊಳಕಾಲ್ಮೂರು ಸೀರೆ ಇಳಕಲ್ ಸೀರೆ ಕಸೂತಿ ಸೀರೆ ತಮಿಳುನಾಡು ರಾಜ್ಯದ ಪರಿಶುದ್ಧ ಕಾಂಜಿವರಂ ಸೀರೆಗಳು, ಕೇರಳ ರಾಜ್ಯದ ಕೈಮಗ್ಗ ಉತ್ಪನ್ನಗಳು ,ಬಿಹಾರ್ ಮತ್ತು ಜಾರ್ಖಂಡ್ ರಾಜ್ಯದ ತಸ್ಸರ್ ಸೀರೆಗಳು ಪಶ್ಚಿಮ ಬಂಗಾಳದ ಕಾಂತಾ ಸೀರೆ ಬಲಚುರಿ ಸೀರೆ, ಭುಟಿಕ್ ಸೀರೆ ಕಾಟನ್ ಸೀರೆಗಳು ಉತ್ತರ ಪ್ರದೇಶ ರಾಜ್ಯದ ಬನಾರಸಿ ಸಿಲ್ಕ್ ಸೀರೆಗಳು ಚಿಕನ್ ಎಂಬ್ರಾಡರಿ ಸೀರೆಗಳು ಮಧ್ಯ ಪ್ರದೇಶದ ಚಂದೇರಿ ಮಹೇಶ್ವರಿ ಸಿಲ್ಕ್ ಸೀರೆಗಳು ಒರಿಸ್ಸಾ ರಾಜ್ಯದ ಸಂಬಲ್ಪುರಿ ಸೀರೆ ಇಕ್ಕತ್ ಸೀರೆಗಳು ಬೋಂಕಾಯಿ ಸೀರೆ ಕಾಶ್ಮೀರದ ಪಶ್ಮೀನಾ ಶಾಲ್ ಗಳು, ಆಂಧ್ರ ಪ್ರದೇಶ ರಾಜ್ಯದ ಗೊದ್ವಲ್, ಕಲಮ್ಕಾರಿ ಸೀರೆಗಳು, ಪೋಚಂಪಲ್ಲಿ ಸೀರೆಗಳು ಗುಜರಾತ್ ರಾಜ್ಯದ ಪಟೋಲಾ ಸೀರೆಗಳು ವಿವಿಧ ರಾಜ್ಯಗಳ ಡ್ರೆಸ್ ಮೆಟೀರಿಯಲ್ ಗಳು ಹಾಗೂ ಕರಕುಶಲಕರ್ಮಿಗಳು ತಯಾರು ಮಾಡಿರುವ ಕರಕುಶಲ ವಸ್ತುಗಳು ಒಂದೇ ಸೂರಿನಡಿ ಮೈಸೂರಿನ ಜನತೆಗೆ ದೊರೆಯುತ್ತವೆ.

ಮೇಳದ ಉದ್ಘಾಟನೆಯು ದಿನಾಂಕ 22-09-2023 – ಶುಕ್ರವಾರ -ಸಂಜೆ 4 .00 ನೆರವೇರಲಿದೆ.

ಮೈಸೂರಿನ ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದ ಜನತೆ ವಸ್ತ್ರ ಉತ್ಸವಕ್ಕೆ ಭೇಟಿ ನೀಡಿ ಕೈಮಗ್ಗ ಉತ್ಪನ್ನಗಳನ್ನು ಮತ್ತು ಕರಕುಶಲ ವಸ್ತುಗಳನ್ನು ಖರೀದಿಸಿ ಕೈಮಗ್ಗ ಮತ್ತು ಕರಕುಶಲ ಉದ್ದಿಮೆಯನ್ನು ಉತ್ತೇಜಿಸಲು ಸಾರ್ವಜನಿಕರಲ್ಲಿ ವಿನಂತಿಸಿದೆ.
ಸ್ಥಳ: ಜೆ ಎಸ್ ಎಸ್ ಮೈಸೂರು ಅರ್ಬನ್ ಹಾತ್, . ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಬಹುದಾಗಿದೆ ಎಂದು ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಶ್ರೀ ಜನಾರ್ದನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ದೂರವಾಣಿ: 9686677232, 9844550845,8197583261.

ಶ್ರೀ ಜನಾರ್ದನ
ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಮೈಸೂರು.

 


Share