ಮೈಸೂರು;ವಿಶ್ವ ಮಧುಮೇಹ ದಿನಾಚರಣೆ: ವಾಕಥಾನ್*

212
Share

ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ವಾಕಥಾನ್*

ಮೈಸೂರು,  ನಗರದ ವಿವಿ ಮೊಹಲ್ಲದಲ್ಲಿರುವ ನ್ಯೂ ಡಯಾಕೇರ್ ಸೆಂಟರ್ / ನವಾಯು ಕೇರ್ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ನವಂಬರ್ 13, ಭಾನುವಾರರಂದು ಬೆಳಿಗ್ಗೆ 7.30 ಗಂಟೆಗೆ ಸಾರ್ವಜನಿಕರಿಗಾಗಿ ‘ಮಧುಮೇಹದ ತಡೆಗೆ ನಮ್ಮ ನಡಿಗೆ – ಡಯಾಬಿಟಿಸ್ ವಾಕಥಾನ್ ‘ನನ್ನು ಆಯೋಜಿಲಾಗಿತ್ತು. ನ್ಯೂ ಡಯಾಕೇರ್ ಸೆಂಟರ್ ನ ಮುಂಭಾಗದಿಂದ ಆರಂಭಗೊಂಡ ವಾಕಥಾನ್ ಗೆ ಮೈಸೂರಿನ ಹೃದ್ರೋಗ ತಜ್ಞರಾದ ಡಾ. ರಾಜ್ ಗೋಪಾಲ್. J , ರಾಘವೇಂದ್ರ ಪ್ರಸಾದ್ , SBM ಮಂಜು, ಲಯನ್ ಸಿದ್ದೇಗೌಡ , ಜೆಎಸ್ಎಸ್ ನರ್ಸಿಂಗ್ ಕಾಲೇಜಿನ ಸುನಿಲ್ ಮೊದಲಾದ ಗಣ್ಯರು ಚಾಲನೆ ನೀಡಿದರು , ಒಂಟಿಕೊಪ್ಪಲ್ ದೇವಸ್ಥಾನದ ರಸ್ತೆಯಲ್ಲಿ ಸಾಗಿದ ವಾಕಥಾನ್ ಕಾಳಿದಾಸ ರಸ್ತೆಯ ಮೂಲಕ ಸಂಚರಿಸಿ, ಪಂಚವಟಿ ವೃತ್ತದ ಹತ್ತಿರ ಮಾನವ ಸರಪಳಿ ರೂಪಿಸಿ ನ್ಯೂ ಡಯಾಕೇರ್ ಸೆಂಟರ್ ನ ಬಳಿಕೊನೆಗೊಂಡಿತು. ನಂತರ ಸಂಸ್ಥೆಯಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.ಎಂದಿನಂತೆ ಸಂಸ್ಥೆಯು ಮಧುಮೇಹದ ಉತ್ತಮ ನಿಯಂತ್ರವುಳ್ಳವರನ್ನು ಮಧುಮೇಹದ ರಾಯಭಾರಿಗಳೆಂದು ಗುರುತಿಸಿ ಪ್ರಶಸ್ತಿ ಪತ್ರಗಳನ್ನು ಹಾಗೂ ಉಡುಗೊರೆಗಳನ್ನು ನೀಡಿ ಗೌರವಿಸಲಾಯಿತು. ಮುಖ್ಯಸ್ಥರಾದ ಡಾ.A R ರೇಣುಕಾಪ್ರಸಾದ್ ಹಾಗೂ ಡಾ. ನವ್ಯ ಪಿ ಮಾತನಾಡಿ ಮಧುಮೇಹದ ಹಲವು ವಿಚಾರಗಳನ್ನು ತಿಳಿಯಪಡಿಸಿದರು . ಸಂಸ್ಥೆಯ ಈ ಕಾರ್ಯವನ್ನು ಶ್ಲಾಘಿಸಿ ಮಾತನಾಡಿದ ರಾಘವೇಂದ್ರ ಪ್ರಸಾದ್ ಮಧುಮೇಹದ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿನ ಅವಶ್ಯಕತೆ ಇದ್ದು ಇಂತಹ ಇನ್ನಷ್ಟು ಕಾರ್ಯಕ್ರಮಗಳು ನಮ್ಮ ಸಮಾಜಕ್ಕೆ ಬೇಕಿದೆ ಲಯನ್ ಸಿದ್ದೇಗೌಡ ಮಾತನಾಡಿ ಸಂಸ್ಥೆಯ ಕಾರ್ಯವನ್ನು ಮೆಚ್ಚಿಕೊಂಡರು.ವಾಕಥಾನ್ ನಲ್ಲಿ JSS ನರ್ಸಿಂಗ್ ವಿದ್ಯಾರ್ಥಿಗಳು ಸೇರಿದಂತೆ 150ಕ್ಕೂ ಹೆಚ್ಚಿನ ಮಂದಿ ಭಾಗವಹಿಸಿ ಮಧುಮೇಹದ ಜಾಗೃತಿಗೆ ಸಾಕ್ಷಿಯಾದರು.R .J ಅವಿನಾಶ್ ಕಾರ್ಯಕ್ರಮವನ್ನು ಉತ್ತಮವಾಗಿ ನಿರೂಪಿಸಿದರು.ಕಾರ್ಯಕ್ರಮದಲ್ಲಿ V J ಮಿಂಚು, ಶಿವಕುಮಾರ್ ಉಪಸ್ಥಿತರಿದ್ದರು. ನವೆಂಬರ್ 14ರಂದು ಲಿವರ್ ಫೈಬ್ರೋಸ್ಕಾನ್/ ಥೈರಾಯ್ಡ್ /HbA1c ಸ್ಕ್ರೀನಿಂಗ್ ತಪಾಸಣಾ ವಿರುತ್ತದೆ ಎಂದು ಶಿಬಿರದ ನೋಂದಣಿಗಾಗಿ ಸಂಪರ್ಕಿಸಿ-0821 4252800/63628 43070/9663838800.


Share