ಮೈಸೂರು-ಆಗಸ್ಟ್ 5ರಂದು ವಿದ್ಯುತ್ ನಿಲುಗಡೆ

712
Share

 

 

ಆಗಸ್ಟ್ 5ರಂದು ವಿದ್ಯುತ್ ನಿಲುಗಡೆ
ಮೈಸೂರು, – ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ 66/11 ಕೆ.ವಿ.  ಎಫ್.ಟಿ.ಎಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ             11 ಕೆ.ವಿ. ವಾಟರ್ ವಕ್ರ್ಸ್ ಫೀಡರ್‍ನಲ್ಲಿ ಆಗಸ್ಟ್ 5ರಂದು ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 05:30 ಘಂಟೆಯವರೆಗೆ ಧನ್ವಂತರಿ ರಸ್ತೆ, ದೇವರಾಜ ಮಾರುಕಟ್ಟೆ, ಸೀಬಯ್ಯಾ ರಸ್ತೆ, ಕೊತ್ವಾಲ್ ರಾಮಯ್ಯ ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ರಾಜಕಮಲ್ ಟಾಕೀಸ್ ಹತ್ತಿರ, ಹಾಂಕಾಂಗ್ ಬಜಾರ್, ಶಿವರಾಂ ಪೇಟೆ, ಸಯ್ಯಾಜಿರಾವ್ ರಸ್ತೆ, ಮನ್ನಾರ್ಸ್ ಮಾರುಕಟ್ಟೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ನ.ರಾ.ಮೊಹಲ್ಲಾ ವಿಭಾಗದ ಕಾರ್ಯ ಮತ್ತು ಪಾಲನೆ, ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


Share