ಮೈಸೂರು ಕಲಾವಿದರ ಒಕ್ಕೂಟದಿ೦ದ,ಎಸ್‌.ಪಿಬಿ ಗೆ ನುಡಿನಮನ

325
Share

ಮೈಸೂರು ಕಲಾವಿದರ ಒಕ್ಕೂಟದ ವತಿಯಿಂದ ಚಾಮುಂಡಿಪುರಂ ವೃತ್ತದ ತಗಡೂರು ರಾಮಚಂದ್ರರಾವ್ ಉದ್ಯಾನದಲ್ಲಿ “ಎಸ್‌.ಪಿಬಿ ನುಡಿನಮನ” ಎಸ್.ಪಿ ಬಾಲಸುಬ್ರಹ್ಮಣ್ಯಂ ರವರಿಗೆ ಮೈಸೂರು ಕಲಾವಿದರ ನುಡಿನಮನ ಮೂಲಕ ಶ್ರದ್ದಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು,
ಡಿಟಿಎಸ್ ಫೌಂಡೇಷನ್ ಅಧ್ಯಕ್ಷರಾದ ಡಿಟಿ ಪ್ರಕಾಶ್
ಎಸ್.ಪಿಬಿ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು
ನಂತರ ಅವರು ಮಾತನಾಡಿ ‘ಎಸ್‌ಪಿಬಿರವರು 14 ಭಾಷೆಗಳಲ್ಲಿ ಸರಿಸುಮಾರು 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇವರು ಹಾಡಿರುವ ಹಾಡುಗಳು ಇಂದಿಗೂ ಅವಿಸ್ಮರಣೀಯ. ಮನುಷ್ಯ ದುಃಖದಲ್ಲಿದ್ದರೂ ಸಹ ಇವರ ಹಾಡುಗಳನ್ನು ಕೇಳುತ್ತಿದ್ದರೆ ಎಲ್ಲಾ ಮರೆತು ಹೋಗುತ್ತದೆ. ಅವರ ಮಗುವಿನಂತ ಮನಸ್ಸು ಹಾಗೂ ಅವರ ಹಾಡುಗಾರಿಕೆಗೆ ಎಂಥವರು ಮನಸೋಲಲೇಬೇಕು ಎಂದರು. ಸಂದರ್ಶನದ ವೇಳೆಯಲ್ಲಿ ಎಸ್ ಪಿ ಬಿ ರವರು ನನ್ನ ಮುಂದಿನ ಜನ್ಮ ಇದ್ದರೆ ನಾನು ಕರ್ನಾಟಕದಲ್ಲಿ ಜನಿಸಬೇಕು ಎಂದು ಹೇಳಿದ್ದಾರೆ. ಇಂತಹ ಮಹನೀಯರು ಮತ್ತೊಮ್ಮೆ ಹುಟ್ಟಿ ಬರಲಿ’ ಎಂದು ಮತನಾಡಿದರು.

ನಂತರ ಮಾತನಾಡಿದ ವಿದ್ಯಾರಣ್ಯಪುರಂ ವೃತ್ತ ನಿರೀಕ್ಷಕರಾದ ಮಂಜುನಾಥ್ ಮಾತನಾಡಿ
ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಹಾಡುಗಳ ಧ್ವನಿ ಸಜಸ್ರಾರು ನಟರಿಗೆ ಹೋಲುವ ಮಹಾಧ್ವನಿಯಾಗಿತ್ತು, ಆಕಾಶವಾಣಿ ದೂರದರ್ಶನದಲ್ಲಿ ಎಸ್.ಪಿಬಿ ಹಾಡಿರುವ ಕನ್ನಡಗೀತೆಗಳು
ಪ್ರಸಾರವಾದಾಗ ಕೇಳುಗರ ಭಾಷಾಭಿಮಾನ ಹೆಚ್ಚಿಸುತ್ತಿತ್ತು, ರಜನಿಕಾಂತ್ ಡಾ.ವಿಷ್ಣುವರ್ಧನ ಚಿರಂಜೀವಿ ಸೇರಿದಂತೆ ಹೆಸರಾಂತ ನಟರ ಚಿತ್ರಗಳಲ್ಲಿ ಎಸ್.ಪಿಬಿ ಹಾಡಿದ್ದರೇ ಚಿತ್ರಪ್ರದರ್ಶನ ಕಳೆಕಟ್ಟುತ್ತಿದ್ದವು

ನಂತರ ಕ ಮಾತನಾಡಿದ ಯುವ ಮುಖಂಡರಾದ ಎನ್ಎಂ ನವೀನ್ ಕುಮಾರ್
ಎರಡು ದಶಕಗಳ ಹಿಂದೆ
ಟಿವಿ ವಾಹಿನಿಗಳು ಸಣ್ಣಮಕ್ಕಳು
ಹಾಡುವ ಕಾರ್ಯಕ್ರಮ ಪ್ರಾರಂಭಿಸಿದ್ದೆ ಎಸ್.ಪಿಬಿ ರವರ ಪರಿಕಲ್ಪನೆಯಿಂದ, ದೇಶದಲ್ಲಿ ಇಂದಿಗೆ ಲಕ್ಷಂತಾರ ಮಕ್ಕಳು ಸಣ್ಣಪುಟ್ಟ ವಯಸ್ಸಿನಲ್ಲೆ ಸಂಗೀತಾಸಕ್ತಿ ಬೆಳಸಿಕೊಂಡರು, ಇಂದಿಗೆ 40ಸಾವಿರ ಹಾಡುಗಳನ್ನು ಹಾಡಿರುವ ಎಸ್.ಪಿಬಿ ಗನ್ನಿಸ್ ರೆಕಾರ್ಡ್ ನಿರ್ಮಿಸಿದ್ದಾರೆ ಇವರಿಗೆ ಭಾರತರತ್ನ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರ ಪರಿಗಣಿಸಬೇಕು ಎಂದರು
ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ ಡಿಟಿ ಪ್ರಕಾಶ್, ಬಸ್ಸಿಗೆ ವಿದ್ಯಾರಣ್ಯಪುರಂ ವೃತ್ತಿ ನಿರೀಕ್ಷಕರಾದ ಮಂಜುನಾಥ್ ,ಯುವ ಮುಖಂಡರಾದ ಎನ್ಎಂ ನವೀನ್ ಕುಮಾರ್ , ಮಾಜಿ ನಗರಪಾಲಿಕೆ ಸದಸ್ಯರಾದ ಮಾಡಬೇಕು ಎಂಡಿ ಪಾರ್ಥ ಸಾರಥಿ, ಸುನೀಲ್ ಕುಮಾರ್, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾದ ಬಸವರಾಜ ಬಸಪ್ಪ ,ಉದ್ಯಮಿ ಅಪೂರ್ವ ಸುರೇಶ್ ,ಕಲಾವಿದರಾದ ರಾಘವೇಂದ್ರ ಪ್ರಸಾದ್ ,ಎಂ ಪಿ ವರ್ಷ , ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ ,ಕಡಕೊಳ ಜಗದೀಶ್, ಯೋಗೇಶ್ ನಾಯ್ಡು,ವಿನಯ್ ಕಣಗಾಲ್ ,ನವೀನ್ ಕೆಂಪಿ,ಸುಚೀಂದ್ರ,ಪ್ರಶಾಂತ್ , ಕಲಾವಿದರಾದ ಮೈಕ್ ಚಂದ್ರು, ಪ್ರಸನ್ನ ಕುಮಾರ್ , ಹಾಗೂ ಇನ್ನಿತರರು ಹಾಜರಿದ್ದರು


Share