ಮೈಸೂರು ಕೆಆರ್ ಕ್ಷೇತ್ರದ ಶಾಸಕರ ಭರವಸೆ

212
Share

ಮೈಸೂರು-ಕೃಷ್ಣರಾಜ ಕ್ಷೇತ್ರದ ಶಾಸಕರಾದ ಶ್ರೀವತ್ಸರವರು ಇಂದು ಅವರ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಶಾಲಾ ಶಿಕ್ಷಣ ಇಲಾಖೆಯ ಸಿಟಿ ಇ, ಡಯಟ್, ಮೈಸೂರು ಗ್ರಾಮಾಂತರ ಕ್ಷೇತ್ರ, ಶಿಕ್ಷಣಾಧಿಕಾರಿಗಳ ಕಚೇರಿ, ಮಹಿಳಾ ಸರ್ಕಾರಿ ಪ್ರಶಿಕ್ಷಿಣ ಸಂಸ್ಥೆ ವ್ಯಾಪ್ತಿಯ ಬಲ್ಲಾಳ ವೃತ್ತದ ಬಳಿ ಇರುವ ಕಟ್ಟಡ ಹಾಗೂ ಗಾಡಿ ಚೌಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಅಲ್ಲಿಯ ಹಳೆಯ ವಿದ್ಯಾರ್ಥಿ ಹಾಲಿ ವೈದ್ಯರಾಗಿ ಅಮೆರಿಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾಕ್ಟರ್ ಸಚ್ಚಿದಾನಂದಮೂರ್ತಿಯವರು ಕಟ್ಟಿಸಿ ಕೊಟ್ಟಿರುವ ಶಾಲಾ ಕಟ್ಟಡ ಮತ್ತು ಸಭಾಂಗಣ ಇವುಗಳಿಗೆ ಭೇಟಿಕೊಟ್ಟು ವೀಕ್ಷಣೆ ಮಾಡಿ ಸಂಬಂಧಪಟ್ಟ ಅಧಿಕಾರಿ ವರ್ಗದವರಿಂದ ಅಭಿವೃದ್ಧಿಯ ವಿಚಾರವಾಗಿ ಚರ್ಚಿಸಿ ಮನವಿಯನ್ನು ಸ್ವೀಕರಿಸಿ ನನ್ನ ವ್ಯಾಪ್ತಿಗೆ ಒಳಪಡುವ ಕಾರ್ಯಗಳನ್ನು ನೆರವೇರಿಸಿ ಕೊಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಿಟಿಇ ಪ್ರಾಂಶುಲರಾದ ಗೀತಾಂಬ, ರೀಡರ್ ರವರಾದ ರುದ್ರಮನಿ, ಡಯಟ್ ಪ್ರಾಂಶುಪಾಲರಾದ, ನಾಗರಾಜಯ್ಯ, ಮಹಾರಾಣಿ ಮಹಿಳಾ ಪ್ರಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಗಾಯಿತ್ರಿ, ಮೈಸೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿವೇಕಾನಂದ, ಶಿಕ್ಷಣಾಧಿಕಾರಿಗಳಾದ ಉದಯ್ ಕುಮಾರ್, ಸ್ವಾಮಿ, ರಾಮಚಂದ್ರ , ಸರ್ಕಾರಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ರೇವಣ್ಣಹಾಗೂ ಸಂಬಂಧಪಟ್ಟ ಅಧಿಕಾರಿ ವೃಂದದವರು ಹಾಜರಿದ್ದರು


Share